‘ಮಹಾರಾಜ’ನಿಗೆ ‘ಟಾಟಾ’ ಹೇಳಿದ ಸರ್ಕಾರ: 1932ರಿಂದ 2021- ಟಾಟಾ- ಏರ್ ಇಂಡಿಯಾ ಇತಿಹಾಸ

Team Udayavani, Oct 8, 2021, 5:07 PM IST

‘ಮಹಾರಾಜ’ನಿಗೆ ‘ಟಾಟಾ’ ಹೇಳಿದ ಸರ್ಕಾರ: 1932ರಿಂದ 2021- ಟಾಟಾ- ಏರ್ ಇಂಡಿಯಾ ಇತಿಹಾಸ

ಹೊಸದಿಲ್ಲಿ: ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಇದೀಗ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. ಟಾಟಾ ಸನ್ಸ್ ಸಂಸ್ಥೆಯು 37 ವರ್ಷಗಳ ಬಳಿಕ ‘ಮಹಾರಾಜ’ನನ್ನು ಮರಳಿ ಪಡೆದಿದೆ. ಹುಟ್ಟು, ಏಳುಬೀಳು, ವರ್ತಮಾನಗಳಲ್ಲಿ ಹಲವು ಆಯಾಮಗಳನ್ನು ಕಂಡ ಭಾರತದ ಹೆಮ್ಮೆಯ ವಿಮಾನಯಾನ ಸಂಸ್ಥೆಯ ಪರಿಚಯ ಇಲ್ಲಿದೆ.

1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸಂಸ್ಥೆಯನ್ನು ಆರಂಭಿಸಿದರು. ಸ್ವತಃ ಪೈಲಟ್‌ ಆಗಿದ್ದ ಜೆಆರ್‌ಡಿ ಟಾಟಾ ತಾವೇ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮೊದಲ ಹಾರಾಟವು ಕರಾಚಿಯಿಂದ ಬಾಂಬೆಗೆ ನಡೆಸಿತು. ಹ್ಯಾವಿಲ್ಯಾಂಡ್‌ ಪುಸ್‌ ಮಾತ್‌ ಮೊದಲ ವಿಮಾನ. ಆಗ ಬಾಂಬೆ ವಿಮಾನ ನಿಲ್ದಾಣದಲ್ಲಿ ಸರಿಯಾದ ರನ್‌ವೇ ಇರಲಿಲ್ಲ. ರೇಡಿಯೋ ಸಿಗ್ನಲ್‌, ನ್ಯಾವಿಗೇಶನ್‌ ವ್ಯವಸ್ಥೆ ಯಾವುದೂ ಇರಲಿಲ್ಲ. ಅಹಮದಾಬಾದ್‌, ಬಾಂಬೆ, ಚೆನ್ನೈ, ತಿರುವನಂತಪುರಂ ನಡುವೆ 1933 ರಲ್ಲಿ ಪ್ರಯಾಣಿಕ ಹಾಗೂ ಸರಕು ವಿಮಾನಗಳು ಹಾರಾಟ ನಡೆಸಿದವು. ಆಗ ದಿಲ್ಲಿಯಿಂದ ಬಾಂಬೆಗೆ ಇದ್ದ ಟಿಕೆಟ್‌ ದರ ಕೇವಲ 75 ರೂ.

ಬಾಂಬೆ-ಇಂದೋರ್‌-ಭೋಪಾಲ್‌-ಗ್ವಾಲಿಯರ್‌-ದಿಲ್ಲಿ ನಡುವೆ 1937ರಲ್ಲಿ ಹಾರಾಟ ಆರಂಭವಾಯಿತು. 1938 ರಲ್ಲಿ ಸಂಸ್ಥೆಗೆ ರೇಡಿಯೋ ಅಳವಡಿಸಿದ ಮೊದಲ ವಿಮಾನ ಡ್ರ್ಯಾಗನ್‌ ರಾಪಿಡ್‌ ಡಿಎಚ್‌-89 ವಿಮಾನ ಸೇರ್ಪಡೆಯಾಗಿತ್ತು.

ಎರಡನೇ ಮಹಾಯುದ್ಧದ ನಂತರ ಟಾಟಾ ಏರ್‌ಲೈನ್ಸ್‌ ಅನ್ನು ಸಾರ್ವಜನಿಕ ಕಂಪನಿಯಾಗಿ ಪರಿವರ್ತಿಸಲಾಯಿತು, ಏರ್‌ ಇಂಡಿಯಾ ಲಿಮಿಟೆಡ್‌ ಎಂದು ಮರುನಾಮಕರಣ ಮಾಡಲಾಯಿತು. 1948 ರಲ್ಲಿ ಬಾಂಬೆ, ಕೈರೋ, ಜಿನೀವಾ ಮತ್ತು ಲಂಡನ್‌ ನಡುವೆ ಅಂತಾರಾಷ್ಟ್ರೀಯ ಸೇವೆಗಳು ಆರಂಭವಾದವು. ಏರ್‌ ಇಂಡಿಯಾ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ ರಚನೆಯಾಯಿತು.

