South Indian actors: ನಾಗಾರ್ಜುನ್‌ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ‌ ನಟರು ಯಾರ‍್ಯಾರು

ನಟ ನಾಗಾರ್ಜುನ್‌ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಗೊತ್ತಾ?

ಸುಹಾನ್ ಶೇಕ್, Sep 14, 2024, 4:54 PM IST

1

ಭಾರತದ ಸಿನಿಮಾರಂಗ ವರ್ಷಗಳು ಕಳೆದಂತೆ ಶ್ರೀಮಂತವಾಗುತ್ತಿದೆ. ಸ್ಟಾರ್‌ ಕಲಾವಿದರ ಮಾರ್ಕೆಟ್‌ ಮೌಲ್ಯ ಕೂಡ ಹೆಚ್ಚಾಗುತ್ತಿದೆ. ಪ್ಯಾನ್‌ ಇಂಡಿಯಾದಂತಹ ಪ್ರಾಜೆಕ್ಟ್‌ಗಳು ಬಂದ ಬಳಿಕ ಭಾರತೀಯ ಸಿನಿಮಾಗಳು ವಿದೇಶದಲ್ಲೂ ಕಮಾಲ್‌ ಮಾಡುತ್ತಿವೆ.

ಅದರಲ್ಲೂ ದಕ್ಷಿಣ ಭಾರತದ ನಟರ ಮಾರ್ಕೆಟ್‌ ವ್ಯಾಲ್ಯೂ ಕಳೆದ ಕೆಲ ವರ್ಷಗಳಲ್ಲಿ ವೇಗವಾಗಿ ಹೆಚ್ಚಾಗಿದೆ. ಸಿನಿಮಾಗಳ ಜತೆ ಸೌತ್‌ ಸ್ಟಾರ್‌ ಗಳ ನಿವ್ವಳ ಮೌಲ್ಯ ಕೂಡ ಹೆಚ್ಚಾಗಿದೆ. ದಕ್ಷಿಣ ಭಾರತದ ಶ್ರೀಮಂತ ನಟರು ಯಾರು ಮತ್ತು ಅವರ ಆಸ್ತಿ ಮೌಲ್ಯ ಎಷ್ಟು ಎನ್ನುವುದರ ಕುರಿತ ಒಂದು ನೋಟ ಇಲ್ಲಿದೆ..

ನಾಗಾರ್ಜುನ್ ಅಕ್ಕಿನೇನಿ(Nagarjuna Akkineni): ಟಾಲಿವುಡ್‌ ಸೂಪರ್‌ ಸ್ಟಾರ್‌ ಗಳಲ್ಲಿ ಒಬ್ಬರಾಗಿರುವ ನಾಗಾರ್ಜುನ್ ಅಕ್ಕಿನೇನಿ ಅವರಿಗೆ 65 ವರ್ಷ ಕಳೆದರೂ ಅವರ ನಟನಾ ಖದರ್‌ ಗೆ ಶಿಳ್ಳೆ ಚಪ್ಪಾಳೆಗಳ ಕೊರತೆಯಿಲ್ಲ. ಇಂದಿಗೂ ಅವರ ಸಿನಿಮಾಗಳನ್ನು ಕಾದು ಕೂತು ನೋಡುವ ಜನರಿದ್ದಾರೆ. ಅನೇಕ ದಶಕಗಳಿಂದ ಟಾಲಿವುಡ್‌ ಮಂದಿಯನ್ನು ರಂಜಿಸುತ್ತಲೇ ಬರುತ್ತಿರುವ ʼಕಿಂಗ್‌ʼ ನಾಗಾರ್ಜುನ್‌ ಶ್ರೀಮಂತ ಸೌತ್‌ ನಟರಲ್ಲಿ ಒಬ್ಬರು.

ಲೈಫ್ ಸ್ಟೈಲ್ ಏಷ್ಯಾ ಪ್ರಕಾರ ನಾಗಾರ್ಜುನ್‌ 3010 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅವರು ರಿಯಲ್ ಎಸ್ಟೇಟ್, ಚಲನಚಿತ್ರ ನಿರ್ಮಾಣ ಸಂಸ್ಥೆ ಮತ್ತು ಇತರೆ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್ ಮತ್ತು ಮುಂಬೈನಲ್ಲಿ ಹಲವಾರು ದುಬಾರಿ ಬಂಗಲೆಯನ್ನು ಹೊಂದಿದ್ದಾರೆ. ಅವರ ಬಳಿ BMW 7 ಸಿರೀಸ್ ಮತ್ತು BMW M6 ನಂತಹ ಪ್ರೀಮಿಯಂ ಕಾರುಗಳಿವೆ. ಈ ಕಾರುಗಳ ಅಂದಾಜು ಮೌಲ್ಯ1 ಕೋಟಿ ರೂ.ಗೂ ಹೆಚ್ಚು.

