Udayavni Special

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿಸಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!


ಕೀರ್ತನ್ ಶೆಟ್ಟಿ ಬೋಳ, Jul 3, 2020, 6:35 PM IST

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ವೃತ್ತಿ ಜೀವನದಲ್ಲಿ ಸಾಧನೆಯ ಶಿಖರವನ್ನೇರಿದ ನಂತರ ತೆಗೆದುಕೊಂಡ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಸಂಪೂರ್ಣವಾಗಿ ಉರುಳಿ ಬಿದ್ದವರನ್ನು ನಾವು ಕಂಡಿದ್ದೇವೆ. ಅಂತವರ ಸಾಲಿಗೆ ಸೇರುವವರು ನ್ಯೂಜಿಲ್ಯಾಂಡ್ ದೇಶದ ಮಾಜಿ ಕ್ರಿಕೆಟಿಗ ಲೂ ವಿನ್ಸೆಂಟ್!

ಒಂದು ಕಾಲದಲ್ಲಿ ತನ್ನ ಹೊಡಿಬಡಿ ಆಟದಿಂದ ನ್ಯೂಜಿಲ್ಯಾಂಡ್ ಕ್ರಿಕೆಟ್ ನ ಭರವಸೆಯ ಬೆಳಕಾಗಿ ಮಿಂಚಿದ್ದ ವಿನ್ಸೆಂಟ್ ನ ಜೀವನ ಸದ್ಯ ಕತ್ತಲೆಯಲ್ಲಿದೆ. ಕಾರಣ ವಿನ್ಸೆಂಟ್ ತೆಗೆದುಕೊಂಡ ಒಂದು ತಪ್ಪು ನಿರ್ಧಾರ. ಅದುವೆ ಮ್ಯಾಚ್ ಫಿಕ್ಸಿಂಗ್ !

ಲೂ ವಿನ್ಸೆಂಟ್ ಜನಿಸಿದ್ದು 1978ರ ನವೆಂಬರ್ 11ರಂದು, ಆಕ್ಲಂಡ್ ನ ವಾರ್ಕ್ ವರ್ತ್ ನಲ್ಲಿ. ತಂದೆ ಮೈಕ್ ವಿನ್ಸೆಂಟ್ ಪ್ರಸಿದ್ದ ಕ್ರೀಡಾ ಪತ್ರಕರ್ತರಾಗಿದ್ದರು. ಹೀಗಾಗಿ ಲೂ ವಿನ್ಸೆಂಟ್ ಗೆ ಸಹಜವಾಗಿಯೇ ಕ್ರೀಡೆಯ ಮೇಲೆ ವ್ಯಾಮೋಹ ಬೆಳೆದಿತ್ತು. ಆದರೆ ಲೂ ವಿನ್ಸೆಂಟ್ ಗೆ 15 ವರ್ಷ ತುಂಬುವಷ್ಟರಲ್ಲಿ ತಂದೆ ತಾಯಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಹೀಗಾಗಿ ಲೂ ತಂದೆಯ ಜೊತೆಗೆ ಆಸ್ಟ್ರೇಲಿಯಾಗೆ ತೆರಳುತ್ತಾರೆ.

ಆದರೆ ಕಾಂಗರೂ ನೆಲದಲ್ಲಿ ತನ್ನ ಆಟಕ್ಕೆ ಸರಿಯಾದ ಅವಕಾಶ ಸಿಗದ ಕಾರಣ ಲೂ ವಿನ್ಸೆಂಟ್ 18ನೇ ವಯಸ್ಸಿನಲ್ಲಿ ಮತ್ತೆ ಕಿವೀಸ್ ಗೆ ಮರಳುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ನ್ಯೂಜಿಲ್ಯಾಂಡ್ ಅಂಡರ್ 19 ತಂಡಕ್ಕೆ ಲೂ ವಿನ್ಸೆಂಟ್ ಆಯ್ಕೆಯಾಗುತ್ತಾರೆ. ಈ ಮೂಲಕ 1998ರ ಅಂಡರ್ 19 ವಿಶ್ವಕಪ್ ನಲ್ಲಿ ಲೂ ವಿನ್ಸೆಂಟ್ ಕಿವೀಸ್ ಪರವಾಗಿ ಆಡುತ್ತಾರೆ.

