ರಷ್ಯಾ ತೈಲ ಅವಲಂಬನೆ: ಯಾರು? ಎತ್ತ?
Team Udayavani, Apr 25, 2022, 11:15 AM IST
ಉಕ್ರೇನ್ ಮೇಲೆ ರಷ್ಯಾ ದಾಳಿ ಶುರುವಾದ ಮೇಲೆ ಐರೋಪ್ಯ ಒಕ್ಕೂಟ ಸೇರಿದಂತೆ ಹಲವಾರು ದೇಶಗಳು ರಷ್ಯಾ ತೈಲ ಆಮದು ನಿಲ್ಲಿಸಿವೆ. ಆದರೆ ಭಾರತ ಮತ್ತು ಚೀನ ಸೇರಿದಂತೆ ಇನ್ನೂ ಕೆಲವು ದೇಶಗಳು ಆಮದು ಮುಂದುವರಿಸಿವೆ. ಹಾಗಾದರೆ, ಈಗ ಖರೀದಿ ಮುಂದುವರಿಸಿರುವವರು ಮತ್ತು ನಿಲ್ಲಿಸಿರುವವರ ಮಾಹಿತಿ ಇಲ್ಲಿದೆ.
ಭಾರತ್ ಪೆಟ್ರೋಲಿಯಂ
ಭಾರತದ ಪ್ರಮುಖ ತೈಲ ಸಂಸ್ಕರಣ ಸಂಸ್ಥೆಯಾಗಿರುವ ಇದು, 2 ದಶಲಕ್ಷ ಬ್ಯಾರೆಲ್ ತೈಲ ಖರೀದಿಸಿದೆ. ಹಾಗೆಯೇ ಇದು ರಷ್ಯಾದ ಉರಲ್‌ನಿಂದ ಪ್ರತೀ ದಿನ 3,10,000 ಬ್ಯಾರೆಲ್ ತೈಲ ಖರೀದಿಸಿ ಕೊಚ್ಚಿಯಲ್ಲಿರುವ ರಿಫೈನರಿಯಲ್ಲಿ ಇಡುತ್ತಿದೆ.
ಹೆಲೆನಿಕ್ ಪೆಟ್ರೋಲಿಯಂ
ಗ್ರೀಸ್ ದೇಶದ ಇದು, ತನಗೆ ಬೇಕಾದ ತೈಲದ ಶೇ.15ರಷ್ಟನ್ನು ರಷ್ಯಾ ಮೇಲೆಯೇ ಅವಲಂಬಿತ ಆಗಿದೆ.
ಹಿಂದೂಸ್ಥಾನ್ ಪೆಟ್ರೋಲಿಯಂ
ಮೇ ತಿಂಗಳಿಗಾಗಿ ಭಾರತದ ಈ ಕಂಪೆನಿ 2 ದಶಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಿದೆ.
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್
ಐರೋಪ್ಯ ವ್ಯಾಪಾರಿಯೊಬ್ಬರ ಟೆಂಡರ್‌ನಂತೆ ಡಿಸ್ಕೌಂಟ್‌ನಲ್ಲಿ ರಷ್ಯಾದ ಉರಲ್‌ನಿಂದ ಒಂದು ದಶಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್
ಫೆ.24ರ ವರೆಗೆ ಭಾರತದ ಈ ಕಂಪೆನಿ 6 ದಶಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಿದೆ. ಹಾಗೆಯೇ 2022ಕ್ಕಾಗಿ 15 ದಶಲಕ್ಷ ಬ್ಯಾರೆಲ್ ಕಚ್ಚಾತೈಲಕ್ಕಾಗಿ ಆರ್ಡರ್ ನೀಡಿದೆ.
ಉಳಿದಂತೆ ಇಸ್ರೇಲ್‌ನ ಇಸಾಬ್, ಜರ್ಮನಿಯ ಎಲ್‌ಇಯುಎನ್‌ಎ ಮತ್ತು ಎಂಐಆರ್‌ಒ, ಹಂಗೇರಿಯ ಎಂಒಎಲ್, ಭಾರತದ ಖಾಸಗಿ ಪೆಟ್ರೋಲಿಯಂ ಸಂಸ್ಥೆ ನಯಾರಾ(1.8 ದಶಲಕ್ಷ ಬ್ಯಾರೆಲ್), ಬಲ್ಗೇರಿಯಾದ ನೆಫೊràಚಿಮ್, ಜರ್ಮನಿಯ ಪಿಸಿಕೆ, ಇಂಡೋನೇಷ್ಯಾದ ಪೆರ್ತಮಿನಾ, ಪೊಲೆಂಡ್‌ನ ಪಿಕೆಎನ್ ಒರ್ಲಾನ್, ಡೆನ್ಮಾರ್ಕ್‌ನ ರೋಟ್ಟೆರ್ಡಮ್ ರಿಫೈನರಿ, ಚೀನದ ಸಿನೋಪೆಕ್ ಮತ್ತು ಡೆನ್ಮಾರ್ಕ್‌ನ ಝೀಲ್ಯಾಂಡ್ ರಿಫೈನರಿ ಸಂಸ್ಥೆಗಳು ರಷ್ಯಾದಿಂದ ಭಾರೀ ಪ್ರಮಾಣದ ತೈಲ ಖರೀದಿ ಮಾಡುತ್ತಿವೆ.
ಖರೀದಿ ನಿಲ್ಲಿಸಿದವರು
ಇಂಗ್ಲೆಂಡ್‌ನ ಬಿಪಿ, ಜಪಾನ್‌ನ ಇಎನ್‌ಇಒಎಸ್, ಜರ್ಮನಿಯ ಇಎನ್‌ಐ, ನಾರ್ವೆಯ ಈಕ್ವಿನಾರ್, ಪೋರ್ಚುಗೀಸ್‌ನ ಗಾಲ್ಪ್, ಜಾಗತಿಕ ಸಂಸ್ಥೆ ಗ್ಲೆàನ್‌ಕೋರ್, ಫಿನ್‌ಲೆಂಡ್‌ನ ನೆಸ್ಟೆ, ಸ್ವೀಡನ್‌ನ ಪ್ರೀಮ್, ಸ್ಪೇನ್‌ನ ರೆನ್ಪೋಲ್, ಜಾಗತಿಕ ಸಂಸ್ಥೆ ಶೆಲ್, ಫ್ರಾನ್ಸ್‌ನ ಟೋಟಲ್ ಎನರ್ಜೀಸ್ ಸಂಸ್ಥೆಗಳು ಖರೀದಿ ನಿಲ್ಲಿಸಿವೆ ಅಥವಾ ಹೊಸ ಖರೀದಿ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿವೆ.