ಅಸಮಾನ ಸಮಾಜದಲ್ಲಿ ಮಾನಸಿಕ ಆರೋಗ್ಯದ ಸಮಾನತೆಯ ಕಡೆಗೆ


Team Udayavani, Oct 10, 2021, 9:22 AM IST

mental health day

1 ಮೊದಲು ಲವಲವಿಕೆಯಿಂದ ಎಲ್ಲರೊಂದಿಗೂ ಮಾತನಾಡಿಕೊಂಡಿದ್ದ ರವೀಶ್ (ಹೆಸರು ಬದಲಾಯಿಸಲಾಗಿದೆ) ಇತ್ತೀಚಿಗೆ ಮಂಕಾಗಿದ್ದಾನೆ. ನಿತ್ಯವೂ ಆನ್ ಲೈನ್ ಕ್ಲಾಸ್ ನಲ್ಲಿ ಕೂರುತ್ತಾನೆ. ಅಲ್ಲಿ ಓದುತ್ತಾನೆ. ಅದರ ಹೊರತಾಗಿ ಒಂದಷ್ಟು ಕಂಪ್ಯೂಟರ್ ಆಟಗಳನ್ನು ಆಡುತ್ತಾನೆ. ಮನೆಯವರೊಂದಿಗೂ ಹೇಚ್ಚೇನೂ ಮಾತನಾಡುವುದಿಲ್ಲ. ಇತರರೊಂದಿಗೆ ಬೆರೆಯುವುದಕ್ಕೂ ಆತನಿಗೆ ಇಷ್ಟವಿಲ್ಲ. ಗೆಳೆಯರೂ ಹೇಳುವಷ್ಟೇನೂ ಇಲ್ಲ! ಮನೆಯ ಸೋಫಾದಲ್ಲಿ ಮಲಗಿಕೊಂಡು ಎಷ್ಟೋ ಬಾರಿ ಛಾವಣಿಯನ್ನು ನೋಡುತ್ತಾ ಕುಳಿತಿರುತ್ತಾನೆ.

2 ಆಕೆ ಬಣ್ಣದ ಲೋಕದ ಮಿಂಚು. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯನ್ನು ಹಿಂಬಾಲಿಸುವವರು ಅದೆಷ್ಟೋ. ಹೊರಗಿನ ಪ್ರಪಂಚಕ್ಕೆ ಆಕೆ ಬಹಳ ಧೈರ್ಯವಂತೆ, ಆತ್ಮವಿಶ್ವಾಸದ ಚಿಲುಮೆ. ಏನು ಬೇಕಾದರೂ ಸಾಧಿಸಬಲ್ಲೆ ಎನ್ನುವಂತಹ ಛಲಗಾತಿ. ಆದರೆ ಅದೆಷ್ಟೋ ಬಾರಿ ಒಬ್ಬಳೇ ವಿನಾಕಾರಣ ಅತ್ತಿದ್ದಾಳೆ. ಯಾಕೆ ಅಳು ಎಂಬುದು ಆಕೆಗೂ ಅರಿವಿಲ್ಲ.

3 ಬಡತನದ ಬೇಗುದಿಗೆ ಒಳಗಾಗಿ ಕಷ್ಟ ಕಾರ್ಪಣ್ಯಗಳನ್ನೇ ನೋಡಿದ ಈತ ತನ್ನ ನೋವುಗಳನ್ನು ಮರೆಸುವ ನೆಪದಲ್ಲಿ ಕುಡಿತದ ಚಟಕ್ಕೊಳಗಾಗಿದ್ದಾನೆ. ಚಿಕ್ಕಂದಿನಿಂದಲೇ ಬುದ್ಧಿವಂತನಾದರೂ, ಮದ್ಯಪಾನದ ವ್ಯಸನ ಆತನನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ. ಏನೋ ವ್ಯಕ್ತಿಯಾಗಬೇಕು ಎಂಬ ಬಾಲ್ಯದ ಕನಸು ಕಮರಿ ಹೋಗಿದೆ.