ನಂತರ ಪ್ರಥಮ ದರ್ಜೆ ಕ್ರಿಕೆಟ್, ಕೌಂಟಿ ಕ್ರಿಕೆಟ್ ನಲ್ಲಿ ಲೂ ವಿನ್ಸೆಂಟ್ ಅದ್ಭುತ ಆಟವಾಡುತ್ತಾರೆ. ಬಲಗೈ ಬ್ಯಾಟ್ಸಮನ್ ಆಗಿದ್ದ ಲೂ ವಿನ್ಸೆಂಟ್ ಅದ್ಭುತ ಫೀಲ್ಡರ್ ಕೂಡಾ.  ಆಕ್ಲಂಡ್ ತಂಡ ಪರ ರನ್ ಮಳೆ ಹರಿಸುವ ಆತ 2001ರಲ್ಲಿ ಲಂಕಾ ವಿರುದ್ಧದ ಸರಣಿಗಾಗಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗುತ್ತಾರೆ. ಅದೇ ವರ್ಷ ಆಸೀಸ್ ವಿರುದ್ಧದ ಪರ್ತ್ ಪಂದ್ಯದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಲೂ ಮೊದಲ ಇನ್ನಿಂಗ್ಸ್ ನಲ್ಲೇ ಶತಕ ಬಾರಿಸುತ್ತಾರೆ. ಈ ಇನ್ನಿಂಗ್ಸ್ ನಲ್ಲಿ ಕಿವೀಸ್ ನ ನಾಲ್ವರು ಬ್ಯಾಟ್ಸಮನ್ ಗಳು ಶತಕ ಬಾರಿಸಿದ್ದರು ಎನ್ನುವುದು ವಿಶೇಷ.

ಲೂ ವಿನ್ಸೆಂಟ್

2005ರ ಜಿಂಬಾಬ್ವೆ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಲೂ ವಿನ್ಸೆಂಟ್ 172 ರನ್ ಗಳಿಸಿದ್ದರು. 120 ಎಸೆತಗಳಲ್ಲಿ 172 ರನ್ ಗಳಿಸಿದ್ದ ವಿನ್ಸೆಂಟ್ 16 ಬೌಂಡರಿ ಮತ್ತು ಒಂಬತ್ತು ಸಿಕ್ಸರ್ ಬಾರಿಸಿದ್ದರು. ಲೂ ವಿನ್ಸೆಂಟ್ ರ 172 ರನ್ ಕಿವೀಸ್ ಪರ ಏಕದಿನ ಕ್ರಿಕೆಟ್ ನ ಗರಿಷ್ಠ ಮೊತ್ತವಾಗಿತ್ತು. ( ನಂತರ ಮಾರ್ಟಿನ್ ಗಪ್ಟಿಲ್ ದ್ವಿಶತಕ [237  ರನ್] ಬಾರಿಸಿ ದಾಖಲೆ ಮುರಿದರು)

2007ರ ವಿಶ್ವಕಪ್ ನಲ್ಲಿ ಆರಂಭಿಕ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಲೂ ವಿನ್ಸೆಂಟ್, ನೆಟ್ಸ್ ನಲ್ಲಿ ಶೇನ್ ಬಾಂಡ್ ಬೌಲಿಂಗ್ ಎದುರಿಸುವಾಗ ಗಾಯಗೊಂಡರು. ಇದರಿಂದ ಕೂಟವನ್ನು ಅರ್ಧದಲ್ಲಿ ತೊರೆಯುವಂತಾಯಿತು. ನಂತರ ಅಸ್ಥಿರ ಪ್ರದರ್ಶನಗಳಿಂದಾಗಿ ತಂಡದಿಂದ ಹೊರಬೀಳಬೇಕಾಯಿತು. ಇದರಿಂದ ಲೂ ವಿನ್ಸೆಂಟ್ ಮಾನಸಿಕವಾಗಿಯೂ ಕುಗ್ಗಿದ್ದರು.

2008ರಲ್ಲಿ ಬಿಸಿಸಿಐ ಗೆ ಸಡ್ಡು ಹೊಡೆದು ಆಯೋಜಿಸಲಾಗಿದ್ದ ಐಸಿಎಲ್ ಕೂಟದಲ್ಲಿ ಲೂ ವಿನ್ಸೆಂಟ್, ಚಂಡಿಗಡ್ ಲಯನ್ಸ್ ಪರ ಕಾಣಿಸಿಕೊಂಡರು. ಇಂಗ್ಲೆಂಡ್ ಕೌಂಟಿಯಲ್ಲಿ ಫಿಕ್ಸಿಂಗ್ ನಡೆಸಿದ್ದಾರೆಂದು ಲೂ ವಿನ್ಸೆಂಟ್ ಮೇಲೆ ಆರೋಪಿಸಿಲಾಯಿತು. ಐಸಿಎಲ್ ನಲ್ಲೂ ಫಿಕ್ಸಿಂಗ್ ನಡೆಸಿದ ಮಾಹಿತಿ ಹೊರಬಿತ್ತು. ಐಸಿಎಲ್ ನಲ್ಲಿ ಭಾರತೀಯ ಆಟಗಾರ ದಿನೇಶ್ ಮೋಂಗಿಯಾ ಕೂಡಾ ತನ್ನ ಜೊತೆಗೆ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ಲೂ ವಿನ್ಸೆಂಟ್ ಸ್ವತಃ ಹೇಳಿಕೊಂಡಿದ್ದರು. ಇದರೊಂದಿಗೆ ಪ್ರತಿಭಾನ್ವಿತ ಆಟಗಾರ ಕ್ರಿಕೆಟ್ ಜೀವನ ಕರಾಳ ಅಂತ್ಯ ಕಂಡಿತು.

