Udayavni Special

ಆ್ಯಂಗ್ರಿ ಹನುಮಾನ್ ಚಿತ್ರ… ಇವರ ಗ್ರಾಫಿಕ್ ಕಲೆ ಸಿಕ್ಕಾಪಟ್ಟೆ ವೈರಲ್…ಯಾರಿವರು?


ಸುಹಾನ್ ಶೇಕ್, Sep 9, 2020, 6:55 PM IST

WEB-TYD-1

ಸಾಮಾಜಿಕ ಜಾಲತಾಣದಲ್ಲಿ ದಿನವೊಂದಕ್ಕೆ ಲಕ್ಷಾಂತರ ವಿಷಯಗಳು ಹರಿದಾಡುತ್ತವೆ. ಇಂಥ ಲಕ್ಷಾಂತರ ವಿಷಯಗಳಲ್ಲಿ ಕೆಲವೊಂದು ವಿಶೇಷವಾಗಿ ಕಣ್ಣ ಮುಂದೆ ಬಂದು ವೈರಲ್ ಆಗಿ ಎಲ್ಲೆಡೆ ಶೇರ್ ಆಗುತ್ತವೆ.ವೈರಲ್ ಆದ ಕೆಲವೊಂದು ವಿಷಯಗಳು ನಮ್ಮ ಮುಂದೆ ಚರ್ಚೆಯ ವಿಷಯವಾಗಿಯೂ, ಶಹಬ್ಬಾಸ್ ಗಿರಿ ಪಡೆಯುವ ವಿಷಯವಾಗಿಯೂ ಚಾಲ್ತಿಯಲ್ಲಿರುತ್ತದೆ. ಇಂಥದ್ದೇ ಒಂದು ವೈರಲ್ ಫೋಟೋ ಒಂದರಿಂದ ಇಂದು ಸಾಮಾಜಿಕ ಜಾಲತಾಣದಲ್ಲಿ ತನ್ನ ಗ್ರಾಫಿಕ್ ಕಲೆಯಿಂದ ಎಲ್ಲರನ್ನು ಬೆರಗುಗೊಳಿಸುತ್ತಿರುವ ಕರಣ್ ಆಚಾರ್ಯ ಎನ್ನುವವರ ಕಥೆಯಿದು.

ಕರಣ್ ಆಚಾರ್ಯ ಹುಟ್ಟಿದ್ದು ಕೇರಳದ ಕುಡ್ಲುನಲ್ಲಿ. ಬಾಲ್ಯದಲ್ಲಿ ಅಪ್ಪ ಅಮ್ಮನ ಆರೈಕೆ, ಅಜ್ಜಿ ಹೇಳುವ ರಾಮಾಯಣದ ಕಥೆ ಕೇಳಿಕೊಂಡು ಬೆಳೆದ ಹುಡುಗ. ಆಗಿನ್ನೂ ಪುಟ್ಟ ವಯಸ್ಸು ಕೈಯಲ್ಲೊಂದು ಕುಂಚ ಹಿಡಿದು ಡ್ರಾಯಿಂಗ್ ಶೀಟುನಲ್ಲಿ ಅದ್ಭುತವಾಗಿ ಕಲೆಯನ್ನು ಬಿಡಿಸುವಂಥ ಪ್ರತಿಭೆ ಆವಾಗಲೇ ಅಚ್ಚಾಗಿ ಇತ್ತು. ಧಾರ್ಮಿಕ,ಪೌರಾಣಿಕ ಕಥೆ ಕೇಳುತ್ತಾ,ಕೈಯಲ್ಲಿ ಕುಂಚುವನ್ನು ಅರಳಿಸಿ ಕಲಾ ಪ್ರಪಂಚಕ್ಕೆ ಮನಸ್ಸು ಹಾತೊರೆಯಿತು.ಬಾಲ್ಯ ಕಳೆದು ಯೌವನದ ದಿನಗಳಲ್ಲೂ ಅಡಗಿದ್ದ ಪ್ರತಿಭೆಯನ್ನು ಪ್ರೋತ್ಸಾಹಿಸುವ ಗೆಳೆಯರು, ಹಿತೈಷಿಗಳು ಜೊತೆಯಾಗಿಯೇ ಇದ್ದರು. ಕರಣ್ ಇವರೆಲ್ಲರ ಸಹಕಾರದಿಂದ ಗ್ರಾಫಿಕ್ ಡಿಸೈನಿಂಗ್ ನಲ್ಲಿ ಒಂದಿಷ್ಟು ಹೆಸರುಗಳಿಸಿಕೊಂಡರು.