ಇದನ್ನೂ ಓದಿ:ಸ್ವಸ್ಥ ಮನಸ್ಸಿಗಾಗಿ ಜೀವನಶೈಲಿಯ ಸೂತ್ರಗಳು

ಹೀಗೆ ನೋಡುತ್ತಾ ಹೋದರೆ, ಮಾನಸಿಕ ಸಮಸ್ಯೆಗಳು ಇಲ್ಲದವರಾರು? ಸಮಾಜದಲ್ಲಿ ಜಾತಿ, ಮತ, ಲಿಂಗ, ಜನಾಂಗ, ವರ್ಗ ಹೀಗೆ ಅನೇಕ ರೀತಿಯ ಸ್ತರ ವಿನ್ಯಾಸಗಳಿದ್ದರೂ, ಮಾನಸಿಕ ಆರೋಗ್ಯದ ಸಮಸ್ಯೆಗಳು ಎಲ್ಲಾ  ರೀತಿಯ ವ್ಯಕ್ತಿಗಳಲ್ಲೂ ಕಂಡುಬರುತ್ತದೆ. ಆದರೆ, ಎಷ್ಟು ಮಂದಿಗೆ ಇದರ  ಬಗ್ಗೆ ಅರಿವಿದೆ  ಮತ್ತು ಎಷ್ಟು ಮಂದಿಗೆ ಶುಶ್ರೂಷೆ ಸಿಗುತ್ತದೆ ಎನ್ನುವುದು ಪ್ರಶ್ನೆ. ಅದಕ್ಕಿಂತಲೂ ಮುಖ್ಯವಾದದ್ದು ಎಷ್ಟು ಮಂದಿ ತಮ್ಮ ಮಾನಸಿಕ ಸಮಸ್ಯೆಗಳನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದು. ಯಾಕೆಂದರೆ, ಕಣ್ಣಿಗೆ ಕಾಣದಂತಹ ಸಮಸ್ಯೆಯಾಗಿರುವ ಮಾನಸಿಕ ಸಮಸ್ಯೆಗಳನ್ನು, ನಾವು ನಮ್ಮೊಳಗೇ ಇರಿಸಿಕೊಳ್ಳುವುದಕ್ಕೆ ಮತ್ತು ಅದುಮಿಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ. ದುಗುಡ, ದುಃಖ, ಬೇಗುದಿಗಳನ್ನು ಇತರರ ಕಣ್ಣಿನಿಂದ ಮರೆಮಾಚಿ ತಮ್ಮನ್ನು ತಾವು ಬಹಳ ‘ಸ್ಟ್ರಾಂಗ್’ ಎಂದು ತೋರಿಸುತ್ತೇವೆ. ಹಾಗಾಗಿ ಅನೇಕರ ಮಾನಸಿಕ ತುಮುಲಗಳು ತೀವ್ರವಾದ ಮೇಲೆಯೇ ಹೊರಗೆ ಬರುತ್ತದೆ. ಆವಾಗ ಅದರ ಶುಶ್ರೂಷೆಗೂ ಹೆಚ್ಚಿನ ಸಮಯ ಬೇಕಾಗುತ್ತದೆ.

ಕೊರೋನಾ ಸೋಂಕಿನ ಪರಿಣಾಮವಾಗಿ ಅನೇಕರು ವಿವಿಧ ರೀತಿಯ ಮಾನಸಿಕ ಸಮಸ್ಯೆಗಳನ್ನು ಎದುರಿಸಿದರು. ಭಯ, ಆತಂಕ, ಉದ್ವೇಗ,  ಹತಾಶೆ,  ಕಿರಿಕಿರಿ, ನಿದ್ರಾಹೀನತೆ, ಖೇದ, ಖಿನ್ನತೆ ಮುಂತಾದ ಅನೇಕ ರೀತಿಯ  ಮಾನಸಿಕ ಸಮಸ್ಯೆಗಳು ಬಹುತೇಕ ಮಂದಿಯನ್ನು ಪೀಡಿಸಿತು. ಅಲ್ಲಿಯವರೆಗೆ ತಮ್ಮ ಮಾನಸಿಕ ದೌರ್ಬಲ್ಯಗಳನ್ನು ಅದುಮಿಟ್ಟುಕೊಳ್ಳುತ್ತಿದ್ದ ಅಥವಾ ಅಡಗಿಸಿಡುತ್ತಿದ್ದ ಮಂದಿ ನಿಧಾನವಾಗಿ ಒಬ್ಬರಿಗೊಬ್ಬರು ಹಂಚಿಕೊಳ್ಳಲು ಆರಂಭಿಸಿದರು. ಯಾವಾಗ ಇತರರಿಗೂ ತಮ್ಮಂತೆಯೇ ಸಮಸ್ಯೆಗಳು ಇದೆ ಎಂದು ಅರಿವಿಗೆ ಬಂತೋ ಆವಾಗ ಮುಕ್ತತೆಯ ವಾತಾವರಣ ಏರ್ಪಟ್ಟಿತು.