ರಾಮ್‌ ಚರಣ್(Ram Charan):‌ ʼಆರ್‌ ಆರ್‌ ಆರ್‌ʼ ಸ್ಟಾರ್‌ ಟಾಲಿವುಡ್‌ನ ʼಮಗಧೀರʼ ರಾಮ್‌ ಚರಣ್‌ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಸುವುದು ಗೊತ್ತೇ ಇದೆ. ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿರುವ ರಾಮ್‌ ಚರಣ್‌ ಸಿನಿಮಾ ಹಿನ್ನೆಲೆ ಕುಟುಂಬದ ಕುಡಿ.

ಚಿರಂಜೀವಿ ಅವರ ಪುತ್ರನಾಗಿದ್ದರೂ ಟಾಲಿವುಡ್‌ನಲ್ಲಿ ತನ್ನದೇ ನಟನಾ ಕೌಶಲ್ಯದಿಂದ ಗೆದ್ದು ಬಂದವರು ರಾಮ್‌ ಚರಣ್.‌  ಇಂದು ಅವರು ಟಾಲಿವುಡ್‌ನಲ್ಲಿ ದೊಡ್ಡ ಸ್ಟಾರ್‌ ಗಳಲ್ಲಿ ಒಬ್ಬರು. ಟೈಮ್ಸ್ ಆಫ್ ಇಂಡಿಯಾ ಪ್ರಕಾರ ರಾಮ್‌ ಚರಣ್‌ ಅವರ ಆಸ್ತಿಯ ನಿವ್ವಳ ಮೌಲ್ಯವು 1370 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ʼಮಗಧೀರʼ,ʼರಂಗಸ್ಥಳಂʼ, ʼಆರ್‌ ಆರ್‌ ಆರ್‌ʼ ನಂತಹ ದೊಡ್ಡ ಹಿಟ್‌ ನೀಡಿರುವ ರಾಮ್‌ ಚರಣ್‌ ಅವರ ಬಳಿ ಆಸ್ಟನ್ ಮಾರ್ಟಿನ್ ಮತ್ತು ರೇಂಜ್ ರೋವರ್ ನಂತಹ ದುಬಾರಿ ಕಾರುಗಳಿವೆ.

ಹೈದರಾಬಾದ್‌ನಲ್ಲಿ 38 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ನಿವಾಸವನ್ನು ಅವರು ಹೊಂದಿದ್ದಾರೆ.

ಜೂ.ಎನ್‌ ಟಿಆರ್(Jr NTR):‌ ʼಆರ್‌ ಆರ್‌ ಆರ್‌ʼ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆದ ಜೂ.ಎನ್‌ ಟಿಆರ್‌ ಕೂಡ ಶ್ರೀಮಂತ ನಟರಲ್ಲಿ ಒಬ್ಬರು. ಕಳೆದ ಅನೇಕ ದಶಕಗಳಿಂದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಜೂ.ಎನ್‌ ಟಿಆರ್‌ ಅವರಿಗೆ ಟಾಲಿವುಡ್‌ನಲ್ಲಿ ಲಕ್ಷಾಂತರ ಮಂದಿಯ ಪ್ರೀತಿ ಪ್ರೋತ್ಸಾಹವಿದೆ.

ʼದೇವರʼ ನಟ ರಿಯಲ್ ಎಸ್ಟೇಟ್ ಮತ್ತು ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವ ಕಾರಣ ಅವರ ನಿವ್ವಳ ಮೌಲ್ಯ ಅಂದಾಜು 571 ಕೋಟಿ ರೂ. ಆಗಿದೆ ಎಂದು ʼಟೈಮ್ಸ್ ನೌʼ ವರದಿ ತಿಳಿಸಿದೆ.