ವೈರಲ್ ಆದ ಆ್ಯಂಗ್ರಿ ಹನುಮಾನ್ ಚಿತ್ರ : ಅದು 2015 ರ ಒಂದು ದಿನ ಊರಿನಲ್ಲಿ ಧಾರ್ಮಿಕ ಕಾರ್ಯಕ್ರಮದ ಕುರಿತು, ಸ್ನೇಹಿತರೊಂದಿಗೆ ಚರ್ಚೆ ಮಾಡುತ್ತಾ,ವಿವಿಧ ಯೋಜನೆಗಳೊಂದಿಗೆ ಈ ಬಾರಿಯ ಗಣೇಶ ಚತುರ್ಥಿಯ ಹಬ್ಬಕ್ಕೆ ತಯಾರಿ ನಡೆಸುತ್ತಾ ಇತ್ತು ಕರಣ್ ಮತ್ತು ಅವರ ಸ್ನೇಹಿತರ ತಂಡ. ದೇವಸ್ಥಾನದ ಧ್ವಜಕ್ಕೆ ಒಂದೊಳ್ಳೆ ಡಿಸೈನ್ ಬೇಕೆಂದ ಸ್ನೇಹಿತನೊಬ್ಬನ ಮಾತಿಗೆ ಕರಣ್ ತನ್ನ ತಲೆ ಹಾಗೂ ಕಲೆ ಉಪಯೋಗಿಸಿಕೊಂಡು ಲ್ಯಾಫ್ ಟಾಪ್ ಪರೆದೆ ಮುಂದೆ ಅರ್ಧ ಗಂಟೆ ಕೂರುತ್ತಾರೆ. ಅರ್ಧ ಗಂಟೆಯ ಬಳಿಕ ಕೇಸರಿ ಬಣ್ಣದ ನಡುವೆ ಕಪ್ಪು ಬಣ್ಣದ ಆಕೃತಿಯೊಂದಿಗೆ ಹನುಮಾನ್ ಚಿತ್ರವೊಂದು ಮೂಡಿ ಬರುತ್ತದೆ. ಒಂದಿಷ್ಟು ಎಫೆಕ್ಟ್ ಗಳೊಂದಿಗೆ ಹನುಮಾನ್ ಉಳಿದ ಚಿತ್ರಗಳಿಗಿಂತ ಭಿನ್ನವಾಗಿ ಕಾಣುತ್ತದೆ.

ಈ ಹನುಮಾನ್ ಚಿತ್ರವನ್ನು ಮಂದಿರದ ಧ್ವಜಕ್ಕೆ ಹಾಕಲು ಆಗಬಹುದೇ ಎಂದು ಮಾಡಿಟ್ಟ ಮಾದರಿಯನ್ನು ಸ್ನೇಹಿತನಿಗೆ ಕಳುಹಿಸಿ ಕೊಡುತ್ತಾರೆ. ಕರಣ್ ಸ್ನೇಹವಲಯ ಈ ಚಿತ್ರವನ್ನು ಇಷ್ಟಪಟ್ಟು ಕರಣ್ ಗೆ ಗೊತ್ತಾಗದೆ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾರೆ. ಇದು ಕ್ಷಣ ಮಾತ್ರದಲ್ಲಿ ನೂರಾರು ಲೈಕ್ಸ್, ಸಾವಿರಾರು ಶೇರ್ ಗಳಾಗಿ, ಧರ್ಮದ ಪ್ರತೀಕವೆಂಬಂತೆ ದಿನ ಕಳೆದಂತೆ ಬೈಕ್,ಗಾಡಿ ಹಾಗೂ ಧ್ವಜವಾಗಿ ರಾರಾಜಿಸುತ್ತದೆ.ಕರಣ್ ಇದು ಇಷ್ಟು ವೈರಲ್ ಆಗುತ್ತದೆ ಎನ್ನುವುದನ್ನು ಅಂದುಕೊಂಡು ಇರಲಿಲ್ಲ. ಊರಿನ ಧಾರ್ಮಿಕ ಕಾರ್ಯಕ್ರಮಕ್ಕೆ ಮಂದಿರದ ಧ್ವಜವಾಗಿ ಮಾಡಲ್ಪಟ್ಟ ಆ್ಯಂಗ್ರಿ ಹನುಮಾನ್ , ಚಿತ್ರ ಇಂದಿಗೂ ಎಲ್ಲೆಡೆ ವೈರಲ್.