ಮೊದಲನೆಯ ಅಲೆಯಲ್ಲಿ “ಅಪರಿಚಿತ ರೋಗದ ಭಯ”ವಿದ್ದರೆ, ಎರಡನೇ ಅಲೆಯು ಅನೇಕರ ಮನೆಗಳನ್ನು ಬರಿದು ಮಾಡಿಸಿತು. ಅನೇಕರ ಮನೆ ಮನಗಳಲ್ಲಿ ದುಃಖ ಮಡುಗಟ್ಟಿತ್ತು. ಈ ಕಾರಣದಿಂದಾಗಿರುವ ಮಾನಸಿಕ ಆಘಾತದಿಂದ ಹೊರಬರಬೇಕಾದರೆ ತುಂಬಾ ಸಮಯ ಬೇಕಾಗಬಹುದು.

ಬಡವರ ಮನೆಗಳಲ್ಲಿ ಕೊರೊನದ ಕಾರಣದಿಂದ ಬಂದಿರುವ ನಿರುದ್ಯೋಗದಿಂದ ಹಲವಾರು ಆತ್ಮಹತ್ಯೆಯ ಪ್ರಯತ್ನಗಳೂ ನಡೆದುವು. ಹೆತ್ತವರು ಮಕ್ಕಳ ಮುಂದೆಯೇ ಹತಾಶೆಗೊಳಗಾಗಿ ತಮ್ಮ ಕೊರಳುಗಳಿಗೆ ಕುಣಿಕೆಗಳನ್ನು ಹಾಕಿಕೊಂಡ ದೃಶ್ಯಗಳನ್ನು ಕಂಡಿರುವ ಮಕ್ಕಳ ಮನಸ್ಸುಗಳ ನೋವನ್ನು ಗುಣಪಡಿಸುವುದು ಮನಃಶಾಸ್ತ್ರಜ್ಞರಿಗೂ ಒಂದು ದೊಡ್ಡ ಸವಾಲೇ ಸರಿ.

ಮೊದಲು ಮನೆಯಲ್ಲೇ ಕೆಲಸ ಮಾಡುವುದು ( ) ಚಂದವಾಗಿ ಮತ್ತು ಕಂಡರೂ, ಈಗ ಅನೇಕರಿಗೆ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದೇ ಕಷ್ಟವಾಗಿದೆ. ಮನೆಯಲ್ಲೇ ಇರುವ ಕಾರಣ ಹೆಚ್ಚಿನ ಸಮಯವನ್ನು ಕೆಲಸಕ್ಕೆ ಮೀಸಲಿಡಬೇಕಾದಂತಹ ಅನಿವಾರ್ಯತೆ ಒದಗಿದೆ. ಮೀಟಿಂಗ್ ಗಳಲ್ಲಿ ವಸ್ತು ವಿಷಯದ ಹೊರತಾಗಿ ಕ್ಷೇಮ ಸಮಾಚಾರ ಮುಂತಾಗಿ ಇತರೆ ಯಾವುದೇ ವಿಚಾರಗಳೂ ಕೂಡಾ ಮಾತುಕತೆಗಳಲ್ಲಿ ಕಾಣದಾಗಿವೆ. ಮನುಷ್ಯ ಸಂಬಂಧಗಳೇ ಇಂಟರ್ನೆಟ್ ಮೂಲಕ ಎಂದಾಗಿದೆ. ವರ್ಕ್ ಫ್ರಮ್ ಹೋಮ್ ಕಾರಣದಿಂದಾಗಿ ಅಮ್ಮಂದಿರು ಮನೆಗಳಲ್ಲಿದ್ದರೂ, ಮಕ್ಕಳಿಗೆ ಲಭ್ಯರಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಗಳಿಂದಾಗಿ ವಿಶ್ವದಾದ್ಯಂತ ಮಾನಸಿಕ ಆರೋಗ್ಯದ ಸಮಸ್ಯೆಗಳ ಬಿಕ್ಕಟ್ಟಿನ ಭೀತಿ ಇದೆ.

ಏನು ಮಾಡಬೇಕು?

