ಭಾರತದ ಆಲ್ರೌಂಡ್ ಶೋ: ಸಚಿನ್ ಸಂತಸ
Team Udayavani, Jun 18, 2019, 5:42 AM IST
ಮ್ಯಾಂಚೆಸ್ಟರ್: ವಿಶ್ವಕಪ್ ಪಂದ್ಯಾವಳಿಯನ್ನು ವೀಕ್ಷಿಸಲು ಇಂಗ್ಲೆಂಡಿಗೆ ಆಗಮಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಭಾರತ-ಪಾಕಿಸ್ಥಾನ ಪಂದ್ಯಕ್ಕೂ ಸಾಕ್ಷಿಯಾದರು.
ಭಾರತದ ಗೆಲುವಿಗೆ ಪ್ರತಿಕ್ರಿಯಿಸಿದ ಸಚಿನ್, “ಇದೊಂದು ಆಲ್ರೌಂಡ್ ಶೋ. ರೋಹಿತ್ ಸಿಡಿದರು. ರಾಹುಲ್ ಅತ್ಯಂತ ಜವಾಬ್ದಾರಿಯ ಆಟವಾಡಿದರು. ಕೊಹ್ಲಿಯದ್ದು ಕ್ಲಾಸಿಕ್ ಬ್ಯಾಟಿಂಗ್ ಆಗಿತ್ತು. ಕುಲದೀಪ್, ಹಾರ್ದಿಕ್ ದಾಳಿ ಹೆಚ್ಚು ಪರಿಣಾಮಕಾರಿಯಾಗಿತ್ತು’ ಎಂದಿದ್ದಾರೆ.
“ಪಾಕಿಸ್ಥಾನದ ಬೌಲರ್ಗಳು ಪರಿಸ್ಥಿತಿಯ ಲಾಭವೆತ್ತಲು ಸಂಪೂರ್ಣ ವಿಫಲರಾದರು. ಇದು ಲೆಗ್ಸ್ಪಿನ್ನರ್ಗಳಿಗೆ ಹೇಳಿಸಿದ ವಾತಾವರಣ ಆಗಿರಲಿಲ್ಲ. ದೊಡ್ಡ ಪಂದ್ಯವೊಂದಕ್ಕೆ ಪಾಕ್ ನಡೆಸಿದ ಸಿದ್ಧತೆ ಸಾಲದು’ ಎಂದರು.