ಹೈದರಾಬಾದ್, ಬೆಂಗಳೂರು ಮತ್ತು ಕರ್ನಾಟಕದ ಇತರ ಸ್ಥಳಗಳಲ್ಲಿ ಅವರು ದುಬಾರಿ ಮನೆಗಳನ್ನು ಹೊಂದಿದ್ದಾರೆ. ಇದಲ್ಲದೆ ಅವರು ಲ್ಯಾಂಬೋರ್ಗಿನಿ ಉರಸ್ ಗ್ರಾಫೈಟ್ ಕ್ಯಾಪ್ಸುಲ್ ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇದರ ಅಂದಾಜು ಮೌಲ್ಯ 5 ಕೋಟಿ ರೂ. ಆಗಿದೆ.

ಅಲ್ಲು ಅರ್ಜುನ್(Allu Arjun):‌ ಟಾಲಿವುಡ್‌ ಫಿಲ್ಮ್‌ ಇಂಡಸ್ಟ್ರಿಯಲ್ಲಿ ಅತ್ಯಂತ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಅಲ್ಲು ಅರ್ಜುನ್‌ ಅವರ ಬಗ್ಗೆ ಬಹುತೇಕ ಸಿನಿರಂಗದ ಪ್ರೇಕ್ಷಕರಿಗೆ ಗೊತ್ತೇ ಇದೆ. ʼಪುಷ್ಪʼ ಸಿನಿಮಾದ ಮೂಲಕ ಅವರು ಆಲ್‌ ಓವರ್‌ ಇಂಡಿಯಾ ಮೋಡಿ ಮಾಡಿದ್ದಾರೆ.

ದಕ್ಷಿಣ ಭಾರತ ಮಾತ್ರವಲ್ಲದೆ, ಉತ್ತರ ಭಾರತದಲ್ಲೂ ಅಲ್ಲು ಅರ್ಜುನ್‌ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಅವರು, GQ ಇಂಡಿಯಾ ಪ್ರಕಾರ ರಿಯಲ್ ಎಸ್ಟೇಟ್ ಮತ್ತು ಇತರ ವ್ಯವಹಾರಗಳಲ್ಲಿನ ಹೂಡಿಕೆಯಿಂದ 460 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಅವರು ಹೊಂದಿದ್ದಾರೆ.

ಹೈದರಾಬಾದ್ ಮತ್ತು ಮುಂಬೈನಲ್ಲಿ ದುಬಾರಿ ಮನೆಗಳನ್ನು ಅವರು ಹೊಂದಿದ್ದಾರೆ. ನಟನ ಬಳಿ  ವೋಲ್ವೋ XC90 T8 ಎಕ್ಸಲೆನ್ಸ್, ಹಮ್ಮರ್ H2, Mercedes GLE 350d ಸೇರಿದಂತೆ ಇತರೆ ದುಬಾರಿ ಕಾರುಗಳಿವೆ.

ದಳಪತಿ ವಿಜಯ್(Thalapathy Vijay):‌ ಕಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಹೊರತುಪಡಿಸಿದರೆ ಅತೀ ಹೆಚ್ಚು ಅಭಿಮಾನಿಗಳ ಹೊಂದಿರುವವರಲ್ಲಿ ದಳಪತಿ ವಿಜಯ್‌ ಒಬ್ಬರು. ನಟನೆಯಲ್ಲಿ ʼಗೋಟ್‌ʼ ಎಂದೇ ಕರೆಯಲ್ಪಡುವ ಅವರು, ಬಾಕ್ಸ್‌ ಆಫೀಸ್‌ ಗಳಿಕೆಯಲ್ಲೂ ಎಂದೂ ಹಿಂದೆ ಬಿದ್ದವರಲ್ಲ. ಅವರ ಒಂದೊಂದು ಸಿನಿಮಾಗಳು 100 ಕೋಟಿ ಕಮಾಯಿಯನ್ನು ಆರಾಮವಾಗಿ ಗಳಿಸುತ್ತದೆ.

ಸಿನಿಮಾದಿಂದ ರಾಜಕೀಯ ಅಖಾಡಕ್ಕೂ ಪ್ರವೇಶ ಪಡೆದಿರುವ ಅವರು, ವರದಿಯ ಆಧಾರದ 450 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಚೆನ್ನೈನ ಕ್ಯಾಸುವಾರಿನಾ ಡ್ರೈವ್ ಸ್ಟ್ರೀಟ್ ನಲ್ಲಿ ಅತ್ಯಂತ ದುಬಾರಿ ಬಂಗಲೆಯನ್ನು(70 ಕೋಟಿ ರೂ. ಬೆಲೆ) ಅವರು ಹೊಂದಿದ್ದಾರೆ. ಅವರ ಬಳಿ ಬಿಎಂಡಬ್ಲ್ಯು ಮತ್ತು ಆಡಿ ಕಾರುಗಳಿವೆ.

ರಜಿನಿಕಾಂತ್(Rajinikanth): ವಯಸ್ಸು 70 ದಾಟಿದರೂ ಬಣ್ಣದ ಲೋಕದಲ್ಲಿ 20ರ ಹುಡುಗನಂತೆ ನಟಿಸುತ್ತಿರುವ ʼತಲೈವಾʼ ಭಾರತೀಯ ಸಿನಿಮಾರಂಗದ ಹೆಮ್ಮೆ. ದಿಗ್ಗಜ ನಟನಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಅವರ ಹೊಸ ಸಿನಿಮಾಗಳು ಬಿಡಿ, ಹಳೆಯ ಸಿನಿಮಾಗಳು ಮರು ಬಿಡುಗಡೆ ಆದರೂ ಅದು ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತದೆ.

ಸೌತ್‌ ಸಿನಿಮಾರಂಗದ ದಿಗ್ಗಜ ನಟನ ಜತೆ ಅವರು ಶ್ರೀಮಂತ ನಟನೂ ಆಗಿದ್ದಾರೆ. ಲೈಫ್ ಸ್ಟೈಲ್ ಏಷ್ಯಾ ಪ್ರಕಾರ ನಟ ರಜಿನಿಕಾಂತ್ 430 ಕೋಟಿ ರೂ. ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ʼಇಂದಿರನ್‌ʼ ನಿಂದ ಮೊನ್ನೆ ಮೊನ್ನೆ ಬಂದ ʼಜೈಲರ್‌ʼವರೆಗೂ ಮೆಗಾ ಹಿಟ್‌ ನೀಡಿರುವ ರಜಿನಿಕಾಂತ್‌ ಅವರ ಬಳಿ ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್ ಜಿ ವ್ಯಾಗನ್, ಲಂಬೋರ್ಘಿನಿ ಉರಸ್ ಸೇರಿದಂತೆ ಇನ್ನೂ ಅನೇಕ ದುಬಾರಿ ಕಾರುಗಳಿವೆ. ಇದಲ್ಲದೆ ಅವರು, 73ರ ವಯಸ್ಸಿನಲ್ಲೂ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ.

ಮಹೇಶ್‌ ಬಾಬು(Mahesh Babu): ಟಾಲಿವುಡ್‌ ಸ್ಟಾರ್‌ ಮಹೇಶ್‌ ಬಾಬು ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡುತ್ತವೆ. 100 ಕೋಟಿ ಆರಾಮವಾಗಿ ಗಳಿಸುತ್ತವೆ. ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಲ್ಲಿ ಒಬ್ಬರಾಗಿರುವ ಅವರು, ಶ್ರೀಮಂತ ನಟನೂ ಹೌದು. ಲೈಫ್ ಸ್ಟೈಲ್ ಏಷ್ಯಾ ಪ್ರಕಾರ ಮಹೇಶ್‌ ಬಾಬು 273 ಕೋಟಿ ರೂ. ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ದುಬಾರಿ ಬಂಗಲೆಯನ್ನು ಹೊಂದಿದ್ದಾರೆ. ಆಡಿ, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸೇರಿದಂತೆ ಇತರೆ ದುಬಾರಿ ಕಾರುಗಳು ಅವರ ಬಳಿ ಇದೆ. ಮಹೇಶ್‌ ಬಾಬು ಖಾಸಗಿ ವಿಮಾನದ ಮಾಲೀಕತ್ವವನ್ನು ಸಹ ಹೊಂದಿದ್ದಾರೆ ಎಂದು ವರದಿಯಾಗಿದೆ.

-ಸುಹಾನ್‌ ಶೇಕ್

ಟಾಪ್ ನ್ಯೂಸ್

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Success Story:ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

Success: ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

BJP FLAG

Maharashtra; ಚುನಾವಣ ಅಖಾಡ ಸಿದ್ದ: ಬಿಜೆಪಿ ಪಾಲಿಗೆ ಈ ಬಾರಿ ಭಾರೀ ಸವಾಲಿನ ಸ್ಥಿತಿ!

web

ಹೊಳೆಯುವ, ಆರೋಗ್ಯಕರ ತ್ವಚೆಗೆ 10 ಅತ್ಯುತ್ತಮ ನೈಸರ್ಗಿಕ ಪಾನೀಯಗಳು

anjura-roll

Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.