ಟ್ರೋಲ್ ಗಳ ಕಥೆ-ವ್ಯಥೆ: ಮನರಂಜನೆ ಮಿತಿಮೀರಿದಾಗ… ಟ್ರೋಲಿಂಗ್ ಗೆ ಶಿಕ್ಷೆಯೇನು ?

ಹೌದೋ ಹುಲಿಯಾ, ನೀ ತಾಂಟ್ರೆ ಬಾ ತಾಂಟ್ ಮುಂತಾದ ಪದಗಳು ಟ್ರೋಲಿಗರಿಗೆ ಬಾಡೂಟವನ್ನು ಉಣಬಡಿಸಿದ್ದವು.

ಮಿಥುನ್ ಪಿಜಿ, Feb 16, 2021, 8:26 PM IST

troling-3

ಒಮ್ಮೆ ‘ಕಾಫಿ ವಿತ್ ಕರಣ್’  ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್  ‘ಈ ದೇಶದ ಪ್ರಧಾನ ಮಂತ್ರಿ ಪೃಥ್ವಿರಾಜ್ ಸಿಂಗ್ ಚೌಹಾಣ್ ಎಂದು ತಿಳಿಸಿದ್ದರು. ಆಕೆಯ ಈ ಒಂದು ಹೇಳಿಕೆ ವ್ಯಾಪಕ ಟೀಕೆಗೊಳಗಾದದ್ದು ಮಾತ್ರವಲ್ಲದೆ ಇಂಟರ್ ನೆಟ್ ನಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಕುರಿತಾದ ಬಹಳ ಮೀಮ್ಸ್, ಜೋಕ್ಸ್ , ಟ್ರೋಲ್ ಗಳು ಪ್ರವಾಹದ ಮಾದರಿಯಲ್ಲಿ ಹರಿದಾಡಿದ್ದವು.  ಈ ಒಂದು ಹೇಳಿಕೆ ದೇಶದ ಮೇಲೆ ಎಷ್ಟು ಪರಿಣಾಮ ಬೀರಿತ್ತೋ ಗೊತ್ತಿಲ್ಲ. ಆದರೆ ಅಲಿಯಾ ಮಾತ್ರ ಅತೀ ಸಂಕಷ್ಟದ ದಿನಗಳನ್ನು ಕಂಡಿದ್ದರು.

ಘಟನೆ-2: ಯಾಕಣ್ಣಾ ! ಎಂಬ ಪದವನ್ನು ಕೇಳದವರಿಲ್ಲ. ಟಿಕ್ ಟಾಕ್ ಆ್ಯಪ್ ಇದ್ದ ಸಂದರ್ಭದಲ್ಲಿ ಈ ಪದ ಪ್ರತಿಯೊಬ್ಬರ ಬಾಯಲ್ಲೂ ಗುನುಗುನಿಸುತಿತ್ತು. ಈ ಟ್ರೋಲ್ ಹಲವರಿಗೆ ತಮ್ಮ ಪೇಜ್  ಲೈಕ್ ಅಥವಾ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ರಹದಾರಿಯಾಗಿತ್ತು. ಮನಸೋ ಇಚ್ಛೆ  ಈ ವಿಡಿಯೋವನ್ನು ದಂಡಿಸಿದ/ತಿರುಗಿಸಿದ ಟ್ರೋಲಿಗರು ನಂತರ ಹೊಸ ವಿಡಿಯೋದ ಹುಡುಕಾಟದಲ್ಲಿ ನಿರತರಾಗಿದ್ದರು. ಇದರ ಪರಿಣಾಮ ಏನೆಂಬುದು ‘ಪಬ್ಲಿಕ್ ಟಾಯ್ಲೆಟ್’ ಕಿರುಚಿತ್ರದಲ್ಲಿ  ನಿರ್ದೇಶಕರು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಸಾಧ್ಯವಾದರೆ ಒಮ್ಮೆ ನೋಡಿ !