ಸಾಮಾನ್ಯವಾಗಿ ನಮಗೆ ಹೇಗೆ ಕೈ ನೋವು, ಕಾಲು ನೋವು, ತಲೆ ನೋವು, ಬೆನ್ನು ನೋವು ಬರುತ್ತದೋ, ಹಾಗೆಯೇ, ಬೇರೆ ಬೇರೆ ರೀತಿಯ ಮಾನಸಿಕ ಸಮಸ್ಯೆಗಳು ಬರಬಹುದು. ಅದು ಉಲ್ಬಣಿತ ಕೋಪದಿಂದ ಹಿಡಿದು ತೀವ್ರತರನಾದ ಸಮಸ್ಯೆಗಳವರೆಗೂ ವ್ಯಾಪಿಸಿರಬಹುದು. ಆದರೆ, ತೀವ್ರತರನಾದ ಸಮಸ್ಯೆಗಳು ಏಕಾಏಕಿ ಬರುವುದಿಲ್ಲ. ಅವು ಬರುವುದೇ ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದಾಗ. ಹೇಗೆ ಶರೀರದಲ್ಲಿರುವ ಹುಳುಕುಗಳನ್ನು ಆರಂಭದಲ್ಲಿಯೇ ಕಿತ್ತು ತೆಗೆಯಬೇಕೋ, ಹಾಗೆಯೇ ಮಾನಸಿಕ ಕ್ಲೇಶಗಳನ್ನು ಆರಂಭದಲ್ಲಿಯೇ ಬೇರಿನಿಂದಲೇ ಕಿತ್ತು ತೆಗೆಯಬೇಕು. ಆವಾಗ ಜೀವನ ಹಗುರವಾಗುತ್ತದೆ.

ಹಾಗಾಗಿ ಮಾನಸಿಕ ಆರೋಗ್ಯದ ಕುರಿತು ಸಾಂಘಿಕ ಹೋರಾಟದ ಅಗತ್ಯವಿದೆ. ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಮಂದಿ ಚರ್ಚೆ ಮಾಡಬೇಕು. ತಮ್ಮ ಅಂತಸ್ತು, ಸಾಮಾಜಿಕ ಸ್ಥಾನಮಾನದ ಪೊರೆಗಳನ್ನು ಕಳಚಿಕೊಂಡು ಆಂತರ್ಯದ ಮನುಷ್ಯನನ್ನು ಕಂಡುಕೊಳ್ಳಬೇಕು.

ಕೇವಲ ತೀವ್ರತರನಾದ ಮಾನಸಿಕ ಸಮಸ್ಯೆಗಳಷ್ಟೇ ಅಲ್ಲದೆ, ಇತರೆ ಭಯಗಳನ್ನು, ಋಣಾತ್ಮಕ ಚಿಂತನೆಗಳನ್ನು ಆರಂಭದಲ್ಲೇ ಗಂಭೀರವಾಗಿ ಪರಿಗಣಿಸಿ, ಸರಿಪಡಿಸಿಕೊಳ್ಳಬೇಕು. ಅನಾವಶ್ಯಕವಾಗಿ ಬೇಸರಗಳನ್ನು, ಕೋಪಗಳನ್ನು, ಮನಸ್ತಾಪಗಳನ್ನು ಅನೇಕ ವರ್ಷಗಳವರೆಗೆ ಮನದಲ್ಲೇ ಹೊತ್ತುಕೊಂಡು ಅದರಿಂದಾಗಿ ತಮ್ಮ ಇತರೆ ಸಂಬಂಧಗಳನ್ನು ಹಾಳುಮಾಡಿಕೊಳ್ಳುವ ಬದಲು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು.

ಜ್ವರ ಬಂದಾಗ, ಶೀತವಾದಾಗ ಹೇಗೆ ವೈದ್ಯರ ಬಳಿ ಹೋಗುತ್ತೇವೋ, ಹಾಗೆಯೇ, ಮಾನಸಿಕ ಏರುಪೇರಾದಾಗ ಮನಃಶಾಸ್ತ್ರಜ್ಞರ ಬಳಿ ಹೋಗಬೇಕು. ಇತರರು ಏನು ಹೇಳುತ್ತಾರೋ, ಏನು ಅಂದುಕೊಳ್ಳುತ್ತಾರೋ ಎಂಬುದನ್ನೇ ಮುಖ್ಯ ಸಮಸ್ಯೆಯನ್ನಾಗಿ ಮಾಡಿಕೊಂಡರೆ, ನೀವೇ ನಿಮ್ಮ ಜೀವನದ ಸುಂದರ ಕ್ಷಣಗಳಿಗೆ ಕಲ್ಲು ಹಾಕಿದಂತಾಗುತ್ತದೆ.

