ಜಗತ್ತನ್ನು ಪುನಃ ಆವರಿಸಲಿದೆಯೇ ಕೊರೊನಾ ಗುಮ್ಮ?


Team Udayavani, Nov 16, 2021, 7:15 AM IST

ಜಗತ್ತನ್ನು ಪುನಃ ಆವರಿಸಲಿದೆಯೇ ಕೊರೊನಾ ಗುಮ್ಮ?

ಜಗತ್ತನ್ನು ಎರಡು ವರ್ಷ ತಲ್ಲಣಗೊಳಿಸಿರುವ ಕೊರೊನಾ ಗುಮ್ಮ ಮತ್ತೆ ಆವರಿಸಲಿದೆಯೇ? ಇಂಥದ್ದೊಂದು ಆತಂಕ ಮತ್ತೆ ಜಗತ್ತನ್ನು ಕಾಡತೊಡಗಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಈಗಾಗಲೇ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಿ, ಅಲ್ಲಿನ ನಾನಾ ದೇಶಗಳಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿಯಾಗಿದೆ. ಈ ಬಾರಿಯ ಲಾಕ್‌ಡೌನ್‌ನಲ್ಲಿ ಒಂದು ಪ್ರಮುಖ ಬದಲಾವಣೆಯಿದೆ. ಕಳೆದರಡು ವರ್ಷ ಸಂಪೂರ್ಣ ಲಾಕ್‌ಡೌನ್‌ ಮೊರೆಹೋಗಿದ್ದ ರಾಷ್ಟ್ರಗಳು, ಈ ಬಾರಿ ಕೊರೊನಾ ಲಸಿಕೆ ಪಡೆಯದವರಿಗೆ ಮಾತ್ರ ನಿರ್ಬಂಧಗಳನ್ನು ಹೇರಲು ಮುಂದಾಗಿವೆ. ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಲಸಿಕೆಯನ್ನು ಇನ್ನಾದರೂ ತ್ವರಿತವಾಗಿ ಹಾಕಿಸಿಕೊಳ್ಳಲು ಪರೋಕ್ಷವಾಗಿ ಒತ್ತಾಯಿಸಲಾಗಿದೆ. ಎಲ್ಲೆಲ್ಲಿ, ಯಾವ್ಯಾವ ರೀತಿಯ ನಿಬಂಧನೆಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

ಆಸ್ಟ್ರೀಯಾ
ಆಸ್ಟ್ರೀಯಾದಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ರವಿವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಲಸಿಕೆ ಹಾಕಿಸಿಕೊಳ್ಳದವರು ಕೊರೊನಾಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಅಂಥವರನ್ನು ರಕ್ಷಿಸುವ ಉದ್ದೇಶದಿಂದ ಲಾಕ್‌ಡೌನ್‌ ನಿರ್ಧಾರಕ್ಕೆ ಬರಲಾಗಿದೆೆ.

ವೃತ್ತಿ ಸಂಬಂಧಿತ ಓಡಾಟ, ದಿನಸಿ ಖರೀದಿ, ವ್ಯಾಯಾಮದ ಉದ್ದೇಶದ ವಾಕಿಂಗ್‌, ಲಸಿಕೆ ಪಡೆಯುವ ಉದ್ದೇಶ  ಹೊರತುಪಡಿಸಿದರೆ ಮತ್ಯಾವುದೇ ಉದ್ದೇಶದಲ್ಲಿ ಲಸಿಕೆ ಪಡೆಯದವರು ಓಡಾಡುವುದಕ್ಕೆ ನಿರ್ಬಂಧಿಸಲಾಗಿದೆ. ನಿಷೇಧ ಉಲ್ಲಂಘಿಸುವವರಿಗೆ ಕನಿಷ್ಠ 500 ಯೂರೋಸ್‌ (42 ಸಾವಿರ ರೂ.) ದಂಡ ವಿಧಿಸಲಾಗುತ್ತದೆ. ನಿಯಮ  ಉಲ್ಲಂಘಿಸುವ  ಖಾಸಗಿ ಕಂಪೆನಿಗೆ  2.5 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. ರಸ್ತೆಗಳಲ್ಲಿ ಅಡ್ಡಾಡುವ  ಲಸಿಕೆ ಪಡೆಯದವರನ್ನು ಪತ್ತೆ ಹಚ್ಚಲು ಅಲ್ಲಿನ ಪೊಲೀಸರಿಗೆ ಅಧಿಕಾರ ಕೊಡಲಾಗಿದೆ. 24ರ ವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ.

ನೆದರ್ಲೆಂಡ್‌
ನೆದರ್ಲೆಂಡ್‌ನ‌ಲ್ಲಿ ದಿನಕ್ಕೆ 16 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಹಾಗಾಗಿ ಅಲ್ಲಿ ಶನಿವಾರದಿಂದ ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಅಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಬ್ರೇಕ್‌ ಹಾಕಲಾಗಿದೆ. ಅಂಗಡಿಗಳು, ಶಾಂಪಿಂಗ್‌ ಮಾಲ್‌ಗ‌ಳನ್ನು ಬೇಗನೆ ಮುಚ್ಚುವಂತೆ ಆದೇಶಿಸಲಾಗಿದೆ. ಸೂಪರ್‌ ಮಾರ್ಕೆಟ್‌ಗಳು ಹಾಗೂ ಆವಶ್ಯಕವಲ್ಲದ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೂ ಈ ನಿಯಮಗಳು ಅನ್ವಯವಾಗುತ್ತವೆ ಎಂದು ಅಲ್ಲಿನ ಹಂಗಾಮಿ ಪ್ರಧಾನಿ ಮಾರ್ಕ್‌ ರುಟ್ಟೆ ತಿಳಿಸಿದ್ದಾರೆ. ಇನ್ನು, ಕೆಫೆಗಳು, ನೈಟ್‌ಕ್ಲಬ್‌ಗಳನ್ನು ರಾತ್ರಿ 8ಕ್ಕೆ ಮುಚ್ಚುವಂತೆ ಆದೇಶಿಸಲಾಗಿದೆ. ಆದರೆ ಈ ನಿರ್ಧಾರವನ್ನು ಅನೇಕ ಸಾರ್ವಜನಿಕರು ಆಕ್ಷೇಪಿಸಿದ್ದು, ಪ್ರಧಾನಿಯವರ ಘೋಷಣೆ ಹೊರಬೀಳುತ್ತಿದ್ದಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ.

ಡೆನ್ಮಾರ್ಕ್‌
ಡಚ್ಚರ ಈ ನಾಡಿನಲ್ಲಿ 3ನೇ ಅಲೆ ನಿಧಾನವಾಗಿ ಏಳುತ್ತಿದೆ. ಒಂದೆಡೆ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದರೂ ಮತ್ತೂಂದೆಡೆ ದಿನಂಪ್ರತಿ ಪ್ರಕರಣಗಳಲ್ಲಿ ಆಗುತ್ತಿರುವ ಏರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಅಲ್ಲಿ ಈ ಹಿಂದೆ ಜಾರಿಗೊಳಿಸಿದ್ದ ನಿರ್ಬಂಧಗಳನ್ನೇ ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. ಲಸಿಕೆ ಪಡೆದವರಿಗೆ ಅಥವಾ ಕೊರೊನಾ ನೆಗೆಟಿವ್‌ ಟೆಸ್ಟ್‌ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಬಾರ್‌ ಮತ್ತು ಕ್ಲಬ್‌ಗಳಿಗೆ ಪ್ರವೇಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ಎರಡು ಡೋಸ್‌ ಪಡೆದವರಿಗೆ ಹಾಗೂ ಕೊರೊನಾದಿಂದ ಗುಣ ಮುಖರಾದವರಿಗೆ ಸಾರ್ವಜನಿಕ ಸ್ಥಳಗಳನ್ನು ಬಳಸಲು ಕೊರೊನಾ ಪಾಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.

ಜರ್ಮನಿ
ಈ ದೇಶದಲ್ಲಿ ದಿನಂಪ್ರತಿ ಪ್ರಕರಣಗಳು ಸರಾಸರಿ 50 ಸಾವಿರದಷ್ಟಿವೆ. ಅದರಲ್ಲೂ  ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 2ಜಿ ಮಾದರಿಯ ನಿರ್ಬಂಧ ಗಳನ್ನು ಹೇರಲು ಅಲ್ಲಿನ ಸರಕಾರ ನಿರ್ಧರಿಸಿದೆ. ಅದರಂತೆ, ಸಾರ್ವಜನಿಕ ಸ್ಥಳಗಳಿಗೆ ಎರಡು ಡೋಸ್‌ ಲಸಿಕೆ ಪಡೆಯದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹಾಗಾಗಿ  ಕಳೆದ ಆರು ತಿಂಗಳಲ್ಲಿ ಲಸಿಕೆಯ ಎರಡು ಡೋಸ್‌ ಪಡೆದವರು ಹಾಗೂ ಕೊರೊನಾದಿಂದ ಗುಣಮುಖರಾದವರಿಗೆ ಮಾತ್ರ ರೆಸ್ಟಾರೆಂಟ್‌ಗಳಲ್ಲಿ, ಬಾರ್‌ ಮತ್ತು ಕ್ಲಬ್‌ಗಳಲ್ಲಿ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ವೈದ್ಯಕೀಯ ಕಾರಣಗಳಾಗಿ ಮನೆಗಳಿಂದ ಹೊರ ಬರುವವರಿಗೆ ಹಾಗೂ ಮಕ್ಕಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಸದ್ಯದಲ್ಲೇ ಈ ನಿರ್ಬಂಧಗಳು ಜರ್ಮನಿಯ ರಾಜಧಾನಿಯಾದ ಬರ್ಲಿನ್‌ಗೂ ಕಾಲಿಡುವ ಸಾಧ್ಯತೆಗಳಿವೆ.

