Udayavni Special

ವಾಟ್ಸಾಪ್ ಹೇಗೆ ಹ್ಯಾಕ್ ಆಗುತ್ತದೆ ಗೊತ್ತಾ? ಏನಿದು ನಿಗೂಢ OTP ಸ್ಕ್ಯಾಮ್…


Team Udayavani, Dec 1, 2020, 6:00 PM IST

whatsapp-OTP-scam

ಭಾರತ ಸೇರಿದಂತೆ ವಿಶ್ವದಾದ್ಯಂತ ಇಂದು ವಾಟ್ಸಾಪ್ ಎಂಬುದು ಬಹಳ ಜನಪ್ರಿಯ ಅಪ್ಲಿಕೇಶನ್. 2009 ರಲ್ಲಿ ಅಮೆರಿಕದ ಬ್ರಯಾನ್ ಆ್ಯಕ್ಟನ್ ಮತ್ತು ಜಾನ್ ಕೌಮ್ ಎಂಬಿಬ್ಬರು ಈ ಅದ್ಬುತ ಮೆಸೆಂಜಿಂಗ್ ಆ್ಯಪ್ ಅನ್ನು ಅನ್ವೇಶಿಸಿದರು. ನಂತರದ ವರ್ಷಗಳಲ್ಲಿ ಈ ಆ್ಯಪ್ ಕಂಡ ಅಭಿವೃದ್ಧಿ ಊಹೆಗೂ ನಿಲುಕದ್ದು.

ಈ ಅಭೂತಪೂರ್ವ ಬೆಳವಣಿಗೆಯನ್ನು ಕಂಡು ಫೇಸ್ ಬುಕ್ ಸಂಸ್ಥಾಪಕ  ಮಾರ್ಕ್ ಜುಕರ್ ಬರ್ಗ್ 2014ರಲ್ಲಿ 19.3 ಬಿಲಿಯನ್ ಅಮೆರಿಕ ಡಾಲರ್ ನೀಡಿ ವಾಟ್ಸಾಪ್ ಅನ್ನು ಕೊಂಡುಕೊಂಡರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೇ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಫೇಸ್ ಬುಕ್ ಇಂಕ್ ಒಡೆತನದ ವಾಟ್ಸಾಪ್ 2020ರಲ್ಲಿ  ಬಹಳ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ.

ಹೌದು ! ಕಳೆದೊಂದು ತಿಂಗಳಿಂದ ‘ವಾಟ್ಸಾಪ್ ಓಟಿಪಿ ಸ್ಕ್ಯಾಮ್’ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸುದ್ದಿಮಾಡುತ್ತಿದೆ. ಬಳಕೆದಾರರ ಡೇಟಾ ಸುರಕ್ಷತೆಗಾಗಿ  ಅತೀ ಹೆಚ್ಚು ಮಹತ್ವ ನೀಡಿದರೂ ಅದೇಗೆ ಹ್ಯಾಕರ್ ಗಳು ಸುಲಭವಾಗಿ ವಾಟ್ಸಾಪ್ ಪ್ರವೇಶಿಸುವಂತಾಯಿತು ? ಮೆಸೇಂಜಿಂಗ್ ಆ್ಯಪ್  ಮೇಲೆಯೇ ಅವರ ದೃಷ್ಟಿ ಬಿದ್ದಿದ್ದೇಕೆ ? ಇದರಿಂದ ವಾಟ್ಸಪ್ ಬಳಸುವವರು ಎದುರಿಸುವ ಸಮಸ್ಯೆಗಳಾವುವು ? ಹ್ಯಾಕ್ ನಿಂದ ಪಾರಾಗುವುದು ಹೇಗೆ ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾಟ್ಸಾಪ್ ಪ್ರೈವಸಿ: ವಾಟ್ಸಾಪ್ ಸಂಸ್ಥೆ ಬಳಕೆದಾರರ ಪ್ರೈವೆಸಿ ಅಥವಾ ಖಾಸಗಿತನದ ಸುರಕ್ಷತೆಗೆ ಬಹಳ ಮಹತ್ವ ನೀಡಿದೆ. ಈ ಸಂಸ್ಥೆಯ ಧ್ಯೇಯವೇ ಸುಲಭವಾಗಿ ಮತ್ತು ಸುರಕ್ಷಿತವಾಗಿ ಜಗತ್ತನ್ನು ಬೆಸೆಯುವುದು.  ನೀವು ವಾಟ್ಸಾಪ್ ಮೂಲಕ ಸ್ನೇಹಿತರಿಗೆ, ಬಂಧುಗಳಿಗೆ, ವಾಣಿಜ್ಯ ಉದ್ದೇಶಗಳಿಗಾಗಿ ಕಳಿಸುವ ಸಂದೇಶ, ವಿಡಿಯೋ, ಚಿತ್ರ  ಸೇರಿದಂತೆ ಪ್ರತಿಯೊಂದು ಕೂಡ  ಬಹಳ ಭದ್ರತೆಗೆ ಒಳಪಟ್ಟಿರುತ್ತದೆ. ಸ್ವತಃ ವಾಟ್ಸಾಪ್ ಸಂಸ್ಥೆಗೂ ಕೂಡ ನೀವೇನು ಸಂದೇಶ ಕಳುಹಿಸಿದ್ದೀರಿ ಎಂಬುದನ್ನು ಗಮನಿಸಲು ಅನುಮತಿಯಿರುವುದಿಲ್ಲ. ಅಂದರೇ ವಾಟ್ಸಾಪ್ ಮೂಲಕ ಕಳುಹಿಸುವ ಎಲ್ಲಾ ವಿಚಾರಗಳು “ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್” ಗೆ ( End to End Encrypted – ಯಾವುದೇ ಕೋಡ್ ಗಳನ್ನು ಡಿಕೋಡ್ ಮಾಡಲಾಗುವುದಿಲ್ಲ)  ಒಳಪಟ್ಟಿರುತ್ತದೆ.  ಹೀಗಾಗಿ ನೀವು ಮಾಡುವ ಎಲ್ಲಾ ವಿಡಿಯೋ ಕರೆಗಳು, ಚಾಟ್ ಗಳು ನಿಮ್ಮಲ್ಲೆ ಇರುವುದು.

ಗಮನಿಸಬೇಕಾದ ಅಂಶವೆಂದರೇ ನಿಮ್ಮ ವಾಟ್ಸಾಪ್ ನಲ್ಲಿರುವ ಪ್ರತಿಯೊದು ಡೇಟಾಗಳು ಕೂಡ ನಿಮ್ಮ ಮೊಬೈಲ್ ಸ್ಟೋರೇಜ್ ನಲ್ಲಿಯೇ ಶೇಖರಣೆಯಾಗಿರುತ್ತದೆ. ಡೇಟಾ ಸುರಕ್ಷತೆಗಾಗಿಯೇ ವಾಟ್ಸಾಪ್ ನಲ್ಲಿ ಇದುವರೆಗೂ ಜಾಹೀರಾತು ಕಾಣಿಸಿಕೊಂಡಿಲ್ಲ. ಒಂದು ವೇಳೆ ವಾಟ್ಸಾಪ್ ನಲ್ಲಿ ಆ್ಯಡ್ ಗಳು ಇರುತ್ತಿದ್ದರೇ ನಿಮ್ಮ ಕೆಲವೊಂದು ಮಾಹಿತಿಗಳನ್ನು ಜಾಹೀರಾತು ಸಂಸ್ಥೆಗಳಿಗೆ ನೀಡುವ ಅನಿವಾರ್ಯತೆ ಗೆ ವಾಟ್ಸಾಪ್ ಸಂಸ್ಥೆ ಸಿಲುಕುತ್ತಿತ್ತು.

ಪ್ರೈವಸಿಗೆ ಆದ್ಯತೆ ನೀಡಿರುವ ವಾಟ್ಸಾಪ್ ಈಗಾಗಲೇ ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ಸ್, ಟು ಸ್ಟೆಪ್ ವೇರಿಫಿಕೇಶನ್, ಲಾಕ್ ಯುವರ್ ವಾಟ್ಸಾಪ್, ರೀಡ್ ರಿಸಿಪ್ಟ್ ( ಬ್ಲೂ-ಟಿಕ್), ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ ಪ್ರೈವೆಸಿ, ಸ್ಟೇಟಸ್ ಪ್ರೈವಸಿ ಮುಂತಾದವನ್ನು ಜಾರಿಗೆ ತಂದಿದೆ. ಇಷ್ಟೆಲ್ಲಾ ಭದ್ರತೆಗಳಿದ್ದರೂ ವಾಟ್ಸಾಪ್ ಓಟಿಪಿ ಸ್ಕ್ಯಾಮ್ ಎಂಬುದು ಹೇಗೆ ಆರಂಭವಾಯಿತು. ?

ಇಲ್ಲಿದೆ ಉತ್ತರ – ಈ ಸ್ಕ್ಯಾಮ್ ಅನ್ನು ತಂತ್ರಜ್ಞಾನ ತಿಳಿದಿರುವ ಪ್ರತಿಯೊಬ್ಬರು ಮಾಡಬಹುದು. ಪ್ರಮುಖವಾಗಿ  ಹ್ಯಾಕರ್ ಗಳು ಇತರರ ಅಕೌಂಟ್ ಗಳನ್ನು ಅನಧಿಕೃತವಾಗಿ ಪ್ರವೇಶಿಸಲು OTP (one time password) ಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಮೊದಲಿಗೆ ಅಪರಿಚಿತ ನಂಬರ್ ಅಥವಾ ಪರಿಚಿತ ನಂಬರ್ (ನಿಮ್ಮ ಸ್ನೇಹಿತರ ವಾಟ್ಸಾಪ್ ಅಕೌಂಟ್ ಅನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆ)  ಮೂಲಕವೇ ಸಂದೇಶ ಕಳುಹಿಸುವ ಹ್ಯಾಕರ್ ಗಳು,  ವೇರಿಫಿಕೇಶನ್ ಸಂದರ್ಭದಲ್ಲಿ ಅಚಾನಕ್ಕಾಗಿ ನಿಮ್ಮ ನಂಬರ್ ಟೈಪಿಸಿದ್ದರಿಂದ ಓಟಿಪಿ ಕೂಡ ನಿಮ್ಮ ನಂಬರ್ ಗೆ ಬಂದಿದೆ. ತುರ್ತಾಗಿ ಅದನ್ನು ಕಳುಹಿಸಿಕೊಡುವಂತೆ ಭಿನ್ನವಿಸಿಕೊಳ್ಳುತ್ತಾರೆ.

ಅರೆಕ್ಷಣವೂ ಅಲೋಚಿಸದೇ ನೀವೇನಾದರೂ ಓಟಿಪಿ ಕಳುಹಿಸಿದರೆ ನಿಮ್ಮ ವಾಟ್ಸಾಪ್ ಖಾತೆ ಅವರ ಸ್ವಾಧಿನಕ್ಕೆ ಹೋಗುತ್ತದೆ. ಮಾತ್ರವಲ್ಲದೆ ಅಕೌಂಟ್ ಲಾಕ್ ಆಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.   ಓಟಿಪಿಯು ಸಿಕ್ಕಿದ ಕೂಡಲೇ ಹ್ಯಾಕರ್ ಅದನ್ನು ದುರ್ಬಳಕೆ ಮಾಡಿಕೊಂಡು ನಿಮ್ಮೆಲ್ಲಾ ಖಾಸಗಿ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾನೆ. ಮಾತ್ರವಲ್ಲದೆ ಓಟಿಪಿ ಟ್ರಿಕ್ ಬಳಸಿಕೊಂಡು ನಿಮ್ಮ ನಂಬರ್ ನಿಂದ, ನಿಮ್ಮ ಸ್ನೇಹಿತರಿಗೂ ಮೆಸೇಜ್ ಕಳುಹಿಸಿ ಸ್ಕ್ಯಾಮ್ ಮಾಡಲು ಆರಂಭಿಸುತ್ತಾರೆ. ಹಣ ವರ್ಗಾವಣೆ ಮಾಡುವಂತೆ ಕೋರಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮಾತ್ರವಲ್ಲದೆ ಪೋಟೋಗಳು, ವಿಡಿಯೋಗಳು, ಕಾಂಟ್ಯಾಕ್ಟ್ ಗಳು , ಪಿನ್ ನಂಬರ್ ಗಳು ಎಲ್ಲವೂ ಸ್ಕ್ಯಾಮರ್ ಗಳ ಪಾಲಾಗುತ್ತದೆ.

ಎಚ್ಚರ ವಹಿಸಿ: ಪ್ರಸ್ತುತ ವಾಟ್ಸಾಪ್ ನಿಯಮದ ಪ್ರಕಾರ ಒಂದು ವಾಟ್ಸಾಪ್ ನಂಬರ್ ನಿಂದ, ಒಂದೇ ಡಿವೈಸ್ ನಲ್ಲಿ ಮಾತ್ರ ಲಾಗಿನ್ ಆಗಬಹುದು. (ವೆಬ್ ಹೊರತುಪಡಿಸಿ) ಹೀಗಾಗಿ ಸ್ಕ್ಯಾಮರ್ ಗಳಿಗೆ ಓಟಿಪಿ ಕಳುಹಿಸಿದ ತಕ್ಷಣ ನಿಮ್ಮ ಡಿವೈಸ್ ಮೊದಲು ಲಾಕ್ ಆಗುತ್ತದೆ.

ಇದರಿಂದ ಪಾರಾಗುವ ಬಗೆ ಹೇಗೆ: ಪ್ರಮುಖವಾಗಿ ನೀವೇ ಸ್ವತಃ ವೇರಿಫಿಕೇಶನ್ ಮಾಡದ ಹೊರತು, ವಾಟ್ಸಾಪ್ ನಿಮಗೆ ಓಟಿಪಿ ಕಳುಹಿಸುವುದಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಡಬೇಕು. ಒಂದು ವೇಳೆ ಹ್ಯಾಕರ್ ಗಳು ಅಥವಾ ನಿಮ್ಮ ಸ್ನೇಹಿತರೇ ಓಟಿಪಿ ಸಂಖ್ಯೆಯನ್ನು ಕೇಳಿದರೂ, ಅದನ್ನು ನಿರ್ಲಕ್ಷಿಸಿ, ಅದಕ್ಕೆ ಪ್ರತಿಕ್ರಿಯೆ ನೀಡದಿರುವುದು ಸೂಕ್ತ. ಒಟಿಪಿ ಎನ್ನುವಂಥದ್ದು ಅತ್ಯಂತ ಗೌಪ್ಯವಾದ ಮಾಹಿತಿ. ಇನ್ನೊಬ್ಬರಿಗೆ ಅದನ್ನು ಹಂಚದಿರುವುದೇ, ಅತ್ಯಮೂಲ್ಯ ಮಾಹಿತಿಯ ಸೋರಿಕೆಯಾಗದಂತೆ ನಾವು ಮಾಡಬಹುದಾದ ಪ್ರಮುಖ ಕಾರ್ಯ.

ಇದರ ಹೊರತಾಗಿ ವಾಟ್ಸಾಪ್ ನಲ್ಲಿ  ‘To step verification’  ಎಂಬ ಫೀಚರ್ ಅನ್ನು ಕಾಣಬಹುದು. ಅಕೌಂಟ್  ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆಯಿದ್ದು  ಪಿನ್ ನಂಬರ್ ಹಾಗೂ ಇಮೇಲ್ ವಿಳಾಸವನ್ನು ನಮೂದಿಸಿ, ಆ ಮೂಲಕ  ಹ್ಯಾಕರ್ ಗಳು  OTP ಪಡೆದರೂ  ಲಾಗಿನ್ ಆಗಲು ಅವಕಾಶವಿರದಂತೆ ಮಾಡಬಹುದು.

 

-ಮಿಥುನ್ ಮೊಗೇರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ashwath

ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ‘ಡೊಡ್ಡ ಟಾಸ್ಕ್’: ಡಿಸಿಎಂ ಅಶ್ವತ್ಥನಾರಾಯಣ

ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯಸಭೆ

ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತರ ಗೌಪ್ಯಸಭೆ: ಸಚಿವರಿಂದ ಸ್ಪಷ್ಟನೆ

ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ

ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ

ಯತ್ನಾಳ್ ವಿರುದ್ದ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ

ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ

ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಹಾಗೂ ಈಶ್ವರಪ್ಪ ರಾಜೀನಾಮೆ ನೀಡಲಿ : ಉಗ್ರಪ್ಪ ಆಗ್ರಹ

