ಹಣದುಬ್ಬರದ ಸವಾಲಿನ ನಡುವೆಯೂ ಆರ್ಥಿಕತೆ ಸದೃಢ


Team Udayavani, Jun 23, 2022, 10:10 AM IST

ಹಣದುಬ್ಬರದ ಸವಾಲಿನ ನಡುವೆಯೂ ಆರ್ಥಿಕತೆ ಸದೃಢ

ಹಣದುಬ್ಬರದ ನಿಯಂತ್ರಣದ ಅತ್ಯಂತ ಪ್ರಭಾವಿ ಅಸ್ತ್ರವೆಂದರೆ ಆರ್‌ಬಿಐನ ಹಣಕಾಸು ನೀತಿ ಪರಿಷ್ಕರಣೆ; ಸಾಲ ನಿಯಂತ್ರಣದ ಕ್ರಮವಾದ ಬಡ್ಡಿದರವನ್ನು ಹೆಚ್ಚಿಸುವುದು, ಮೀಸಲು ಅನುಪಾತವನ್ನು ಹೆಚ್ಚಿಸುವುದಾಗಿದೆ. ಇದರಿಂದಾಗಿ ಹಣದ ಪೂರೈಕೆ ಕಡಿಮೆಗೊಳ್ಳುವುದರಿಂದ ಸಮಗ್ರ ಬೇಡಿಕೆ ಕಡಿಮೆಯಾಗಿ ಬೆಲೆ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ.

ಹಣದುಬ್ಬರ ಎಂಬುದು ವಿಶ್ವವ್ಯಾಪಿ ವಿದ್ಯಮಾನವಾಗಿದೆ ಮತ್ತು ಆರ್ಥಿಕತೆಯ ಕೇಂದ್ರಬಿಂದುವಾಗಿದೆ. ಜನಸಾಮಾನ್ಯರ ದೃಷ್ಟಿಯಲ್ಲಿ ಬೆಲೆಗಳು ನಿರಂತರವಾಗಿ ಏರುತ್ತಿರುವ ಮತ್ತು ಹಣದ ಮೌಲ್ಯ ಕುಸಿಯುತ್ತಿರುವ ಸನ್ನಿವೇಶವಾಗಿರುತ್ತದೆ. ಇದರಿಂದಾಗಿ ಸಾಮಾಜಿಕ ಅನ್ಯಾಯ, ಆರ್ಥಿಕ ಅಸಮಾನತೆಯಿಂದ ಸಾಮಾಜಿಕ ಶಾಂತಿಗೆ ಭಂಗ ಉಂಟಾಗುತ್ತದೆ. ಕಳ್ಳ ದಾಸ್ತಾನು, ಕಾಳಸಂತೆ ಮಾರಾಟ, ಭ್ರಷ್ಟಾಚಾರ, ಅನೈತಿಕ ಚಟುವಟಿಕೆಗಳು ಹೆಚ್ಚುತ್ತವೆ. ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮಗಳು ಬೀರಿದ ಮತ್ತು ರಾಜಕೀಯ ಸ್ಥಿತ್ಯಂತರಗಳಿಗೂ ಈ ಹಣದುಬ್ಬರ ಸಮಸ್ಯೆ ಕಾರಣವಾದ ನಿದರ್ಶನಗಳೂ ಇವೆ.