ನಾರ್ವೆ
ಇಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆಯಾದರೂ ಅಲ್ಲಿನ ಸರಕಾರ ಲಾಕ್‌ಡೌನ್‌ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಯೂರೋಪ್‌ನ ಮತ್ತೂಂದು ಪ್ರಮುಖ ರಾಷ್ಟ್ರವಾದ ಆಸ್ಟ್ರೀಯಾದಲ್ಲಿ ರವಿ ವಾರದಿಂದ ಆಂಶಿಕ ಲಾಕ್‌ಡೌನ್‌ ಜಾರಿಗೊಳಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಕೊರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಹೊರತಾದ ಕ್ರಮಗಳನ್ನು ಹುಡುಕಾಡುತ್ತಿದೆ. ಲಾಕ್‌ಡೌನ್‌ ಬದಲು, ದೇಶದ ಎಲ್ಲರಿಗೂ 3ನೇ ಡೋಸ್‌ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಾರ್ವೆಯ ಪ್ರಧಾನಿ ಜೊನಾಸ್‌ ಜೊಹರ್‌ ತಿಳಿಸಿದ್ದಾರೆ. ಲಸಿಕೆ ಪಡೆದ ಎಲ್ಲರಿಗೂ ಕೊರೊನಾ ಪಾಸ್‌ಗಳನ್ನು ವಿತರಿಸುವಂತೆ ಸ್ಥಳೀಯ ಸರಕಾರಗಳಿಗೆ ಸೂಚಿಸಲು ತೀರ್ಮಾನಿಸಲಾಗಿದೆ. ಈ ಪಾಸ್‌ ಪಡೆದವರಿಗಷ್ಟೇ ಮನೆಗಳಿಂದ ಹೊರಬರಲು ಅವಕಾಶ ಸಿಗಲಿದೆ.

ಲ್ಯಾಟ್ವಿಯಾ
ಇಲ್ಲಿ ಲಸಿಕೆ ಅಭಿಯಾನ ಕುಂಟುತ್ತಾ ಸಾಗುತ್ತಿದ್ದು ಸಾರ್ವಜನಿಕರಿಗೆ ಸರಿಯಾದ ಪ್ರಮಾಣದಲ್ಲಿ ಲಸಿಕೆ ಸಿಕ್ಕಿಲ್ಲ. ಯೂರೋಪ್‌ನಲ್ಲೇ ಅತೀ ಕಡಿಮೆ ಜನರಿಗೆ ಲಸಿಕೆ ನೀಡಿದ ಕುಖ್ಯಾತಿ ಈ ದೇಶಕ್ಕಿದೆ. ಇದರ ನಡುವೆಯೇ ಐರೋಪ್ಯ ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಇಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ. ಹಾಗಾಗಿ ಅಕ್ಟೋಬರ್‌ನಲ್ಲಿ ನಾಲ್ಕು ವಾರಗಳ ಲಾಕ್‌ಡೌನ್‌ ಹೇರಲಾಗಿತ್ತು. ನವೆಂಬರ್‌ನಿಂದ ಆ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ ಪುನಃ ಅದೇ ಲಾಕ್‌ಡೌನ್‌ ಮೊರೆ ಹೋಗಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧರಿಸಲು ಸರಕಾರದ ಮಟ್ಟದಲ್ಲಿ ಹಲವಾರು ಪ್ರಮುಖ ಸಭೆಗಳು ನಡೆಯುತ್ತಿವೆ.