ಲೂ ವಿನ್ಸೆಂಟ್

ಸದ್ಯ ಕ್ರಿಕೆಟ್ ನಿಂದ ಜೀವಮಾನದ ನಿಷೇಧಕ್ಕೆ ಒಳಗಾಗಿರುವ ಲೂ ವಿನ್ಸೆಂಟ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದಾನೆ ಎಂದು ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು. ತನ್ನ ಪ್ರತಿಭೆಯಿಂದ ದೇಶದ ಯೂತ್ ಐಕಾನ್ ಬೆಳೆದಿದ್ದ ವ್ಯಕ್ತಿಯೊಬ್ಬ ತನ್ನ ತಪ್ಪಿನಿಂದ ಕೆಳ ಮಟ್ಟಕ್ಕೆ ಜಾರಿದ್ದಾನೆ. ತಮ್ಮ ವೃತ್ತಿಗೆ ಎಂದಿಗೂ ನಿಷ್ಠರಾಗಿರಬೇಕು ಎನ್ನುವುದಕ್ಕೆ ಲೂ ವಿನ್ಸೆಂಟ್ ಜೀವನಗಾಥೆ ಒಂದು ಉತ್ತಮ ನಿದರ್ಶನ.

ಕೀರ್ತನ್ ಶೆಟ್ಟಿ ಬೋಳ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆಯನ್ನು ತಾತ್ಕಾಲಿಕ ಬಂದ್

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆ ತಾತ್ಕಾಲಿಕ ಬಂದ್

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಬಾರಿ ಕೆಕೆಆರ್ ಪರ ಈ ಯುವ ಭಾರತೀಯ ಇನ್ನಿಂಗ್ಸ್ ಆರಂಭಿಸಬೇಕು: ಡೀನ್ ಜೋನ್ಸ್

ಈ ಬಾರಿ ಕೆಕೆಆರ್ ಪರ ಈ ಯುವ ಭಾರತೀಯ ಇನ್ನಿಂಗ್ಸ್ ಆರಂಭಿಸಬೇಕು: ಡೀನ್ ಜೋನ್ಸ್

ಇಂಗ್ಲೆಂಡ್ ಗೆ ನೆರವಾದ ಬಟ್ಲರ್- ವೋಕ್ಸ್: ಪಾಕ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ರೂಟ್ ಪಡೆ

ಇಂಗ್ಲೆಂಡ್ ಗೆ ನೆರವಾದ ಬಟ್ಲರ್- ವೋಕ್ಸ್: ಪಾಕ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ರೂಟ್ ಪಡೆ

ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಜೊತೆ ಆರ್ ಸಿಬಿ ಸ್ಪಿನ್ನರ್ ಯುಜಿ ಚಾಹಲ್ ನಿಶ್ಚಿತಾರ್ಥ

ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಜೊತೆ ಆರ್ ಸಿಬಿ ಸ್ಪಿನ್ನರ್ ಯುಜಿ ಚಾಹಲ್ ನಿಶ್ಚಿತಾರ್ಥ

ಮುಂದಿನ ವರ್ಷ ಭಾರತದಲ್ಲೇ ನಡೆಯಲಿದೆ ಟಿ20 ವಿಶ್ವಕಪ್‌

ಮುಂದಿನ ವರ್ಷ ಭಾರತದಲ್ಲೇ ನಡೆಯಲಿದೆ ಟಿ20 ವಿಶ್ವಕಪ್‌

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

MUST WATCH

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmerಹೊಸ ಸೇರ್ಪಡೆ

ಪ್ರವಾಹ ಪರಿಹಾರಕ್ಕೆ ಹೆಚ್ಚಿನ ನೆರವು: ಸಚಿವ

ಪ್ರವಾಹ ಪರಿಹಾರಕ್ಕೆ ಹೆಚ್ಚಿನ ನೆರವು: ಸಚಿವ

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆಯನ್ನು ತಾತ್ಕಾಲಿಕ ಬಂದ್

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆ ತಾತ್ಕಾಲಿಕ ಬಂದ್

ಕೋವಿಡ್: ಸಂಚಾರ ದಟ್ಟಣೆ ನಿರ್ವಾಹಣೆಗೆ ಒತ್ತು

ಕೋವಿಡ್: ಸಂಚಾರ ದಟ್ಟಣೆ ನಿರ್ವಾಹಣೆಗೆ ಒತ್ತು

ಪಾಲಿಕೆ ಸದಸ್ಯರ ಅಧಿಕಾರ ವಿಸ್ತರಣೆ ಸಾಧ್ಯವೇ?

ಪಾಲಿಕೆ ಸದಸ್ಯರ ಅಧಿಕಾರ ವಿಸ್ತರಣೆ ಸಾಧ್ಯವೇ?

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.