ಹಣದುಬ್ಬರವನ್ನು ಅಲ್ಪಾವಧಿಯಲ್ಲಿ ತಡೆಗಟ್ಟುವುದು ಕಷ್ಟವಾಗುತ್ತದೆ. ಯುದ್ಧದ ಕಾರಣದಿಂದಾಗುವ ಬೆಲೆಯೇರಿಕೆಯನ್ನು ಯುದ್ಧ ಕಾಲದ ಹಣದುಬ್ಬರ ಎನ್ನಲಾಗುತ್ತದೆ. ರಷ್ಯಾ-ಉಕ್ರೇನ್‌ ಸಮರ ಮುಂದುವರಿದುದರ ಪರಿಣಾಮವಾಗಿ ಹಣದುಬ್ಬರವು ಜಗತ್ತಿನಾದ್ಯಂತ ಪಸರಿಸಿದೆ ಮತ್ತು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಆರ್ಥಿಕ ಯುದ್ಧವಾಗಿ ಪರಿಣಮಿಸಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಪೂರೈಕೆಯ ಸರಪಳಿಯ ಸಮಸ್ಯೆಯಿಂದ ಹಿಡಿದು ದಿನವೂ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಆರ್ಥಿಕ ಬೆಳವಣಿಗೆ ಹಣದುಬ್ಬರ ಹಾಗೂ ಹಣಕಾಸಿನ ಸಮತೋಲನವನ್ನು ನಿಭಾಯಿಸುವುದು ಯಾವುದೇ ಅರ್ಥವ್ಯವಸ್ಥೆಗೆ ಸವಾಲಿನ ಕೆಲಸ. ಪ್ರಸಕ್ತ ವರ್ಷದಲ್ಲಿ ದೇಶ ಉನ್ನತ ಬೆಳವಣಿಗೆಯ ನಿರ್ವಹಣೆ, ಹಣದುಬ್ಬರದ ನಿಯಂತ್ರಣ, ಹಣಕಾಸು ಸಮಸ್ಯೆಗಳಿಗೆ ಸ್ಪಂದನೆ, ಭಾರತೀಯ ರೂಪಾಯಿಯ ವಿದೇಶೀ ಮೌಲ್ಯದ ಯಥಾಸ್ಥಿತಿ ಕಾಪಾಡುವ ಗುರುತರ ಹೊಣೆಗಳನ್ನು ನಿರ್ವಹಿಸಬೇಕಾಗಿದೆ.

ಹಣದುಬ್ಬರದ ನಿರ್ವಹಣೆಯ ಜವಾಬ್ದಾರಿ
ಆರ್‌ಬಿಐನದ್ದಾಗಿದೆ. ಇದೀಗ ನಿಯಂತ್ರಣ ತಪ್ಪಿ ಕೈಮೀರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ರೆಪೋ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿದರ)ವನ್ನು ಕಳೆದ ತಿಂಗಳು 40 ಮೂಲಾಂಶ ಹೆಚ್ಚಳ ಮಾಡಿ ಪುನಃ ಜೂನ್‌ನಲ್ಲಿ ಎರಡನೆಯ ಬಾರಿಗೆ 50 ಮೂಲಾಂಶ ಹೆಚ್ಚಳ ಮಾಡಿದೆ.

ಪ್ರಸ್ತುತ ಶೇ. 4.9 ಆಗಿದೆ. ವರ್ಷಾಂತ್ಯಕ್ಕೆ ಶೇ. 6ರ ಗಡಿ ತಲುಪಬಹುದೆಂಬ ತೀರ್ಮಾನಕ್ಕೆ ಬರಬಹುದು. ಮಾರುಕಟ್ಟೆಗಳ ಮುನ್ನೋಟವನ್ನು ಪರಿಗಣಿಸಿ ಬಡ್ಡಿದರವನ್ನು ನಿಗದಿ ಪಡಿಸುವ ಸಾಧ್ಯತೆಯಿದೆ. ಅರ್ಥವ್ಯವಸ್ಥೆಯನ್ನು ಸಜ್ಜುಗೊಳಿಸಿ ಹಣದುಬ್ಬರವನ್ನು ನಿಯಂತ್ರಿಸಿ ಆರ್ಥಿಕತೆಯನ್ನು ಸರಿದೂಗಿಸುವ ಕೆಲಸಕ್ಕೆ ಆರ್‌ಬಿಐ ಮುಂದಾಗಿದೆ. ಸತತ ಮೂರು ತ್ತೈಮಾಸಿಕಗಳಲ್ಲಿ ಶೇ. 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದರೆ ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗದಿರುವುದಕ್ಕೆ ಆರ್‌ಬಿಐ ಸರಕಾರಕ್ಕೆ ಲಿಖೀತ ಕಾರಣವನ್ನು ತಿಳಿಸಬೇಕಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಯುದ್ಧ ಮತ್ತು ತೈಲಬೆಲೆ ಎಂಬುದು ಸರಕಾರಕ್ಕೆ ತಿಳಿಯದ ವಿಚಾರವಲ್ಲ. ಕೋವಿಡ್‌ ಸಮಯದಲ್ಲಿ ತಾಳಿದ್ದ ಹೊಂದಾಣಿಕೆ ಹಣಕಾಸು ನೀತಿಯನ್ನು
ಆರ್‌ಬಿಐ ಕೈಬಿಟ್ಟಿದೆ. ದ್ರವ್ಯತೆಯನ್ನು ಕಡಿಮೆ ಮಾಡಬೇಕು, ಹಣದುಬ್ಬರದ ವಿರುದ್ಧ ಹೋರಾಟವನ್ನು ಬಲಗೊಳಿಸಬೇಕು ಮತ್ತು ಕೋವಿಡ್‌ ಸಾಂಕ್ರಾಮಿಕದ ಮೊದಲಿನ ವಿತ್ತೀಯ ಸ್ಥಿತಿಗೆ ಮರಳಿ ಅಭಿವೃದ್ಧಿಯ ವೇಗವನ್ನು ಇನ್ನೂ ಚುರುಕುಗೊಳಿಸುವ ಇರಾದೆಯನ್ನು ಹೊಂದಿದೆ. ಹಣದುಬ್ಬರದ ಪ್ರಮಾಣವನ್ನು ಶೇ. 6 ರ ಚೌಕಟ್ಟಿನೊಳಗೆ ತರಲು ಗುರಿ ಹಾಕಿಕೊಂಡಿರುವುದಾಗಿ ಆರ್‌ಬಿಐ ಹೇಳಿದೆ. ಇದೀಗ ಗ್ರಾಹಕ ಸೂಚ್ಯಂಕ (ಸಿಪಿಐ) ಹಣದುಬ್ಬರ ಸತತ ಎಂಟನೆಯ ತಿಂಗಳೂ ಏರಿಕೆ ಕಂಡಿದ್ದು ಎಪ್ರಿಲ್‌ನಲ್ಲಿ ಕಳೆದ ಎಂಟು ವರ್ಷಗಳ ಗರಿಷ್ಠ ಮಟ್ಟ ಶೇ. 7.79ಕ್ಕೆ ತಲುಪಿ ಮೇ ತಿಂಗಳಿನಲ್ಲಿ ಶೇ. 7.04ಕ್ಕೆ ತಲುಪಿ ಸ್ವಲ್ಪ ಸುಧಾರಿಸಿದರೂ ಸಗಟು ಹಣದುಬ್ಬರದ ಪ್ರಮಾಣವು ದಾಖಲೆಯ ಶೇ. 15.88ಕ್ಕೆ ತಲುಪಿದೆ. ಸತತ 14 ತಿಂಗಳುಗಳಿಂದ ಎರಡಂಕಿ ದಾಟಿ ನಿಂತಿದೆ.

ರಾಷ್ಟ್ರದ ಆರ್ಥಿಕತೆಯ ಮೂಲ ಅಂಶಗಳು ಸದೃಢವಾಗಿರುವುದರಿಂದ ಪ್ರಸಕ್ತ ಸವಾಲುಗಳನ್ನು ಭಾರತ ಇತರೆಲ್ಲ ದೇಶಗಳಿಗಿಂತ ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದರೆ ತಪ್ಪಿಲ್ಲ. ಎಲ್ಲ ಅಡ್ಡಿ ಆತಂಕಗಳ ನಡುವೆಯೂ 2021-2022ರಲ್ಲಿ ವಿಶ್ವದ ದೊಡ್ಡ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತ ಕಂಡಿದೆ. ವರ್ಲ್ಡ್ ಬ್ಯಾಂಕ್‌, ಐಎಂಎಫ್ ಸೇರಿದಂತೆ ಎಲ್ಲ ಪ್ರಮುಖ ಜಾಗತಿಕ ಆರ್ಥಿಕ ಸಂಸ್ಥೆಗಳ ನಿರೀಕ್ಷೆಗೆ ಅನುಗುಣವಾಗಿಯೇ ಬೆಳವಣಿಗೆ ಕಂಡಿದೆ. 2021-2022ರ ಕಡೇ ತ್ತೈಮಾಸಿಕ ಬರುವಾಗ ಉಕ್ರೇನ್‌-ರಷ್ಯಾ ನಡುವಿನ ಯುದ್ಧ, ತೈಲ ಬೆಲೆ ಏರಿಕೆ, ಹಣದುಬ್ಬರದ ಪ್ರತಿಕೂಲ ಪರಿಣಾಮಗಳಿಂದ ಕೊಂಚ ಏರುಪೇರಾಗಿದೆ. ಆರ್ಥಿಕ ಬೆಳವಣಿಗೆ ಶೇ.8.9 ತಲುಪಬಹುದೆಂಬ ಅಂದಾಜು ಶೇ. 8.7ರಷ್ಟಾಯಿತು. ದೇಶದ ಆರ್ಥಿಕ ಬೆಳವಣಿಗೆ ಉತ್ತಮವಾಗಿದ್ದರೆ ಜನರ ತಲಾ ಆದಾಯ ವೃದ್ಧಿಯಾಗಿ ಜನಸಾಮಾನ್ಯರ ಜೀವನ ಸ್ಥಿತಿಯಲ್ಲಿ ಸುಧಾರಣೆಯನ್ನು ಪ್ರತಿಬಿಂಬಿಸುತ್ತದೆ. ಜಿಡಿಪಿ ವೃದ್ಧಿಯಾದರೆ ಉದ್ಯೋಗಾವಕಾಶಗಳು ಸುಧಾರಣೆಯಾಗಿ ಹೆಚ್ಚಾಗುತ್ತವೆ. ಜಿಡಿಪಿ ಬೆಳವಣಿಗೆಯಿಂದ ಸರಕಾರ ಮತ್ತು ಜನರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ. ನಿರುದ್ಯೋಗ ನಿವಾರಿಸಲು ಉತ್ಪಾದನ ವಲಯ, ಕೃಷಿ, ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡಲು ಅವಕಾಶವಾಗುತ್ತದೆ. ಅರ್ಥವ್ಯವಸ್ಥೆ ಚೇತರಿಸಿಕೊಂಡು ವೇಗದ ಬೆಳವಣಿಗೆಯನ್ನು ಕಂಡರೂ ಬೆಳವಣಿಗೆಯ ಪ್ರಮಾಣಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಯಾ ಗದಿರುವುದು ಗೋಚರವಾಗುತ್ತದೆ. ಇದು ಬಹುಕಾಲದಿಂದ ನಮ್ಮ ಆರ್ಥಿಕತೆಯಲ್ಲಿರುವ ಗೊಂದಲದ ವಿಚಾರ. ಆರ್‌ಬಿಐನ ಜೂನ್‌ ತಿಂಗಳ ವರದಿಯ ಪ್ರಕಾರ ದೇಶವು ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಸ್ಥಗಿತ ಹಣದುಬ್ಬರ (stagflaton) ಅಂದರೆ ಬೆಲೆಯೇರಿಕೆಯ ನಡುವೆ ನಿರುದ್ಯೋಗ ಪ್ರಮಾಣ ಎದುರಿಸುವ ಸನ್ನಿವೇಶಕ್ಕೆ ತಲುಪುವ ಪ್ರಮೇಯ ಬರುವುದಿಲ್ಲ ಎಂದಿದೆ.

