ಸ್ಟೇಟಸ್ ನಲ್ಲಿ ಸ್ಟಾರ್ ಆದ ಪುಟ್ಟ ಹುಡುಗಿ ಕಿರಿ ವಯಸ್ಸಿನಲ್ಲೇ ಬಣ್ಣದ ಲೋಕದಲ್ಲಿ ಖ್ಯಾತಿ

Team Udayavani, Mar 25, 2021, 9:00 AM IST

Untitled-1

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಸಂಗತಿಗಳ ಹಿಂದೆ ಕೆಲವೊಂದು ರೋಚಕ ವಿಚಾರಗಳು ಅಡಗಿರುತ್ತವೆ. ಅನಿರೀಕ್ಷಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಷಯಗಳು ಮನರಂಜನೆಗೆ ಸೀಮಿತವಾಗಿರದೆ, ಕೆಲವೊಮ್ಮೆ ಒಂದು ಸಂಚಲನವನ್ನೇ ಸೃಷ್ಟಿ ಮಾಡಿ ಬಿಡುವುದುಂಟು.

ಇತ್ತೀಚೆಗೆ ಪುಟ್ಟ ಹುಡುಗಿಯೊಬ್ಬಳು ಬಿಂದಾಸ್ ಆಗಿ ಡ್ಯಾನ್ಸ್ ಸ್ಟೆಪ್ ಹಾಕಿರುವ ವಿಡಿಯೋ ಎಲ್ಲರ ಮೊಬೈಲ್ ಒಳಗೆ ಮೂವತ್ತು ಸೆಕೆಂಡ್ ಗಳ ಸ್ಟೇಟಸ್ ಆಗಿ ಮೆರೆದಾಡಿದ್ದನ್ನು ನೀವೂ ಕಂಡಿರಬಹದು. ಪುಟ್ಟ ಹುಡುಗಿಯ ಮುಗ್ಧತೆ ತುಂಬಿದ ಮುಖದಲ್ಲಿನ ನಗುವಿಗೆ ಫಿದಾ ಆಗಿ ನೀವೂ ಕೂಡ ಡ್ಯಾನ್ಸ್ ನ ವಿಡಿಯೋವನ್ನು ಸ್ಟೇಟಸ್ ಗೆ ಹಾಕಿರಬಹುದು. ಅಂದ ಹಾಗೆ ವೈರಲ್ ಆದ ಬಾಲೆಯ ಹೆಸರು ವೃದ್ಧಿ ವಿಶಾಲ್. 5 ರ ವಯಸ್ಸು. ಕಿರುತೆರೆಯಲ್ಲಿ ಈಕೆ ಅನುಮೋಲ್ ಎಂದೇ ಖ್ಯಾತಿಗಳಿಸಿ ಪ್ರೇಕ್ಷಕರ ಮನಗೆದ್ದವಳು.

ವೃದ್ಧಿಯ ತಂದೆ ತಾಯಿ ಇಬ್ಬರು ವೃತ್ತಿಪರ ಡ್ಯಾನ್ಸ್ ರ್ ಗಳು. ವೃದ್ಧಿ ಸಣ್ಣವಯಸ್ಸಿನಲ್ಲೇ ಟಿಕ್ ಟಾಕ್ ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಳು. ನಂತರ ಜಾಹೀರಾತಿನಲ್ಲಿ ತನ್ನ ಮುಗ್ಧತೆಯಿಂದ ನೋಡುಗರ ಗಮನ ಸೆಳೆದು, ಮಲಯಾಳಂ ಧಾರವಾಹಿಯೊಂದರಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಆ ಧಾರವಾಹಿಯೇ ‘ಮಂಜಿಲ್ ವಿರಿಂಜ ಪೂವು’. ಇದರಲ್ಲಿ ವೃದ್ಧಿ ಅವರ ಪಾತ್ರದ ಹೆಸರು ಅನುಮೋಲ್. ಧಾರವಾಹಿ ಎಷ್ಟು ಪ್ರಸಿದ್ಧಿಯಾಗುತ್ತದೋ ಅಷ್ಟೇ ಖ್ಯಾತಿ ವೃದ್ಧಿ ಅವರ ಪಾತ್ರಕ್ಕೂ ದೊರೆಯುತ್ತದೆ. ವೃದ್ಧಿ ಅವರ ತಂದೆ ತಾಯಿ ವೃದ್ಧಿಯ ಡ್ರೀಮ್ ಹೀರೋ ನಟ ಅಲ್ಲು ಅರ್ಜುನ್ ರನ್ನು ಭೇಟಿ ಮಾಡಿಸುತ್ತೇವೆ ಎಂದು ಹೇಳಿ ಧಾರವಾಹಿಯಲ್ಲಿ ನಟಿಸಲು ಪ್ರೋತ್ಸಾಹಿಸುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೃದ್ಧಿ ಅವರ ಡ್ಯಾನ್ಸ್ ಸ್ಟೆಪ್ ಗಳು,  ‘ಮಂಜಿಲ್ ವಿರಿಂಜ ಪೂವು ಧಾರಾವಾಹಿಯ ನಾಯಕ ಅಖಿಲ್ ಆನಂದ್ ಅವರ ಮದುವೆ ಕಾರ್ಯಕ್ರಮದ್ದು. ಮದುವೆ ಕಾರ್ಯಕ್ರಮದಲ್ಲಿ ಧಾರಾವಾಹಿಯ ಇತರ ಕಲಾವಿದರೊಂದಿಗೆ ಹೆಜ್ಜೆ ಹಾಕಿದ  ವೃದ್ಧಿ ನಟ ಅಲ್ಲು ಅರ್ಜುನ್ ಅಭಿನಯದ ‘ಅಲ್ಲಾ ವೆಂಕಟ ಪುರಂ’ ಚಿತ್ರದ ‘ರಾವಲೋ ರಾವಲೋ’ ಹಾಡಿಗೆ ವೃದ್ಧಿ ಮುಗ್ಧತೆ ತುಂಬಿದ ಹೆಜ್ಜೆಗಳನ್ನು ನೋಡಿದಾಗ ಎಂಥವವರಿಗೂ ಖುಷಿ ಆಗುತ್ತದೆ. ವೃದ್ಧಿಯ ಹೆಜ್ಜೆಗೆ ಪ್ರೋತ್ಸಾಕರಾಗಿ ಹೆಜ್ಜೆ ಹಾಕುತ್ತಾರೆ ಧಾರಾವಹಿಯ ಸಹ ಕಲಾವಿದರು. ವೃದ್ಧಿಅದೇ ವೇದಿಕೆಯಲ್ಲಿ ಇನ್ನೊಂದು ಹಾಡಿ, ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರದ  ‘ವಾತಿ ಕಮಿಂಗ್’ ಹಾಡಿಗೆ ಉತ್ಸುಕರಾಗಿ ಹೆಜ್ಜೆ ಹಾಕುತ್ತಾರೆ. ಈ ಎರಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಷ್ಟೋ ಮಂದಿಯ ಮೊಬೈಲ್ ಸ್ಟೇಟಸ್ ಮರೆದಾಡುತ್ತದೆ.

ವರದಿಯ ಪ್ರಕಾರ ವೃದ್ಧಿಗೆ ಈ ವಿಡಿಯೋದ ಬಳಿಕ ಸಿನಿಮಾಗಳ ನಟಿಸುವ ಅವಕಾಶವೂ ಹುಡುಕಿಕೊಂಡು ಬಂದಿದೆ ಎನ್ನಲಾಗಿದೆ.

ಸುಹಾನ್ ಶೇಕ್

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.