ಎಕ್ಸ್ ಕ್ಲ್ಯೂಸಿವ್ ಇಂಟರ್ ವ್ಯೂ – ‘ಭಾರತ ಸಂಗೀತ ಪ್ರಧಾನವಾದ ದೇಶ’ : ನಾಗೇಂದ್ರ ಪ್ರಸಾದ್

ಹಾಡುಗಳು ಭಾವ ಮತ್ತು ಭಾಷೆಗಳ ಸಮ್ಮಿಲನಗೊಂಡಿರಬೇಕು : ನಾಗೇಂದ್ರ ಪ್ರಸಾದ್

ಶ್ರೀರಾಜ್ ವಕ್ವಾಡಿ, Feb 28, 2021, 6:58 PM IST

Special Interview with Lyricist Nagendra Prasad

ಮೂರು ಸಾವಿರ ಹಾಡುಗಳ ಸರದಾರ, ಚಂದನವನದ ಮೇರು ಚಿತ್ರ ಸಾಹಿತಿ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಉದಯವಾಣಿಗೆ ಭೇಟಿ ನೀಡಿದ್ದರು. ಉದಯವಾಣಿ ಬಳಗದೊಂದಿಗೆ ಸಂಭಾಷಣಾಕಾರ, ನಿರ್ದೇಶಕ, ನಟ ಹಾಗೂ ನಿರ್ದೇಶಕರ ಸಂಘದ ಕಾರ್ಯದರ್ಶಿ.. ಹೀಗೆ ಚಿತ್ರರಂಗದ ಬಹು ಮುಖಗಳ ಸಂಕಲನ ನಾಗೇಂದ್ರ ಪ್ರಸಾದ್ ಮಾತನಾಡಿದ್ದಾರೆ. ತಮ್ಮ ವೃತ್ತಿ ಜೀವನದ ಅನೇಕ ಮಜಲುಗಳನ್ನು ಬಹಳ ಖುಷಿಯಿಂದ ತೆರೆದಿಟ್ಟಿದ್ದಾರೆ. ಅವರು ನಮ್ಮೊಂದಿಗೆ ಮಾತಾಡಿದ ಸಾರಾಂಶ ಇಲ್ಲಿದೆ.

ನೀವು ಚಿತ್ರರಂಗಕ್ಕೆ ಪ್ರವೇಶ ಪಡೆಯುವಾಗ ಆಗಿನ ಸ್ಥಿತಿ ಹೇಗಿತ್ತು..?

ಈಗ  ಅವಕಾಶಗಳು ದೊಡ್ಡ ಮಟ್ಟದಲ್ಲಿದೆ. ಆಗಿನ ಕಾಲಘಟ್ಟದಲ್ಲಿ ಪ್ರವೇಶ ಪಡೆಯುವುದೇ ದೊಡ್ಡ ಸಾಹಸವಾಗಿತ್ತು. ಈಗ ಇಡೀ ಜಗತ್ತೇ ನಮ್ಮ ಮುಷ್ಟಿಯೊಳಗಿದೆ. ನಮ್ಮದೇ ವೇದಿಕೆಯನ್ನು ಸೃಷ್ಟಿಸಿಕೊಳ್ಳಬಹುದು. ದೇವರ ಆಶೀರ್ವಾದ, ಎಲ್ಲೋ ಪಾರ್ಕ್ ನಲ್ಲಿ ಓದುತ್ತಿದ್ದವನನ್ನು ನಿರ್ದೇಶಕರಾದ ಜೆ ವಿ ಜಯರಾಮ್ ಅವರು ನನ್ನ ಬದುಕಿಗೆ ಬೆಳಕಾಗಿ ಬಂದರು. ನನ್ನ ಆಸಕ್ತಿ, ರಂಗಭೂಮಿ ಚಟುವಟಿಕೆಗಳು, ಓದು, ಕವಿತೆ ಇವೆಲ್ಲವುಗಳನ್ನು ನೋಡಿ ಸಿನಿಮಾ ರಂಗದಲ್ಲಿ ಅವಕಾಶ ಮಾಡಿಕೊಟ್ಟರು. ಅವರು ನನ್ನಲ್ಲಿ ಹೊಸತನವನ್ನು ಗುರುತಿಸಿದರು, ತಪ್ಪುಗಳನ್ನು ತಿದ್ದಿದರು, ಶ್ರದ್ಧೆಯಿಂದ ತಿದ್ದಿಕೊಂಡು ಬೆಳೆಯುವುದಕ್ಕೆ ಮಾರ್ಗ ಮಾಡಿಕೊಟ್ಟರು. ಮುಂದೆ ಅವಕಾಶಗಳು ಬರಲಾರಂಭಿಸಿದವು.

ಹಾಡುಗಳು ಸಿನಿಮಾಗಳಿಗೆ ಎಷ್ಟು ಮುಖ್ಯವಾಗುತ್ತದೆ…?  

ಈ ದೇಶ ಸಂಗೀತವನ್ನು ಒಳಗೊಂಡಿರುವ ದೇಶ. ಭಾರತ ಸಂಗೀತ ಪ್ರಧಾನವಾದ ದೇಶ. ಇಲ್ಲಿ ಎಲ್ಲಿ ಹೋದರೂ ಸಂಗೀತದ ಅಲೆ ಇದೆ. ಹಾಗಾಗಿ ಸಿನಿಮಾಗಳನ್ನು ಸಂಗೀತವಿಲ್ಲದೇ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಡುಗಳು ಸಿನಿಮಾಗಳಿಗೆ ಶಕ್ತಿ ತುಂಬುತ್ತವೆ. ಹಾಡುಗಳು ಸಿನಿಮಾಗಳಿಗೆ ಇಂಡೆಕ್ಸ್ ಆಗಿ ಕೆಲಸ ಮಾಡುತ್ತವೆ. ಸಿನಿಮಾದ ಕಥೆ ಎಷ್ಟು ಮುಖ್ಯವೋ, ಹಾಡುಗಳು ಕೂಡ ಅಷ್ಟೇ ಮುಖ್ಯ. ಕಥೆ ಮತ್ತು ಹಾಡುಗಳು ಒಂದಕ್ಕೊಂದು ಆಂತರ್ಯದಲ್ಲಿ ಸಮ್ಮಿಲನಗೊಂಡಿರುತ್ತವೆ. ಸಿನಿಮಾಗಳು ಹಾಡುಗಳನ್ನು ಬಿಟ್ಟಿರುವುದಕ್ಕೆ ಸಾಧ್ಯವಿಲ್ಲ.

ನೀವು ಮೆಲೋಡಿ ಹಾಗೂ ಟಪಾಂಗುಚ್ಚಿ, ವಿಷಾದದ ಹಾಡುಗಳಿಗೆ ಫೇಮಸ್. ನೀವು ಎಲ್ಲಾ ಥರದ ಹಾಡುಗಳನ್ನು ಬರೆಯುತ್ತೀರಿ. ಹೇಗೆ ಸಾಧ್ಯ..?

ಓದು ಮತ್ತು ತಿಳುವಳಿಕೆಯಿಂದ ಇದು ಸಾಧ್ಯ. ಹಾಡು, ಬರೆದವನಿಗಷ್ಟೇ ಇಷ್ಟವಾದರೆ ಸಾಲದು ಅದು ಕೇಳುಗನಿಗೂ ಹಿತವಾಗಬೇಕು, ಇಷ್ಟವಾಗಬೇಕು. ಕೇಳುಗನನ್ನು ಕೂಡ ಗಮನದಲ್ಲಿಟ್ಟುಕೊಂಡು ಕವಿಯಾದವನು ಬರೆಯಬೇಕಾಗುತ್ತದೆ. ಕೆಲವೊಂದನ್ನು ಕೇಳುವವರು ಒಪ್ಪುತ್ತಾರೆ. ಕೆಲವೊಂದನ್ನು ಒಪ್ಪುವುದಿಲ್ಲ. ನಾವು ಬರೆಯುವಾಗ ಎಲ್ಲಾ ಹಾಡುಗಳನ್ನು ಹಿಟ್ ಆಗಲೇಬೇಕು ಎಂದು ಬರೆಯಬೇಕು. ಆಗ ಮಾತ್ರ ಹಾಡು ಗೆಲ್ಲುವುದಕ್ಕೆ ಸಾಧ್ಯ.

