ಇದು ರಾಮನ ಬಾಣದಿಂದ ನಿರ್ಮಾಣವಾದ ಸ್ಥಳ : ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ!

Team Udayavani, Jun 29, 2021, 1:32 PM IST

Namada_Chilume

ಕಲ್ಪತರು ನಾಡು, ಶೈಕ್ಷಣಿಕ ನಗರ ಎಂದೇ ಖ್ಯಾತಿಪಡೆದಿರುವ ತುಮಕೂರು ಜಿಲ್ಲೆಯಲ್ಲಿ ನೋಡಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿ ಸಾಕಷ್ಟು ಬೆಟ್ಟ ಗುಡ್ಡಗಳನ್ನು ಕಾಣಬಹುದು. ತುಮಕೂರಿನ ಬೆಟ್ಟ ಗುಡ್ಡಗಳ ನಡುವೆ ಒಂದು ನೈಸರ್ಗಿಕ ಚಿಲುಮೆ ಇದೆ. ಅದೇ ನಾಮದ ಚಿಲುಮೆ.  ಇಲ್ಲಿ ವರ್ಷದ 360 ದಿನಗಳಲ್ಲಿಯೂ ನೀರು ಬರುತ್ತವೆ. ಈ ಚಿಲುಮೆಗೂ ರಾಮಾಯಣಕ್ಕೂ ನಂಟಿದೆ ಎನ್ನುತ್ತಾರೆ ಇತಿಹಾಸಕಾರರು.

ಹೌದು ನಾಮದ ಚಿಲುಮೆ ಕರ್ನಾಟಕ ತುಮಕೂರು ಬಳಿಯ ದೇವಾರಾಯನದುರ್ಗದ ಸಮೀಪ ಇರುವ ಒಂದು ನೈಸರ್ಗಿಕ ತಾಣವಾಗಿದೆ. ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ನಾಮದ ಚಿಲುಮೆಯು ತುಮಕೂರಿನಿಂದ ಬರೀ 14 ಕಿ.ಮೀ ದೂರದಲ್ಲಿದೆ. ತುಮಕೂರಿಗೆ ಹೋಗುವ ರಸ್ತೆಯಲ್ಲಿ ಬೆಟ್ಟದ ಬುಡದಲ್ಲಿದೆ ಈ ತಾಣವಿದೆ. ಈ ಜಾಗಕ್ಕೆ ಪ್ರವಾಸಿಗರು ದಿನ ಪೂರ್ತಿ ಆಗಮಿಸುತ್ತಾರೆ.

ಪಿಕ್ನಿಕ್‌ಗೆ, ಲಾಂಗ್‌ ಬೈಕ್‌ ರೈಡ್‌ ಗೆ ಉತ್ತಮ ತಾಣ

ಪಿಕ್ನಿಕ್‌ಗೆ, ಲಾಂಗ್‌ ಬೈಕ್‌ ರೈಡ್‌ ಹೋಗಲು ಬಯಸುವವರು ತುಮಕೂರಿನ ನಾಮದ ಚಿಲುಮೆಯನ್ನು ಭೇಟಿ ನೀಡಲೇ ಬೇಕು. ನೀವು ದಾರಿಯುದ್ದಕ್ಕೂ ಕಾಡುಗಳು ಹಾಗೂ ಕೋತಿಗಳನ್ನು ಕಾಣಬಹುದು. ಕೆಲವೊಮ್ಮೆ ಕೋತಿಗಳು ದಾರಿಮಧ್ಯೆ ನಿಮ್ಮನ್ನು ಅಡ್ಡಗಟ್ಟುವುದೂ ಇದೆ. ದಾರಿಯುದ್ದಕ್ಕೂ ನೀವು ಎರಡೂ ಬದಿಯಲ್ಲೂ ಕಾಡನ್ನು ನೋಡಬಹುದು.

ಜಿಂಕೆ ವನ ವಿಶೇಷ :

ನಾಮದ ಚಿಲುಮೆಯ ಒಳಗೆ ಜಿಂಕೆ ವನ ಕೂಡಾ ಇದೆ. ಇಲ್ಲಿ ನೀವು ಸಾಕಷ್ಟು ಚುಕ್ಕೆ ಜಿಂಕೆಗಳನ್ನು ಕಾಣಬಹುದು. ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಜಿಂಕೆಗಳನ್ನು ರಕ್ಷಿಸಲು ಪ್ರದೇಶವನ್ನು ಬೇಲಿ ಹಾಕಲಾಗಿದೆ. ಮೂಲೆಯ ಸುತ್ತಲೂ ಅನೇಕ ಜಿಂಕೆಗಳನ್ನು ಗುರುತಿಸಬಹುದು. ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ ಮತ್ತು ನಾಮದ ಚಿಲುಮೆ ಅಲ್ಲಿನ ಶಾಂತ ವಾತಾವರಣಕ್ಕೆ ಪ್ರಸಿದ್ಧವಾಗಿದ್ದು, ಒಂದು ದಿನದ ಪಿಕ್ನಿಕ್‌ಗೆ ಸೂಕ್ತವಾದ ತಾಣವಾಗಿದೆ.