ಮನುಷ್ಯತ್ವ ಇದ್ದರೆ ಶಿವಮೊಗ್ಗ ಪ್ರಕರಣದ ಹೊಣೆ ಹೊತ್ತು BSY ಮತ್ತು ಈಶ್ವರಪ್ಪ ರಾಜೀನಾಮೆ ನೀಡಲಿ

ಜೈಲುಪಾಲಾದ ಲಾಲು ಆರೋಗ್ಯ ಸ್ಥಿತಿ ಗಂಭೀರ; ದೆಹಲಿ ಏಮ್ಸ್ ಗೆ ಸ್ಥಳಾಂತರ ಸಾಧ್ಯತೆ

ಜೈಲುಪಾಲಾದ ಲಾಲು ಆರೋಗ್ಯ ಸ್ಥಿತಿ ಗಂಭೀರ; ದೆಹಲಿ ಏಮ್ಸ್ ಗೆ ಸ್ಥಳಾಂತರ ಸಾಧ್ಯತೆ

ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಸ್ಪರ್ಧೆ : ಈಶ್ವರಪ್ಪ ವ್ಯಂಗ್ಯ

ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಸ್ಪರ್ಧೆ : ಈಶ್ವರಪ್ಪ ವ್ಯಂಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

beeper

ಒಂದೇ ಆ್ಯಪ್ ನೊಳಗೆ 13 ಅಪ್ಲಿಕೇಶನ್ ಗಳ ಬಳಕೆ: ಇಲ್ಲಿದೆ ವಿವರ

Weight LossHigh-Protein Diet: Eating Protein-Packed Meals May Help You Combat Obesity – Experts Reveal; 9 Food Tips High-Protein Diet: Eating Protein-Packed Meals May Help You Combat Obesity – Experts Reveal; 9 Food Tips

“ಪ್ರೋಟೀನ್ ಯುಕ್ತ ಆಹಾರ ಸೇವನೆ : ಪಥ್ಯೆಯಿಲ್ಲದೆ ಬೊಜ್ಜು ಕರಗಲು ಸಾಧ್ಯ”

ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ.. ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ..! ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

ಕಷ್ಟದ ದಿನಗಳಲ್ಲಿ ಅರೆಕಾಲಿಕ ಶಿಕ್ಷಕನಾಗಿ ದುಡಿಯುತ್ತಿದ್ದಾತ ಈಗ ಭಾರತದ ಕಬಡ್ಡಿ ಸ್ಟಾರ್!

ಕಷ್ಟದ ದಿನಗಳಲ್ಲಿ ಅರೆಕಾಲಿಕ ಶಿಕ್ಷಕನಾಗಿ ದುಡಿಯುತ್ತಿದ್ದಾತ ಈಗ ಭಾರತದ ಕಬಡ್ಡಿ ಸ್ಟಾರ್!

ಕೇಸರದೇವಿ “ನಾಸಾಗೆ ಅಚ್ಚರಿ ತಂದ ಶಕ್ತಿದೇವತೆಯ ನೆಲೆ”

ಕೇಸರದೇವಿ “ನಾಸಾಗೆ ಅಚ್ಚರಿ ತಂದ ಶಕ್ತಿದೇವತೆಯ ನೆಲೆ”

MUST WATCH

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

ಹೊಸ ಸೇರ್ಪಡೆ

Mathematical Model Competition at Science Center

ವಿಜ್ಞಾನ ಕೇಂದ್ರದಲ್ಲಿ ಗಣಿತ ಮಾದರಿ ಸ್ಪರ್ಧೆ

‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!

‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!

Telemedicine

ಟೆಲಿಮೆಡಿಸನ್‌ ಕೇಂದ್ರ ಉದ್ಘಾಟನೆ

ಯುವ ಸಮ್ಮೇಳನದಲ್ಲಿಐದು ನಿರ್ಣಯ ಮಂಡನೆ

ಯುವ ಸಮ್ಮೇಳನದಲ್ಲಿ ಐದು ನಿರ್ಣಯ ಮಂಡನೆ

ವಿನೋದ್‌ ಕಣ್ಣಲ್ಲಿ ಶ್ಯಾಡೋ ಕನಸು : ಆ್ಯಕ್ಷನ್‌ ಹೀರೋನ ಫ್ಯಾಮಿಲಿ ಎಂಟರ್‌ಟೈನರ್‌

ವಿನೋದ್‌ ಕಣ್ಣಲ್ಲಿ ಶ್ಯಾಡೋ ಕನಸು : ಆ್ಯಕ್ಷನ್‌ ಹೀರೋನ ಫ್ಯಾಮಿಲಿ ಎಂಟರ್‌ಟೈನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.