ಈಗಿನ ಹಾಡುಗಳಲ್ಲಿ ಸಾಹಿತ್ಯಕ್ಕಿಂತ ಸೌಂಡ್ ಜಾಸ್ತಿಯಾಗಿರುತ್ತದೆ ಮತ್ತು ವೆಸ್ಟರ್ನ್ ಟಚ್ ಎಲ್ಲಾ ಥರದ ಹಾಡುಗಳಲ್ಲಿ ಸೇರಿಸಿಕೊಳ್ಳುತ್ತಿರುವ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯ..?

ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಹಾಡುಗಳಲ್ಲಿ ಹೆಚ್ಚು ಶಕ್ತಿ ಇದ್ದರೆ ಅದು ಉಳಿಯುತ್ತದೆ. ಹಾಗಿದ್ದಾಗ ಮಾತ್ರ ಆ ಹಾಡು ಎಷ್ಟೇ ವರ್ಷದ ಹಿಂದಿನ ಹಾಡಾದರೂ ಕೂಡ ಎಲ್ಲರ ಬಾಯಲ್ಲೂ ಅನುರಣಿಸುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಗಟ್ಟಿತನವಿಲ್ಲದ ಹಾಡುಗಳು ಬದುಕುವುದು ಕೇವಲ ನಾಲ್ಕು ಮತ್ತೊಂದು ದಿನ ಮಾತ್ರ. ಕಾಲಾಂತರದ ಬೆಳವಣಿಗಳು ಕೆಲವೊಮ್ಮೆ ಸಮಾಧಾನಕರವಲ್ಲವಾಗಿದ್ದರೂ ಕೂಡ ಒಪ್ಪಿಕೊಳ್ಳಬೇಕಾದ ಸ್ಥಿತಿ ಇದೆ.

ಕನ್ನಡದ ಹಾಡುಗಳ ನಡುವೆ ಪರಭಾಷೆಗಳ ನುಸುಳುವಿಕೆ ಸರಿಯೇ..?

ಇದಕ್ಕೆ ಕೆಲವರ ಭಿನ್ನಾಭಿಪ್ರಾಯಗಳಿವೆ. ದೊಡ್ಡ ತಪ್ಪೇನಲ್ಲ. ನಿತ್ಯ ನಾವಾಡುವ ಮಾತುಗಳಲ್ಲಿ ಎಷ್ಟೋ ಶಬ್ದಗಳು ಪರಭಾಷೆಯಿಂದ ಬಂದಿರುವವುಗಳಾಗಿರುತ್ತವೆ. ಕಾಲಕ್ಕನುಸಾರವಾಗಿ ಒಮ್ಮೊಮ್ಮೆ ಬಳಸಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಕವಿಯಾದವನಿಗೆ ವಿಷಯ ತಲುಪಿಸುವುದು ಮುಖ್ಯವಾಗಿರುತ್ತದೆ. ಚಿತ್ರ ಸಾಹಿತ್ಯಗಳಿಗೆ ಎಲ್ಲಾ ವರ್ಗದ ಜನರಿಗೆ ತಲುಪಬೇಕಾಗಿರುವ ಸವಾಲುಗಳು ಇರುವುದರಿಂದ ಈ ಪರಭಾಷೆಗಳ ಬಳಕೆ ಒಮ್ಮೊಮ್ಮೆ ಬೇಕಾಗುತ್ತದೆ. ಈ ವಿಚಾರಕ್ಕೆ ತುಂಬಾ ತರ್ಕಗಳಿವೆ. ತುಂಬಾ ವಿಮರ್ಶೆ ಮಾಡುವ ಅಗತ್ಯವಿರುವ ವಿಚಾರ ಅಲ್ಲವಿದು ಅನ್ನಿಸುತ್ತದೆ.

ಗೀತೆ ರಚನಾಕಾರ ಹಾಗೂ ಸಂಗೀತ ಸಂಯೋಜಕರ ನಡುವೆ ಸಂಬಂಧ ಹೇಗಿರಬೇಕು..?

ಗೀತೆ ರಚನೆಕಾರ ಹಾಗೂ ಸಂಗೀತ ಸಂಯೊಜಕ ಗಂಡ ಹೆಂಡತಿ ಇದ್ದ ಹಾಗೆ. ಒಬ್ಬರಿಗೊಬ್ಬರ ಸಹಕಾರದಿಂದ ಒಂದು ಹಾಡು ಗೆಲ್ಲುವುದಕ್ಕೆ ಸಾಧ್ಯ. ಈ ಇಬ್ಬರ ನಡುವಿನ ಕೊಂಡಿ ಕಳಚಿದರೇ ಹಾಡು ಹಿಟ್ ಆಗುವುದಕ್ಕೆ ಸಾಧ್ಯವಿಲ್ಲ. ಗೀತರಚನೆಕಾರ ಎಷ್ಟು ಮುಖ್ಯನೋ, ಸಂಗಿತ ಸಂಯೋಜಕನೂ ಅಷ್ಟೇ ಮುಖ್ಯ. ಒಂದು ಉತ್ತಮವಾದ ಹಾಡು ರೂಪ ಪಡೆಯಬೇಕಾದರೇ ಅಲ್ಲಿ ಈ ಇಬ್ಬರ ಸಂಬಂಧವೂ ಉತ್ತಮವಾಗಿರಬೇಕಾಗುತ್ತದೆ.

ಚಿತ್ರ ಸಾಹಿತ್ಯದಲ್ಲಿ ಗದ್ಯರೂಪಿ ಪದ್ಯಗಳು ಈಗೀಗ ಹೆಚ್ಚಾಗಿ ಬರುತ್ತಿವೆ ಅವುಗಳ ಬಗ್ಗೆ ಏನಂತೀರಿ..?

ಪ್ರಾಸ ಇದ್ದರೆ ಸಾಕು ಎನ್ನುವ ಒಂದು ವರ್ಗ, ಪ್ರತಿಸಾಲುಗಳಿಗೂ ಸೇತು ಬೇಕು ಎನ್ನುವ ವಿಚಾರ ಗೊತ್ತೇ ಇಲ್ಲದ ವರ್ಗ ನಮ್ಮಲ್ಲಿದೆ. ಹಾಡುಗಳಿಗೆ ಇರಬೇಕಾದ ಮಿನಿಮಮ್ ಕ್ವಾಲಿಟೀಸ್ ಏನಿದೆ ಎನ್ನುವ ವಿಚಾರ ಗೊತ್ತಿಲ್ಲದವರೂ ಹಾಡುಗಳನ್ನು ಬರೆದಾಗ ಇಂತಹುಗಲೆಲ್ಲಾ ಹುಟ್ಟಿಕೊಳ್ಳುತ್ತವೆ.

ಈ ಟೀ ಟಾಕ್ ಟೈಮ್ ನಲ್ಲಿ ಉದಯವಾಣಿ ಬಗ್ಗೆ ಏನಾದರೂ ಬರೆಯಬಹುದಾ..?

ಹ್ಹೋ ಹ್ಹೋ… ಬಂದ್ರು ನೋಡಿ ಟ್ರ್ಯಾಕ್ ಗೆ.. ಖಂಡಿತ ಬರೆಯೋಣ… ಅದಕ್ಕೇನಂತೆ.. ಉದಯವಾಣಿ ಬಗ್ಗೆ ಅಪಾರ ಗೌರವವಿದೆ. ನನ್ನ ಬಗ್ಗೆ ಹಲವು ಲೇಖನಗಳು ಉದಯವಾಣಿಯಲ್ಲಿ ಬಂದಿವೆ. ನಾನೇ ಬರೆದ ಹಾಡುಗಳು ಬಂದಿವೆ. ವಾಚಕರ ವಾಣಿಗೆ ಕಳುಹಿಸಿದ ಅಭಿಪ್ರಾಯಗಳು ಕೂಡ ಪ್ರಕಟಗೊಂಡಿವೆ.. ಅಂತ ಹೇಳುತ್ತಾ… ಉದಯವಾಣಿಯ ಬಗ್ಗೆ ಕೇವಲ ಐದು ನಿಮಿಷಗಳೊಳಗಾಗಿ ಬರೆದ ಕಾವ್ಯ ಇಲ್ಲಿದೆ.