ಪ್ರತೀ ಬಾರಿಯೂ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ ಎನ್ನುವಾಗ ಒಂದಿಲ್ಲೊಂದು ಬಲವಾದ ಪೆಟ್ಟು ಬೀಳುತ್ತದೆ. ರಷ್ಯಾ-ಉಕ್ರೇನ್‌ ಬಿಕ್ಕಟ್ಟು, ಕೋವಿಡ್‌ ಅಲೆಗಳ ಪರಿಣಾಮವು ಆರ್ಥಿಕತೆಯನ್ನು ಕಂಗೆಡಿಸಿದೆ. ಹೆಚ್ಚುತ್ತಿರುವ ಅನಿಶ್ಚಿತತೆಗಳನ್ನು ಗಮನದಲ್ಲಿರಿಸಿಕೊಂಡು ಆರ್‌ಬಿಐ ಹಾಲಿ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರವನ್ನು ಶೇ. 5.7ಕ್ಕೆ ಪರಿಷ್ಕರಿಸಿತ್ತು. ಇದೀಗ ಶೇ. 6.7ಕ್ಕೆ ಅಂದಾಜಿಸಿದೆ ಹಾಗೂ ಜಿಡಿಪಿ ಬೆಳ ವಣಿಗೆಯನ್ನು ಶೇ. 7.8 ರಿಂದ ಶೇ. 7.2ಕ್ಕೆ ಪರಿಷ್ಕರಿಸಿ ಮುಂದುವರಿಸಿದೆ. ಜಿಡಿಪಿ ಬೆಳವಣಿಗೆಯ ಅಂಕಿ ಅಂಶಗಳು ಬಹುತೇಕ ನಿರೀಕ್ಷೆಗೆ ಅನುಗುಣವಾಗಿದೆ.