ಭಾರತ ಸರಕಾರವು 1953 ರಲ್ಲಿ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕೃತಗೊಳಿಸಿತು. ಈ ವೇಳೆ ಸರ್ಕಾರವು ಇಂಡಿಯನ್‌ ಏರ್‌ಲೈನ್ಸ್‌ ಕಾರ್ಪೊರೇಶನ್‌ ಮತ್ತು ಏರ್‌ ಇಂಡಿಯಾ ಲಿಮಿಟೆಡ್‌ ಎಂಬ ಎರಡು ನಿಗಮಗಳನ್ನು ರಚಿಸಿತ್ತು. 1962ರಲ್ಲಿ ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಕಾರ್ಪೊರೇಷನ್ನು ಏರ್‌ ಇಂಡಿಯಾ ಎಂದು ಸಂಕ್ಷಿಪ್ತಗೊಳಿಸಲಾಯಿತು.

ಮೊದಲ ಮಾರಾಟ ಯತ್ನ: ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ 2001ರಲ್ಲಿ ಏರ್‌ಲೈನ್‌ ಮಾರಾಟದ ಮೊದಲ ಪ್ರಯತ್ನ ಮಾಡಿತು. ಏರ್‌ ಇಂಡಿಯಾದ ಶೇ. 40ರಷ್ಟು ಶೇರುಗಳನ್ನು ಮಾರಾಟಕ್ಕಿಡಲಾಗಿತ್ತು. 2007 ರಲ್ಲಿ ಏರ್‌ ಇಂಡಿಯಾ ತನ್ನ ದೇಶೀಯ ಘಟಕ ಇಂಡಿಯನ್‌ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಿತ್ತು. 2018ರಲ್ಲಿ ಸರಕಾರ ಸಂಸ್ಥೆಯ ಮಾರಾಟಕ್ಕೆ ಪ್ರಯತ್ನಿಸಿತು. 50,000 ಕೋಟಿ ರೂ. ಗಿಂತ ಅಧಿಕ ಸಾಲವನ್ನು ಏರ್ ಇಂಡಿಯಾ ಸಂಸ್ಥೆಯ ಅನುಭವಿಸುತ್ತಿತ್ತು. ಈ ಬಾರಿ, ಸಂಸ್ಥೆಯಲ್ಲಿನ ಶೇ.24 ಷೇರುಗಳನ್ನು ಉಳಿಸಿಕೊಳ್ಳಲು ಸರಕಾರ ನಿರ್ಧರಿಸಿತು. ಆದರೆ ಯಾವುದೇ ಬಿಡ್‌ ಬಾರದ ಕಾರಣ ಯತ್ನ ವಿಫಲವಾಗಿತ್ತು.

2020ರಲ್ಲಿ ಮಾರಾಟಕ್ಕೆ ಸರಕಾರ ಮತ್ತೊಂದು ಯತ್ನ ನಡೆಸಿರು. ಈ ಬಾರಿ ಸರಕಾರ ಶೇ.100 ಷೇರುಗಳನ್ನೂ ಕೊಟ್ಟುಬಿಡುವುದಾಗಿ ಹೇಳಿತ್ತು. ಬಿಡ್ ನಲ್ಲಿ ಟಾಟಾ ಸನ್ಸ್ ಗೆದ್ದು ಏರ್ ಇಂಡಿಯಾವನ್ನು ಮರಳಿ ಪಡೆದಿದೆ. ಸದ್ಯ ಏರ್‌ ಇಂಡಿಯಾ 60,074 ಕೋಟಿ ರೂ.ಗಳ ಸಾಲ ಹೊಂದಿದೆ. ಇದರಲ್ಲಿ 23,286 ಕೋಟಿ ರೂ.ಗಳನ್ನು ಟಾಟಾ ಸನ್ಸ್ ಭರಿಸಬೇಕಿದೆ. ಉಳಿದುದನ್ನು ವಿಶೇಷ ಉದ್ದೇಶ ವೆಹಿಕಲ್‌ ಮೂಲಕ ಸರಕಾರ ಭರಿಸಲಿದೆ.

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.