ಚಲನ ಚಿತ್ರ ಸಾಹಿತ್ಯಗಳು ಹೇಗಿರಬೇಕು..? ಹೀಗೆಯೇ ಇರಬೇಕು ಅಂತ ನಿಯಮಗಳೇನಾದರು ಇವೆಯೇ..?

ಹಾಡುಗಳು ಹಾಡುಗಳಾಗಿರಬೇಕು. ಲಯ ಬದ್ಧವಾಗಿರಬೇಕು. ಎಲ್ಲದಕ್ಕಿಂತ ಹೆಚ್ಚು ಭಾವ ಮತ್ತು ಭಾಷೆಗಳ ಸಮ್ಮಿಲನಗೊಂಡಿರಬೇಕು. ಬರೆದವುಗಳೆಲ್ಲಾ ಹಾಡಾಗುವುದಿಲ್ಲ. ಅದರೊಳಗೆ ಶಕ್ತಿಯುತವಾದ ಸತ್ವವೂ ಬೇಕು.

ದಕ್ಷಿಣ ಭಾರತದ ಸಂಗೀತ ಕ್ಷೇತ್ರದ ದಂತಕಥೆಗಳಾದ ಇಳಯರಾಜ, ಎಸ್ ಪಿ ಬಿ ಹಾಗೂ ಯೇಸುದಾಸ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು..?

ಅವರ ಬಗ್ಗೆ ಮಾತಾಡುವಷ್ಟು ನಾನು ದೊಡ್ದ ವ್ಯಕ್ತಿಯಲ್ಲ. ಅವರ ಜೊತೆ ಕೆಲಸ ಮಾಡಿರುವುದೇ ನನ್ನ ಪಾಲಿನ ಯೋಗ. ಸಂಗೀತದ ಮೇಲೆ ಅವರಿಗಿದ್ದ ಅಪಾರವಾದ ಪ್ರೀತಿ ಮತ್ತು ಶ್ರದ್ಧೆ ಅವರನ್ನು ಆ ಎತ್ತರಕ್ಕೆ ಬೆಳೆಸಿದೆ. ಆ ಮಟ್ಟಕ್ಕೆ ಇದುವರೆಗೂ ಯಾರಿಗೂ ತಲುಪಲು ಸಾಧ್ಯವಾಗಿಲ್ಲ. ಮುಂದೆನೂ ಆಗಲ್ಲ ಅನ್ನಿಸುತ್ತದೆ.

ಒಬ್ಬ ಗೀತ ರಚನಾಕಾರನಿಗೆ ಇರಬೇಕಾದ ಪ್ರಮುಖ ಲಕ್ಷಣಗಳೇನು..?

ಭಾಷೆ ಸ್ಪಷ್ಟವಾಗಿ ಗೊತ್ತಿರಬೇಕು. ಭಾಷೆಯ ಪಂಡಿತ ಆಗಬೇಕಂತಿಲ್ಲ. ಭಾಷೆಯ ಸಾಂಸ್ಕೃತಿಕ ಪ್ರಜ್ಞೆ ಇರಬೇಕು. ಓದು ಬಹಳ ಮುಖ್ಯ. ಕಲಿಯುವ ತುಡಿತ ಇರಬೇಕು. ಗೊತ್ತಿಲ್ಲದ ವಿಷಯದ ಬಗ್ಗೆ ತಿಳಿದುಕೊಳ್ಳುವ ಮನಸ್ಥಿತಿ ಇರಬೇಕು. ವಿಷಯ ತಲೆಯಲ್ಲಿಲ್ಲದೇ ಬರಹಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ ಓದು ಮುಖ್ಯ.

ಅಕ್ಷರಕ್ಕೆ : ಶ್ರೀರಾಜ್ ವಕ್ವಾಡಿ 

ಓದಿ :  ಉದಯವಾಣಿ ಕಚೇರಿಗೆ ಖ್ಯಾತ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಭೇಟಿ

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.