ಹಣದುಬ್ಬರದ ನಿಯಂತ್ರಣದ ಅತ್ಯಂತ ಪ್ರಭಾವಿ ಅಸ್ತ್ರವೆಂದರೆ ಕೇಂದ್ರ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಪರಿಷ್ಕರಣೆ; ಸಾಲ ನಿಯಂತ್ರಣದ ಕ್ರಮವಾದ ಬಡ್ಡಿದರವನ್ನು ಹೆಚ್ಚಿಸುವುದು, ಮೀಸಲು ಅನುಪಾತವನ್ನು ಹೆಚ್ಚಿಸುವುದಾಗಿದೆ. ಇದರಿಂದಾಗಿ ಹಣದ ಪೂರೈಕೆ ಕಡಿಮೆಗೊಳ್ಳುವುದರಿಂದ ಸಮಗ್ರ ಬೇಡಿಕೆ ಕಡಿಮೆಯಾಗಿ ಬೆಲೆ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರ್‌ಬಿಐ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಪ್ರಯತ್ನಿಸಿವೆ. ಗೋಧಿ, ಸಕ್ಕರೆ ರಫ್ತಿಗೆ ನಿರ್ಬಂಧ ಹೇರಲಾಗಿದ್ದರೆ, ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ. ಇಂಧನದ ಮೇಲಿನ ಸುಂಕ ಕಡಿಮೆ ಮಾಡಲಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್ಸ್) ಪ್ರಮಾಣ ಮತ್ತಷ್ಟು ತಗ್ಗಿಸುವುದರಿಂದ ಹಣದುಬ್ಬರವನ್ನು ಕಡಿಮೆ ಮಾಡಬಹುದು. ಶೇ. 75ರಷ್ಟು ಹಣದುಬ್ಬರಕ್ಕೆ ಕಾರಣವಾದ ಆಹಾರ ಕ್ಷೇತ್ರ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆಗೊಳಿಸಬಹುದು.

ಇಷ್ಟಕ್ಕೂ ಆರ್‌ಬಿಐ ಕೈಗೊಂಡಿರುವ ತೀರ್ಮಾ ನಗಳು ಸಾಲ ನೀಡುವುದರ ಮೇಲೆ ಪರಿಣಾಮ ಬೀರುತ್ತದೆ. ಬಡ್ಡಿದರ ಏರಿಕೆಯಿಂದ ಮೊದಲ ಪೆಟ್ಟು ಬೀಳುವುದು ಬ್ಯಾಂಕ್‌ಗಳಿಂದ ಸಾಲ ಪಡೆದ ಗ್ರಾಹಕರಿಗೆ. ಈ ಹಣಕಾಸು ವರ್ಷದಲ್ಲಿಯೇ ಪ್ರಸ್ತುತ ವಿರುವ (ಎಂಸಿಎಲ್‌ಆರ್‌ ಲಿಂಕ್ಡ್) ತಮ್ಮ ಸಾಲಗಳಿಗೆ ಕನಿಷ್ಠ ಶೇ. 0. 9ರಷ್ಟು ಹೆಚ್ಚುವರಿ ಬಡ್ಡಿ ಪಾವತಿಸುವ ಹೊರೆ ಹೊರ ಬೇಕಾಗಿದೆ. ಗೃಹ, ನಿವೇಶನ, ವಾಹನ, ದೀರ್ಘಾ ವಧಿ ಸಾಲ, ಎಂಎಸ್‌ಎಇ ಸಾಲ ಪಡೆದು ಕೊಂಡವರ ಇಎಂಐ ಮೊತ್ತ ಏರಿಕೆಯಾಗುವುದು ನಿಶ್ಚಿತ. ಈ ಕ್ರಮದಿಂದ ಬ್ಯಾಂಕ್‌ ಠೇವಣಿದಾರರಿಗೆ ಅನುಕೂಲವಾಗಲಿದೆ. ಈಗಾಗಲೇ ಪ್ರಮುಖ ಬ್ಯಾಂಕ್‌ ಗಳು ಠೇವಣಿ, ಉಳಿತಾಯ ಖಾತೆ ಮತ್ತು ಸಾಲಗಳ ಬಡ್ಡಿದರವನ್ನು ಹೆಚ್ಚಿಸಿವೆ. ಬೆಲೆಗಳು ತೀವ್ರ ರೀತಿಯಲ್ಲಿ ಏರುತ್ತಾ ಸಾಗಿ ಹಣದ ಮೌಲ್ಯ ನಿರಂತರ ಕುಸಿದು ಆರ್ಥಿಕ ವ್ಯವಸ್ಥೆಗಳು ಕುಸಿಯುತ್ತಿರುವ ದೇಶಗಳು ನಮ್ಮ ಕಣ್ಣ ಮುಂದಿವೆ. ಈ ಕಾರಣದಿಂದ ಹಣದುಬ್ಬರವನ್ನು “ಅತ್ಯಂತ ಕ್ರೂರ ತೆರಿಗೆ ಮತ್ತು ಮುಕ್ತ ದರೋಡೆ’ ಎಂದು ಪರಿಗಣಿಸಲಾಗಿದೆ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಟಾಪ್ ನ್ಯೂಸ್

ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

ಕಲರ್‌ಫ‌ುಲ್‌ ಇವೆಂಟ್‌ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್‌

ಕಲರ್‌ಫುಲ್‌ ಇವೆಂಟ್‌ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್‌

Sanjay Raut warns Sena rebels in Guwahati

ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ

ಒಂದೇ ದಿನ 45% ಏರಿಕೆ ಕಂಡ ಕೋವಿಡ್ ಪ್ರಕರಣಗಳ ಸಂಖ್ಯೆ; 17,073 ಹೊಸ ಪ್ರಕರಣಗಳು

ಒಂದೇ ದಿನ 45% ಏರಿಕೆ ಕಂಡ ಕೋವಿಡ್ ಪ್ರಕರಣಗಳ ಸಂಖ್ಯೆ; 17,073 ಹೊಸ ಪ್ರಕರಣಗಳು

ದನ ಮೇಯಿಸುತ್ತಿದ್ದ ಯುವತಿಯನ್ನು ಹೊತ್ತೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ: ಆರೋಪಿ ಬಂಧನ

ದನ ಮೇಯಿಸುತ್ತಿದ್ದ ಯುವತಿಯನ್ನು ಹೊತ್ತೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ: ಆರೋಪಿ ಬಂಧನ

ಅಂಜಿನಾದ್ರಿಗೆ ಮೈಸೂರು ಒಡೆಯರ್ ಕುಟುಂಬ ಭೇಟಿ; ದೇವರ ದರ್ಶನ

ಅಂಜನಾದ್ರಿಗೆ ಮೈಸೂರು ಒಡೆಯರ್ ಕುಟುಂಬ ಭೇಟಿ; ದೇವರ ದರ್ಶನ

ಚಾಹಲ್-ಹೂಡಾ ಮಿಂಚು: ಮಳೆ ಕಾಡಿದ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ

ಚಾಹಲ್-ಹೂಡಾ ಮಿಂಚು: ಮಳೆ ಕಾಡಿದ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಆರ್ಥಿಕತೆಯ ಭದ್ರಕೋಟೆ ಎಂಎಸ್‌ಎಂಇ : ಇಂದು ವಿಶ್ವ ಎಂಎಸ್‌ಎಂಇ ದಿನ

ಭಾರತದ ಆರ್ಥಿಕತೆಯ ಭದ್ರಕೋಟೆ ಎಂಎಸ್‌ಎಂಇ : ಇಂದು ವಿಶ್ವ ಎಂಎಸ್‌ಎಂಇ ದಿನ

ರಷ್ಯಾ ಮೇಲೆ ಚಿನ್ನದ ಬಾಣ

ರಷ್ಯಾ ಮೇಲೆ ಚಿನ್ನದ ಬಾಣ

ಪರಮ ಪವಿತ್ರ, ಮನೋರಮಣೀಯ ಅಮರನಾಥ ಯಾತ್ರೆ

ಪರಮ ಪವಿತ್ರ, ಮನೋರಮಣೀಯ ಅಮರನಾಥ ಯಾತ್ರೆ

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ತಂದೆಯ ಆದರ್ಶ ಮಕ್ಕಳಿಗೆ ಹರಿದಾಗ…

ತಂದೆಯ ಆದರ್ಶ ಮಕ್ಕಳಿಗೆ ಹರಿದಾಗ…

MUST WATCH

udayavani youtube

ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ

udayavani youtube

ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್‌ ಬುಕ್

udayavani youtube

ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು

udayavani youtube

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು

udayavani youtube

ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…

ಹೊಸ ಸೇರ್ಪಡೆ

ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ  ಸ್ವಾಮೀಜಿ

ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ  ಸ್ವಾಮೀಜಿ

ಕಲರ್‌ಫ‌ುಲ್‌ ಇವೆಂಟ್‌ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್‌

ಕಲರ್‌ಫುಲ್‌ ಇವೆಂಟ್‌ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್‌

1

ಶ್ರೀಗಂಧದಲ್ಲಿ ಡಾ. ಪುನೀತ್‌ ರಾಜ್‌ಕುಮಾರ್ ಪುತ್ಥಳಿ 

Sanjay Raut warns Sena rebels in Guwahati

ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.