ಘಟನೆ-3: ನಿಖಿಲ್ ಎಲ್ಲಿದಿಯಪ್ಪಾ ? ಮಿಣಿ ಮಿಣಿ ಪೌಡರ್, ಡ್ರೋನ್, ಹೌದೋ ಹುಲಿಯಾ ! ನೀ ತಾಂಟ್ರೆ ಬಾ ತಾಂಟ್ ಮುಂತಾದ ಪದಗಳು ಟ್ರೋಲಿಗರಿಗೆ ಬಾಡೂಟವನ್ನು ಉಣಬಡಿಸಿದ್ದವು. ಕೇವಲ ಮನರಂಜನೆ ಅಸ್ತ್ರವಾಗಿ ಈ ಪದಗಳನ್ನು ಹಾಗೂ ಪದ ಬಳಸಿದ ವ್ಯಕ್ತಿಗಳನ್ನು ಟ್ರೋಲ್ ಮೂಲಕ ‘ರುಬ್ಬಿದ’ ಕೆಲವು ವ್ಯಕ್ತಿಗಳು, ಬಳಿಕ ಅದೇ ಮಾದರಿಯ ಕಂಟೆಂಟ್ ಗಳ ಕ್ರಿಯೇಟ್ ಮಾಡುವಲ್ಲಿ ತೊಡಗಿದ್ದು ಮಾತ್ರ ವಿಪರ್ಯಾಸ.

ಗಮನಿಸಬೇಕಾದ ಅಂಶವೆಂದರೇ, ಇಲ್ಲಿ ಟ್ರೋಲ್ ಗೊಳಗಾದವರಿಗೆ ಯಾವುದೇ ನಷ್ಟವಿಲ್ಲ.  ಕೇವಲ ಮಾನಸಿಕ ಹಿಂಸೆಯಿಂದ ಬಳಲುತ್ತಾರಷ್ಟೆ !? ಅಥವಾ ಆತ್ಮಹತ್ಯೆ ದಾರಿ ತುಳಿಯಲೂಬಹುದು!.  ಆದರೆ ಟ್ರೋಲ್ ಮಾಡುವವರಿಗೆ ಒಂದೆಡೆ ತನ್ನ ಪೇಜ್ ಗೆ ಲೈಕ್ ಬರಲಿಲ್ಲ ಎನ್ನುವುದರ ಚಿಂತೆಯಾದರೆ, ಮತ್ತೊಂದೆಡೆ ‘ಜೀವನದ ಅಮೂಲ್ಯ ಸಮಯವನ್ನು ಕೇವಲ ಟ್ರೋಲ್ ಗಾಗಿಯೇ ಮೀಸಲಿಡುತ್ತಿದ್ದೇನೆ’ ಎಂಬ ಸಂತೋಷ ಕಾಡುತ್ತಿರುತ್ತದೆ. ತನಗೆ ಫಾಲೋವರ್ಸ್ ಹೆಚ್ಚಾದರೇ ಪೋಷಕರು ಕೂಡ ಹೆಮ್ಮೆ ಪಡುತ್ತಾರೆ ಎಂಬ ಆನಂದವು ತುಂಬಿತುಳುಕಾಡುತ್ತಿರುತ್ತದೆ.

ಇರಲಿ, ಟ್ರೋಲಿಂಗ್ ಎಂಬುದನ್ನು ಬಳಸಿಕೊಂಡು ಕೆಲವರನ್ನು ಯಾವೆಲ್ಲಾ ಮಾದರಿಯಲ್ಲಿ  ನಿಂದನೆ ಮಾಡಬಹುದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೆ.. ಇಂದಿನ ದಿನಮಾನಗಳಲ್ಲಿ ಆನ್ ಲೈನ್ ಟ್ರೋಲಿಂಗ್ ಎಂಬುದು ಸರ್ವೆ ಸಾಮಾನ್ಯ ಎಂಬಂತಾಗಿದೆ.

ಇಂದು ಬಹಳ ಜನ ಇಂಟರ್ನೆಟ್ ಅನ್ನು ಇತರರನ್ನು ಬಲಿಪಶು ಅಥವಾ ವಂಚನೆ ಮಾಡಲೆಂದೇ ಬಳಸುತ್ತಿದ್ದಾರೆ. ಯಾಕೆಂದರೇ ಇದು ಪ್ರತಿಯೊಬ್ಬರನ್ನೂ ಕೂಡ ಅನಾಮಧೇಯರನ್ನಾಗಿಸಿದೆ. ದುರಂತವೆಂದರೇ ಇಂಟರ್ನೆಟ್ ನಲ್ಲಿ ಸುಲಭವಾಗಿ ನಮ್ಮ ಗುರುತನ್ನು ಮರೆಮಾಚಬಹುದು. ಮತ್ತು ಯಾವುದೇ ಭಯಾಂತಂಕವಿಲ್ಲದೆ ನಮ್ಮಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.