ಇಷ್ಟು ಮಾತ್ರವಲ್ಲದೆ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣೆಯ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಾಗ ಕರಣ್ ಆಚಾರ್ಯರ ಹನುಮಾನ್ ಕಲೆಯನ್ನು ಕೊಂಡಾಡಿದ್ದರು.

 

ಸಾಮಾನ್ಯರನ್ನು ಅಸಾಮನ್ಯರಾಗಿ ಮಾಡುವ ಪೌರಣಿಕ ಚಿತ್ರಗಳು :  ಕರಣ್ ಇಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಅದಕ್ಕೆ ಕಾರಣ ಅವರ ಸರಳತೆ. 2015 ಬಳಿಕ ಅವರು ಮಾಡಿದ ಒಂದೊಂದು ಗ್ರಾಫಿಕ್ ಕಲೆಯೂ ವೈರಲ್ ಆಗಿವೆ. ಶ್ರೀರಾಮನ ಗ್ರಾಫಿಕ್ ಚಿತ್ರ, ಶಿವ ದೇವರ ಗ್ರಾಫಿಕ್ ಚಿತ್ರ, ಸ್ವಾಮಿ ವಿವೇಕಾನಂದರ ಗ್ರಾಫಿಕ್ ಚಿತ್ರ ಹೀಗೆ ಸಾಲು ಸಾಲಾಗಿ ಇವರ ಸ್ಪರ್ಶದಿಂದ ಮೂಡಿದೆಲ್ಲೆವೂ ಭಿನ್ನವಾಗಿ ಮೂಡಿ ಬಂದಿದೆ.