ರಷ್ಯಾ
ರವಿವಾರ ರಷ್ಯಾದಲ್ಲಿ 38,823 ಕೇಸ್‌ಗಳು ಪತ್ತೆಯಾಗಿದ್ದು, ಸೋಮವಾರದಂದು 38,420 ಪ್ರಕರಣಗಳು ದಾಖಲಾ ಗಿವೆ. ರವಿವಾರ ಅಲ್ಲಿ 1,219 ಸಾವು ಸಂಭವಿಸಿದ್ದರೆ, ಸೋಮವಾರದಂದು 1,211 ಸಾವು ಸಂಭವಿಸಿವೆ. ನ. 6ರ ಅನಂತರ ಅಲ್ಲಿ ಕೊರೊನಾ ಸಾವಿನ ಸಂಖ್ಯೆ ಶೇ. 6ರಷ್ಟು ಹೆಚ್ಚಾಗಿದೆ. ಅ. 16ರ ಅನಂತರ ಅಲ್ಲಿ ದಿನಂಪ್ರತಿ 1,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಹಾಗಾಗಿ ಅಲ್ಲಿನ ಸರಕಾರ ಅಲ್ಲಿನ ಸಂಸತ್ತಿನಲ್ಲಿ ಕೊರೊನಾ ನಿರ್ಬಂಧಗಳನ್ನು ಜಾರಿಗೊಳಿಸುವ ಸಲುವಾಗಿ ಎರಡು ಮಸೂದೆಗಳನ್ನು ಮಂಡಿಸಿದೆ. ಅಂತರ ದೇಶೀಯ ರೈಲು ಹಾಗೂ ವಿಮಾನ ಪ್ರಯಾಣ, ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಲಸಿಕೆ ಪಡೆಯದವರಿಗೆ ನಿರ್ಬಂಧ ಹೇರುವ ಅಂಶಗಳಿವೆ. ಇವಕ್ಕೆ ಸಂಸತ್ತಿನ ಅಂಗೀಕಾರ ಪಡೆದರೆ ಮುಂದಿನ ವರ್ಷದ ಆರಂಭದಲ್ಲೇ ಅಂದರೆ, 2022ರ ಫೆಬ್ರವರಿಯಲ್ಲಿ ರಷ್ಯಾದಲ್ಲಿ ಲಾಕ್‌ಡೌನ್‌ ಜಾರಿಯಾಗುವ ಸಾಧ್ಯತೆಗಳಿವೆ ಎಂದು ರಷ್ಯಾದ ಕೊರೊನಾ ಟಾಸ್ಕ್ಫೋರ್ಸ್‌ನ ಮುಖ್ಯಸ್ಥರೂ ಆಗಿರುವ ಉಪಪ್ರಧಾನಿ ತಾತ್ಯಾನಾ ಗೊಲಿಕೊವಾ.

ನಿರ್ಬಂಧಗಳ ಅಡಿಯಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಸಾರ್ವಜನಿಕ ಪ್ರದೇಶಗಳನ್ನು ಪ್ರವೇಶಿಸಲು ಹೆಲ್ತ್‌ ಪಾಸ್‌ ನೀಡಲು ನಿರ್ಧರಿಸಲಾಗಿದೆ.

ಜೆಕ್‌ ಗಣರಾಜ್ಯ, ಸ್ಲೊವಾಕಿಯಾ, ಪೋಲೆಂಡ್‌
ಈ ಮೂರೂ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಶೇ. 13ರಷ್ಟು ಹೆಚ್ಚುತ್ತಿರುವುದರ ಜೊತೆಗೆ ಕೊರೊನಾ ಸಾವಿನ ಸಂಖ್ಯೆಯೂ ಶೇ. 7ರಷ್ಟು ಹೆಚ್ಚಾಗಿದೆ. ಹಾಗಾಗಿ ಅಲ್ಲಿ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಅಲ್ಲಿನ ಸರಕಾರಗಳು ನಿರ್ಧರಿಸಿವೆ. ಲಾಕ್‌ಡೌನ್‌ ಬಗ್ಗೆ ಇನ್ನೂ ನಿರ್ಧಾರವಿಲ್ಲ.