ಆನ್ ಲೈನ್ ಟ್ರೋಲ್ ಎಂಬುದು ಸೆಲೆಬ್ರಿಟಿಗಳನ್ನು, ರಾಜಕಾರಣಿಗಳನ್ನು, ಸಾಮಾನ್ಯ ನಾಗರಿಕರು ಸೇರಿದಂತೆ ಪ್ರತಿಯೊಬ್ಬರನ್ನು ಸಮಾನಾಗಿ ಕೇಂದ್ರಿಕರಿಸುತ್ತದೆ.

ಇಂದು ಇಂಟರ್ನೆಟ್ ಎಂಬುದು ಜಗತ್ತಿನಾದ್ಯಂತ ಪಸರಿಸಿದೆ. ಇಲ್ಲಿ ವಿಷಯಾಧಾರಿತ ಚರ್ಚೆಗೆ ಆಸ್ಪದವಿರುವುದಿಲ್ಲ. ಕೇವಲ ನಿಂದನೆ, ಬೆದರಿಕೆ, ಅವಮಾನಗಳೇ ಪ್ರಮುಖ ಚರ್ಚಾ ವಿಷಯವಾಗಿರುತ್ತದೆ. ಸಾಮಾಜಿಕ ಜಾಲತಾಣಗಳನ್ನು ಬ್ರೌಸ್ ಮಾಡುವಾಗ ಈ ತೆರನಾದ ವ್ಯಕ್ತಿಗಳು ನಮಗೆ ಸಾಕಷ್ಟು ಕಂಡುಬರುತ್ತಾರೆ.

ನಿಂದನಾತ್ಮಕ ಮತ್ತು ವಿವಾದಾತ್ಮಕ ಪೋಸ್ಟ್ ಗಳನ್ನು ಶೇರ್ ಮಾಡುವಾತ ಅಥವಾ ಕಮೆಂಟ್ ಮಾಡುವಾತ ಇತರ ವ್ಯಕ್ತಿಗಳ ಬಗ್ಗೆ ಚಿಂತಿಸುವುದಿಲ್ಲ. ಬದಲಾಗಿ ಭಾವನೆಗೆ ಧಕ್ಕೆ ತರಬೇಕು ಮತ್ತು ಉದ್ರಿಕ್ತರಾಗುವಂತೆ ಮಾಡಬೇಕೆಂಬ ದುರುದ್ದೇಶವನ್ನು ಹೊಂದಿರುತ್ತಾನೆ. ಅದಕ್ಕಾಗಿ ತನ್ನಂತೆ ಇರುವ ಇತರ ವ್ಯಕ್ತಿಗಳ ಗಮನಸೆಳೆಯಲು ಮೊದಲು ಪ್ರಯತ್ನಿಸುತ್ತಾನೆ.

ಪ್ರಸಿದ್ದ ವ್ಯಕ್ತಿಗಳು ಟ್ರೋಲ್ ಗೆ ಒಳಗಾದಾಗ ….

ಜನಪ್ರಿಯ ಪತ್ರಕರ್ತೆ ಬರ್ಖಾ ದತ್ತ್, ಅತೀ ಹೆಚ್ಚು ಟ್ರೋಲ್ ಗೊಳಗಾದ ಭಾರತೀಯ ಮಹಿಳೆ. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಇವರನ್ನು ನಿಂದನೆಗೆ ಮತ್ತು ಶೋಷಣೆಗೆ ಒಳಪಡಿಸಲಾಗಿತ್ತು. 2015 ರಲ್ಲಿ ಪುಸ್ತಕವೊಂದರಲ್ಲಿ “ತಾನೂ ಲೈಂಗಿಕ ಶೋಷಣೆಗೆ ಒಳಪಟ್ಟಿದ್ದೆ” ಎಂದು ದಾಖಲಿಸಿದ ನಂತರ ವ್ಯಾಪಕ ಟ್ರೋಲ್ ಗೊಳಗಾಗಿದ್ದರು.

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸುಲ್ತಾನ್ ಸಿನಿಮಾದ ಶೂಟಿಂಗ್ ವೇಳೆ “ಫೀಲಿಂಗ್ ಲೈಕ್ ರೇಪ್ಡ್ ವುಮೆನ್” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹೇಳಿಕೆಯನ್ನು ಖಂಡಿಸಿದ ಗಾಯಕಿ ಸೋನಾ ಮೊಹಾಪತ್ರಾ ಕೂಡ ಹಲವು ದಿನಗಳ ಕಾಲ ಟ್ರೋಲಿಗರಿಗೆ ಆಹಾರವಾಗಿದ್ದರು.

