
ವಾವ್! ಏನ್ ರುಚಿ ಈ ಸಿಗಡಿ ಘೀ ರೋಸ್ಟ್..ಸಿಗಡಿ ತಂದರೆ ಒಮ್ಮೆ ಹೀಗೆ ಮಾಡಿ ನೋಡಿ…
ಕರಾವಳಿ ಪ್ರದೇಶದಲ್ಲಿ ಸಿಗಡಿ ರೆಸಿಪಿ ಹೆಚ್ಚು ಪ್ರಸಿದ್ಧಿ ಪಡೆದಿದೆ.
ಶ್ರೀರಾಮ್ ನಾಯಕ್, Mar 31, 2023, 5:42 PM IST

ಸಿಗಡಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮೀನು ಪ್ರಿಯರಿಗೆ ಸಿಗಡಿ ಅಂದರೆ ಎಲ್ಲರಿಗೆ ಅಚ್ಚುಮೆಚ್ಚು. ಮಾಂಸಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರದಲ್ಲಿ ಸಿಗಡಿಯೂ ಉತ್ತಮವಾದ ಸ್ಥಾನಮಾನ ಪಡೆದಿದೆ. ಕರಾವಳಿ ಪ್ರದೇಶದಲ್ಲಿ ಸಿಗಡಿ ರೆಸಿಪಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಸಿಗಡಿಯಿಂದ ಅನೇಕ ರೀತಿಯ ಖಾದ್ಯಗಳನ್ನು ಮಾಡುತ್ತಾರೆ. ನೀವು ನಾನ್ ವೆಜ್ ಪ್ರಿಯರಾಗಿದ್ದರೆ ಯಾವಾಗಲೂ ಒಂದೇ ರೀತಿಯ ಪದಾರ್ಥ ತಿಂದು ಬೋರ್ ಆಗಿದ್ದರೆ ನಾವು ನಿಮಗೊಂದು ರೆಸಿಪಿ ಹೇಳುತ್ತೇವೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಒಮ್ಮೆ ಮಾಡಿ ನೋಡಿ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ.
ಅಂದಹಾಗೆ ನಾವು ಇವತ್ತು ಸಿಗಡಿ ಘೀ ರೋಸ್ಟ್ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಹಾಗಾದರೆ ಮತ್ತೇಕೆ ತಡ “ಸಿಗಡಿ ಘೀ ರೋಸ್ಟ್” ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ…..
ಸಿಗಡಿ ಘೀ ರೋಸ್ಟ್
ಬೇಕಾಗುವ ಸಾಮಗ್ರಿಗಳು
ಸಿಗಡಿ-ಅರ್ಧ ಕೆ.ಜಿ., ಅರಿಶಿನ ಪುಡಿ-ಅರ್ಧ ಚಮಚ, ಮೊಸರು-4 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-2 ಚಮಚ, ಒಣಮೆಣಸು-4ರಿಂದ 5, ಕೊತ್ತಂಬರಿ ಬೀಜ(ಧನಿಯಾ)-1ಚಮಚ, ಜೀರಿಗೆ-ಅರ್ಧ ಚಮಚ, ಕಾಳುಮೆಣಸು-4ರಿಂದ5, ಖಾರದ ಪುಡಿ-2 ಚಮಚ, ತುಪ್ಪ-4ಚಮಚ, ಕರಿಬೇವು-ಸ್ವಲ್ಪ, ಮೆಂತ್ಯೆ-ಅರ್ಧ ಚಮಚ, ಈರುಳ್ಳಿ-1, ಲವಂಗ, ಚಕ್ಕೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಸಿಗಡಿಯನ್ನು ಸ್ವಚ್ಛಗೊಳಿಸಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ.
ನಂತರ ಒಂದು ಪ್ಯಾನ್ ಗೆ ಒಣಮೆಣಸು, ಕಾಳು ಮೆಣಸು, ಜೀರಿಗೆ, ಮೆಂತ್ಯೆ, ಧನಿಯಾ, ಲವಂಗ ಮತ್ತು ಚಕ್ಕೆಯನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ತದನಂತರ ಅದನ್ನು ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.
ನಂತರ ಒಂದು ಪ್ಯಾನ್ ಗೆ ಮಿಶ್ರಣ ಮಾಡಿಟ್ಟ ಸಿಗಡಿಯನ್ನು ಹಾಕಿ ಅರ್ಧ ಬೇಯುವವರೆಗೆ ಬೇಯಿಸಿಕೊಂಡು ಆಮೇಲೆ ನೀರು ಮತ್ತು ಸಿಗಡಿಯನ್ನು ಬೇರೆ ಬೇರೆ ತೆಗೆದಿಟ್ಟುಕೊಳ್ಳಿ.
ತದನಂತರ ಇನ್ನೊಂದು ಪ್ಯಾನ್ ಗೆ 2ಚಮಚ ತುಪ್ಪ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಕೈ ಅಡಿಸಿ ಆಮೇಲೆ ರುಬ್ಬಿಟ್ಟ ಮಸಾಲೆ ಹಾಗು ತೆಗೆದಿಟ್ಟ ಸಿಗಡಿ ನೀರು ಮತ್ತು ರುಚಿಗೆ ಬೇಕಾದಷ್ಟು ಉಪ್ಪನ್ನು ಸೇರಿಸಿ ಫ್ರೈ ಮಾಡಿ.
ನಂತರ ಬೆಂದ ಸಿಗಡಿಯನ್ನು ಸೇರಿಸಿ ಅದಕ್ಕೆ 2 ಚಮಚ ತುಪ್ಪ ಬೆರೆಸಿ ಕೊನೆಗೆ ಕರಿಬೇವು ಹಾಕಿದರೆ ಬಿಸಿ-ಬಿಸಿಯಾದ ಸಿಗಡಿ ಘೀ ರೋಸ್ಟ್ ಸವಿಯಲು ಸಿದ್ಧ.
-ಶ್ರೀರಾಮ್ ಜಿ . ನಾಯಕ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

Beauty Tips: ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು….

Non-vegetarian Recipes; ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್…

Health Tips: ಬೇಸಿಗೆಯಲ್ಲಿ ತ್ವಚೆಯನ್ನು ರಕ್ಷಿಸಿಕೊಳ್ಳಲು ಈ ಲೋಷನ್ ಬಳಸಿ..

Fort;ಯಾವ ರಾಜನಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಾಗದ ಜಂಜೀರಾ ಕೋಟೆ ಬಗ್ಗೆ ಗೊತ್ತಾ?