ಚೀನದಲ್ಲಿಯೂ ಶುರುವಾಗಿದೆ ಆತಂಕ
ಕೊರೊನಾ ತವರು ಮನೆಯಾದ ಚೀನದಲ್ಲೂ ಪ್ರಕರಣಗಳು ಹೆಚ್ಚಾಗುತ್ತಿದೆ. ಚೀನದ ದಕ್ಷಿಣ ಭಾಗದಲ್ಲಿರುವ ರುಲಿಯ್‌ನಲ್ಲಿ ಪ್ರಕರಣಗಳು ಕಡಿಮೆಯಾಗುತ್ತಲೇ ಇಲ್ಲ. ಹಾಗಾಗಿ ಅಲ್ಲಿ ಕಳೆದ ಏಳು ತಿಂಗಳಲ್ಲಿ ನಾಲ್ಕು ಬಾರಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಅದರ ಜತೆಗೆ ಲಸಿಕಾ ಅಭಿಯಾನವನ್ನೂ ಈ ನಗರದಲ್ಲಿ ಚುರುಕುಗೊಳಿಸಲಾಗಿದೆ. ಕೊರೊನಾಕ್ಕೆ ಸಂಬಂಧಿಸಿದ ಸುಮಾರು 50ಕ್ಕೂ ಹೆಚ್ಚು ಸೋಂಕುಗಳು ಬೀಜಿಂಗ್‌ನಲ್ಲಿ ಸ್ಥಳೀಯವಾಗಿ ಹರಡುತ್ತಿದೆ. ಅಲ್ಲದೆ, ಅಕ್ಟೋಬರ್‌ನ ಮಧ್ಯಭಾಗದಿಂದ ನವೆಂಬರ್‌ ಮಧ್ಯಭಾಗದ ಹೊತ್ತಿಗೆ ಚೀನದಲ್ಲಿ ದಿನಂಪ್ರತಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಮುಂಬರುವ ಅಪಾಯವನ್ನು ತಡೆಗಟ್ಟುವ ಸಲುವಾಗಿ ಬೀಜಿಂಗ್‌ ಸ್ಥಳೀಯ ಸರಕಾರ, ಈಗಾಗಲೇ ನಗರದ ಕೆಲವಾರು ಜನವಸತಿ ಸಮುಚ್ಚಯಗಳ ಮಟ್ಟದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದೆ. ಸಮುಚ್ಚಯಗಳ ಜನರು ಮನೆಗಳಿಂದಲೇ ತಮ್ಮ ಕಚೇರಿ ಕೆಲಸ ಕಾರ್ಯ ಗಳನ್ನು ನಡೆಸಲು ಸೂಚಿಸಲಾಗಿದೆ. ವಸತಿ ಸಮುಚ್ಚಯಗಳಲ್ಲೇ ಇರುವ ದಿನಸಿ, ಮತ್ತಿತರ ನಾಗರಿಕ ಪೂರೈಕೆ ಅಂಗಡಿಗಳಿಂದ ಅಲ್ಲಿನ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ರವಾನಿಸ ಲಾಗುತ್ತಿದೆ. ಇನ್ನು, ಹಲವು ಸರಕಾರಿ ಕಚೇರಿಗಳು, ಖಾಸಗಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ ಸೌಕರ್ಯ ಕಲ್ಪಿಸಿದ್ದಾರೆ. ಕೆಲವು ಮಾಲ್‌ಗ‌ಳು ಸೇರಿದಂತೆ ಜನಸಂದಣಿಗೆ ದಾರಿ ಮಾಡಿಕೊಡುವ ಕಡೆ ಜನರನ್ನು ನಿರ್ಬಂಧಿಸಲಾಗಿದೆ.

ಟಾಪ್ ನ್ಯೂಸ್

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

5ಜಿ ತರಂಗಗಳ ಎಫೆಕ್ಟ್: ಅಮೆರಿಕದಲ್ಲಿ ನೂರಾರು ವಿಮಾನಗಳ ಸಂಚಾರ ರದ್ದು

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

thumb 5

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಕೋವಿಡ್‌ ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಅಂತಾರಾಷ್ಟ್ರೀಯ ನರ್ಸಿಂಗ್‌ ರಿಸರ್ಚ್‌ ಕಾನ್‌ಕ್ಲೇವ್‌

ಅಂತಾರಾಷ್ಟ್ರೀಯ ನರ್ಸಿಂಗ್‌ ರಿಸರ್ಚ್‌ ಕಾನ್‌ಕ್ಲೇವ್‌

ಒಳಹರಿವು ಕಡಿಮೆಯಾದರೆ ಕೈಗಾರಿಕೆಗಳಿಗೆ ರೇಷನಿಂಗ್‌!

ಒಳಹರಿವು ಕಡಿಮೆಯಾದರೆ ಕೈಗಾರಿಕೆಗಳಿಗೆ ರೇಷನಿಂಗ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.