ಸೋಜಿಗದ ಸಂಗತಿಯೆಂದರೇ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಕಳಪೆ ಆಟ ಪ್ರದರ್ಶಿಸಿದರೆ, ಅನುಷ್ಕಾ ಶರ್ಮಾ ಅದಕ್ಕೆ ಉತ್ತರದಾಯಿಯಾಗಿದ್ದರು.

ಬಾಲಿವುಡ್ ಸೆಲೆಬ್ರಿಟಿ ಲಿಸಾ ಹೈಡೆನ್ ಕೂಡ ಮನಸೋ ಇಚ್ಚೆಯಾಗಿ ಟ್ರೋಲ್ ಗೆ ಒಳಗಾಗಿದ್ದರು. ಕಾರಣ ಇಷ್ಟೆ. ನೀರಿನಾಳದಲ್ಲಿ ತನ್ನ ಒಂದು ವರ್ಷದ ಮಗನಿಗೆ ಎದೆಹಾಲು ಉಣಿಸುತ್ತಿರುವ ಚಿತ್ರ ಹಂಚಿಕೊಂಡದಕ್ಕಾಗಿ…

ಟ್ರೋಲಿಂಗ್ ಗೆ ಶಿಕ್ಷೆ ಕೊಡಿಸಬಹುದೇ ?

ಟ್ರೋಲಿಂಗ್ ಕುರಿತಾಗಿ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಆದಾಗ್ಯೂ ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆಯಲ್ಲಿ (ಐಟಿ ಕಾಯ್ದೆ) ಕೆಲವೊಂದು ಕಾನೂನುಗಳಿದ್ದು, ಟ್ರೋಲಿಂಗ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬಹುದು.

ಖಾಸಗಿತನದ ದುರ್ಬಳಕೆ: ನಿಮ್ಮ ಗಮನಕ್ಕೆ ಬಾರದೆ ಯಾವುದೇ ವ್ಯಕ್ತಿಯೂ ಖಾಸಗಿ ವಿಡಿಯೋ, ಪೋಟೋ ಚಿತ್ರಿಕರಿಸಿ ಆನ್ ಲೈನ್ ನಲ್ಲಿ ಪ್ರಕಟಿಸಿದರೆ, ಅವರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದು. ಖಾಸಗಿತನದ ದುರ್ಬಳಕೆಗೆ ಮೂರು ವರ್ಷಗಳವರೆಗೂ ಕಾರಾಗೃಹ ಶಿಕ್ಷೆಯಿದೆ.

ಅಶ್ಲೀಲ ಪೋಟೋ/ವಿಡಿಯೋಗಳನ್ನು ಇಂಟರ್ ನೆಟ್ ನಲ್ಲಿ ಪೋಸ್ಟ್ ಮಾಡುವುದು ಅಪರಾಧ: ಇಂದು ಇಂಟರ್ ನೆಟ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಚೋದನಾತ್ಮಕ ಕಂಟೆಂಟ್ ಗಳನ್ನು ಕಾಣಬಹುದು. ಇದು ಸಾಕಷ್ಟು ಜನರ ಗಮನವನ್ನು ಸೆಳೆಯುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ವ್ಯಕ್ತಿ ಇಂತಹ ಕಂಟೆಂಟ್ ಗಳನ್ನು ಪೋಸ್ಟ್ ಮಾಡಿದ್ದಲ್ಲಿ ಅವರಿಗೆ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಲೈಂಗಿಕ ದೌರ್ಜನ್ಯ: ಯಾವುದೇ ವ್ಯಕ್ತಿ ಇಂಟರ್ನೆಟ್ ಮೂಲಕ ಲೈಂಗಿಕ ಹಿಂಸೆ ನೀಡಿದರೆ ದೂರು ದಾಖಲಿಸಬಹದು. ಮಾತ್ರವಲ್ಲದೆ. ಲೈಂಗಿಕ ವಿಚಾರಗಳ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದು.

ಮಾನನಷ್ಟ ಮೊಕದ್ದಮೆ: ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ವ್ಯಕ್ತಿಯೂ ಅಸಭ್ಯ ಪದ ಬಳಕೆ, ನಿಂದನೆ, ವಿಡಿಯೋಗಳ ದುರ್ಬಳಕೆ ಮುಂತಾದ ಕೃತ್ಯಗಳಲ್ಲಿ ತೊಡಗಿದರೆ ಮಾನನಷ್ಟ ಮೊಕದ್ದಮೆ ಹೂಡಬಹುದು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

13

ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ?

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.