ಇಷ್ಟೇ ಅಲ್ಲದ್ದೆ, ನಿಮ್ಮ ಬಂಧು ಮಿತ್ರರು ಯಾರಾದರೂ ಏನಾದರೂ ಮಾನಸಿಕ ಕ್ಲೇಶಕ್ಕೊಳಗಾಗಿದ್ದರೆ, ಅವರಿಗೆ ನಿಮ್ಮ ಬೆಂಬಲ ಇದೆ ಎಂಬುವುದನ್ನು ದೃಢಪಡಿಸಿ, ಧೈರ್ಯ ತುಂಬಬೇಕು. ವಿಭಕ್ತ ಕುಟುಂಬಗಳ ಪರಿಸ್ಥಿತಿಯಲ್ಲಿ, ಎಲ್ಲರು ತಮ್ಮ ತಮ್ಮ ಜೀವನದ ಕುರಿತು ಅಷ್ಟೇ ಯೋಚನೆ ಮಾಡುವ ಈ ದಿನಗಳಲ್ಲಿ, ಮಾನವಿಕ ಸಂಬಂಧಗಳನ್ನು ಗಟ್ಟಿಗೊಳಿಸಿ, ಹೊಸರೀತಿಯ ಅವಿಭಕ್ತತೆಯನ್ನು ಉಂಟು ಮಾಡಬೇಕು. ಆವಾಗಲೇ, ನಾವು ಮಾನಸಿಕವಾಗಿ ಆರೋಗ್ಯವಂತ ಸಮಾಜವನ್ನು ಕಟ್ಟಬಹುದು.

ಎಲ್ಲವೂ ಇದ್ದು ಮಾನಸಿಕ ನೆಮ್ಮದಿಯೇ ಇಲ್ಲದಿದ್ದರೆ, ಜೀವನದ ಸೊಗಡು ಬರಿದಾಗುತ್ತದೆ.

ನಾವು ಆಕಾಂಕ್ಷಿಸುವ ಉದ್ಯೋಗ, ಹಣ, ಸೌಕರ್ಯ, ಸವಲತ್ತು ಇವೆಲ್ಲವುಗಳನ್ನೂ ಮೀರಿ, ಜೀವನದಲ್ಲಿ ಆನಂದವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದಕ್ಕೋಸ್ಕರವೇ, ಮಾನಸಿಕ ಆರೋಗ್ಯದ ಕುರಿತು ನಾವು ಆರಂಭದಿಂದಲೇ ಜಾಗರೂಕರಾಗಿದ್ದು, ನಮ್ಮ ಮಕ್ಕಳಿಗೆ, ವಯಸ್ಕರಿಗೆ ಮತ್ತು ಹಿರಿಯರಿಗೆ ಯಾವುದೇ ರೀತಿಯ ಸಾಮಾಜಿಕ ಭೇದಗಳಿಲ್ಲದೆ ಮನಸ್ಸಿನ ಮಾತುಗಳನ್ನು ಕೇಳುವ ಮೂಲಕ ಉನ್ನತವಾದ ಸಮಾಜವನ್ನು ಕಟ್ಟುವಲ್ಲಿ ಒಂದಾಗೋಣ.

ವಿಶ್ವ ಮಾನಸಿಕ ಆರೋಗ್ಯ ದಿನವಾದ ಇಂದು, ನಮ್ಮೆಲ್ಲರ ಆರೋಗ್ಯಕ್ಕೆ ಕೈಜೋಡಿಸೋಣ.

 

ಅಕ್ಷರ ದಾಮ್ಲೆ

ಮನಃಶಾಸ್ತ್ರಜ್ಞ

ಸ್ಥಾಪಕ, ಮನೋಸಂವಾದ

(‘ಮನಸ್ಸಿನ ಮಾತು ಕೇಳಿ’ ಮತ್ತು ‘ಮನೋಸಂವಾದ’ ಎಂಬ ಪುಸ್ತಕವನ್ನು ಬರೆದಿರುತ್ತಾರೆ.)

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

13

ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ?

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.