ರಾಮನ ಬಾಣದಿಂದ ಉದ್ಭವವಾದ ಸ್ಥಳ :

ರಾಮ, ಸೀತೆ ಮತ್ತು ಲಕ್ಷ್ಮಣರೊಂದಿಗೆ ವನವಾಸದ ಸಮಯದಲ್ಲಿ ಇಲ್ಲಿಯೇ ಇದ್ದರು ಎಂದು ನಂಬಲಾಗಿದೆ. ರಾಮನು ಹಣೆಗೆ ತಿಲಕವನ್ನು ಹಚ್ಚಲು ನೀರನ್ನು ಹುಡುಕಿದನು. ಅವನಿಗೆ ನೀರು ಸಿಗದಿದ್ದಾಗ ಬಂಡೆಗೆ ಬಾಣ ಹೊಡಿದನು. ಬಾಣವು ಬಂಡೆಗೆ ತೂರಿಕೊಂಡು, ರಂಧ್ರವನ್ನು ಮಾಡಿ ಅದರಿಂದ ನೀರು ಹೊರಚಿಮ್ಮಿತು. ಹಾಗಾಗಿ ಈ ಸ್ಥಳವನ್ನು ನಾಮದ ಚಿಲುಮೆ ಎಂದು ಕರೆಯಲಾಗುತ್ತಿದೆ. ಈ ಚಿಲುಮೆಯಲ್ಲಿ ವರ್ಷವಿಡೀ ನೀರು ಚಿಮ್ಮುತ್ತಿರುತ್ತದೆ. ಯಾವುದೇ ಬರಗಾಲಕ್ಕೂ ಈ ನೀರು ಬತ್ತುವುದಿಲ್ಲವಂತೆ. ಇಲ್ಲಿಂದ ಹೊರಬರುವ ನೀರನ್ನು ಪವಿತ್ರ ನೀರನ್ನು ತೀರ್ಥ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಈ ನೀರನ್ನು ತೀರ್ಥದಂತೆ ಸೇವಿಸುತ್ತಾರೆ.

ರಾಮನ ಪಾದದ ಗುರುತು :

ಈ ಚಿಲುಮೆಯ ಬಳಿ ನೀವು ರಾಮನ ಪಾದದ ಗುರುತನ್ನೂ ನೋಡಬಹುದು. ಈ ಚಿಲುಮೆಯನ್ನು ಪ್ರಸ್ತುತ ಅರಣ್ಯ ಇಲಾಖೆಯು ಸಂರಕ್ಷಿಸುತ್ತಿದೆ. ಹಾಗಾಗಿ ಪ್ರವಾಸಿಗರುಈ ಚಿಲುಮೆಯನ್ನು ಹಾಳು ಮಾಡದಂತೆ ಬೇಲಿಯನ್ನು ನಿರ್ಮಿಸಿದ್ದಾರೆ. ಜಿಂಕೆ ಉದ್ಯಾನವನವು ಪ್ರವೇಶಕ್ಕಾಗಿ ಅತ್ಯಲ್ಪ ಶುಲ್ಕವನ್ನು ವಿಧಿಸುತ್ತದೆ. ವಯಸ್ಕರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ಪ್ರವೇಶ ಶುಲ್ಕ ವಿಧಿಸಲಾಗುವುದು. ಜಿಂಕೆಗಳ ನೈಸರ್ಗಿಕ ಆವಾಸಸ್ಥಾನವು ವಿರಾಮ ತೆಗೆದುಕೊಳ್ಳಲು ಮತ್ತು ಕುಟುಂಬದೊಂದಿಗೆ ಪಿಕ್ನಿಕ್ ಅನ್ನು ಆನಂದಿಸಲು ಸೂಕ್ತ ಸ್ಥಳವಾಗಿದೆ.

ಟಾಪ್ ನ್ಯೂಸ್

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.