ಪುಟ್ಟ ಬಾಲಕನೊಬ್ಬ ಅರೆ ತಿರುಗಿ ನಿಂತಿರುವ ಚಿತ್ರವನ್ನು ತನ್ನ ಕ್ರಿಯೇಟಿವಿಟಿಯಿಂದ ಕರಣ್ ಬಾಲಕನನ್ನು ಬಿಲ್ಲು ಹಿಡಿದ ರಾಮನಂತೆ ಗ್ರಾಫಿಕ್ ನಲ್ಲಿ ಎಡಿಟ್ ಮಾಡಿರುವ ಫೋಟೋ, ಗ್ರಾಮೀಣ ಭಾಗದ ಕುಟುಂಬವೊಂದು ತನ್ನ ಪುಟ್ಟ ಮಗುವನ್ನು ಮುದ್ದಾಡಿಸುತ್ತಿರುವ ಫೋಟೋವೊಂದು ಕರಣ್ ಆಚಾರ್ಯರಿಗೆ ಎಡಿಟ್ ಮಾಡಲು ವ್ಯಕ್ತಿಯೊಬ್ಬರು ಕಳುಹಿಸಿ ಕೊಟ್ಟಾಗ ಅದನ್ನು ಕರಣ್ ತನ್ನದೇ ಶೈಲಿಯಲ್ಲಿ ಪೌರಣಿಕ ಸ್ಪರ್ಶ ಕೊಟ್ಟು ಕೃಷ್ಣನ ಕುಟುಂಬದ ಕುಡಿಯಾಗಿ ಮಾಡಿರುವುದು ವೈರಲ್ ಆಗಿದೆ. ತೀರ ಇತ್ತೀಚಿಗೆ ವಿಶೇಷ ಚೇತನ ಹುಡುಗನೊಬ್ಬ ಕೂತಿರುವ ಫೋಟೋವೊಂದನ್ನು ಕರಣ್ ಅವರಿಗೆ ಕಳುಹಿಸಿದಾಗ ಕರಣ್ ಕೆಲವೇ ಕ್ಷಣದಲ್ಲಿ ಪೌರಣಿಕ ಮೆರೆಗು ಕೊಟ್ಟು ಕುರುಕ್ಷೇತ್ರ ಯುದ್ಧ ಭೂಮಿಯ ಕೃಷ್ಣನನ್ನು ಮೂಡಿಸಿದ್ದಾರೆ. ಹೀಗೆ ಕರಣ್  ಬಿಡುವಿನ ವೇಳೆಯಲ್ಲಿ ಯಾವುದೇ ಶುಲ್ಕವಿಲ್ಲದೆ ಗ್ರಾಫಿಕ್ ವರ್ಕ್ ಗಳನ್ನು ಮಾಡಿ ಕೊಡುತ್ತಿದ್ದಾರೆ. ಪ್ರತಿನಿತ್ಯ ಕರಣ್ ಅವರಿಗೆ ಎರಡು ಸಾವಿರಕ್ಕೂ ಅಧಿಕ ಫೋಟೋಗಳು ಜನರಿಂದ ಎಡಿಟ್ ಮಾಡಿಕೊಡಿ ಎಂದು ಮನವಿಯಾಗಿ ಬರುತ್ತಿದೆ.ಅದರಲ್ಲಿ ಕೆಲವೊಂದನ್ನು ಅವರು ಆಯ್ಕೆ ಮಾಡಿಕೊಂಡು ಎಡಿಟ್ ಮಾಡಿ ಆಪ್ಲೋಡ್ ಮಾಡುತ್ತಾರೆ. ಇದು ಎಲ್ಲೆಡೆ ಶೇರ್ ಆಗಿ ಕರಣ್ ಅವರ ಕಲೆಗೆ ಬೆಂಬಲ ಹಾಗೂ ಮುಂದೆ ಹೋಗಲು ಹಂಬಲವನ್ನು ನೀಡುತ್ತದೆ.

 

ಸದ್ಯ ಬೈಜೂಸ್ ಕಂಪೆನಿಯಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಕರಣ್ ಆಚಾರ್ಯ. ಬಿಡುವಿನ ವೇಳೆಯಲ್ಲಿ ಗ್ರಾಫಿಕ್ ವರ್ಕ್ ಗಳನ್ನು ಮಾಡುತ್ತಾರಂತೆ. ಸಾಮಾಜಿಕ ಜಾಲತಾಣದಲ್ಲಿ ಕರಣ್ ಅವರ ಗ್ರಾಫಿಕ್ ಚಿತ್ರಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತಿವೆ.

 

-ಸುಹಾನ್ ಶೇಕ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

kalapa

ಕಲಾಪಗಳಿಗೆ ಗದ್ದಲದ ಸೋಂಕು

ಚಂದ್ರನಲ್ಲಿ ಮೊದಲ ಮಹಿಳೆ ಇಳಿಸಲು ನಾಸಾ ಸಿದ್ಧತೆ

ಚಂದ್ರನಲ್ಲಿ ಮೊದಲ ಮಹಿಳೆ ಇಳಿಸಲು ನಾಸಾ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

01

ಕೈಗಳಿಲ್ಲದ ಯುವಕನಿಗೆ ಇಂದು ಕಲೆಯೇ ಎಲ್ಲಾ! ನೀವು ಬಲ್ಲಿರಾ ಖತ್ರಿಯ ಕಥೆ?

Krishna-Bhat-600×300.jpg

ವಯಸ್ಸು 97…ಇನ್ನೂ ಬತ್ತದ ಉತ್ಸಾಹ; ತುಳು ಲಿಪಿ ತಜ್ಞ ಈ ಅಜ್ಜಯ್ಯ

ಕ್ರಿಕೆಟ್ ಈ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಿಕ್ಸ್ ಹೋದರು ಡೆಡ್ ಬಾಲ್? ಕ್ರಿಕೆಟ್ ಈ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಿಟಮಿನ್ ಸಿ ಆಹಾರ

ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ “ವಿಟಮಿನ್ ಸಿ” ಆಹಾರಗಳು…

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.