ವಿಶ್ವಕಪ್: ಮುಂದಿನೆರಡು ಪಂದ್ಯಗಳಿಗೆ ಭುವಿ ಅಲಭ್ಯ

ಭುವಿ ಸ್ಥಾನ ತುಂಬಲು ಸಿದ್ದನಾದ ಇನ್ನೊಬ್ಬ ವೇಗಿ

Team Udayavani, Jun 17, 2019, 3:17 PM IST

ಮ್ಯಾಂಚೆಸ್ಟರ್: ಪಾಕಿಸ್ಥಾನ ವಿರುದ್ಧದ ಮಹತ್ವದ ಪಂದ್ಯ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ನಿನ್ನೆಯ ಪಂದ್ಯದಲ್ಲಿ ಗಾಯಗೊಂಡಿದ್ದ ವೇಗಿ ಭುವನೇಶ್ವರ್ ಕುಮಾರ್ ಇನ್ನೂ ಎರಡು- ಮೂರು ಪಂದ್ಯಗಳಿಗೆ ಲಭ್ಯರಾಗುವುದಿಲ್ಲ.

ಪಾಕ್ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ನ 5ನೇ ಓವರ್ ಎಸೆಯುತ್ತಿದ್ದ ಭುವಿ ನಾಲ್ಕನೇ ಎಸೆತದ ವೇಳೆ ಫುಟ್ ಮಾರ್ಕ್ ನಲ್ಲಿ ಜಾರಿ ಮಂಡಿರಜ್ಜು ಸೆಳೆತಕ್ಕೆ ಒಳಗಾಗಿದ್ದರು. ಕೂಡಲೇ ತಂಡದ ಫಿಸಿಯೋ ಪ್ಯಾಟ್ರಿಕ್ ಸಲಹೆಯಂತೆ ಮೈದಾನದಿಂದ ಹೊರನಡೆದ ಭುವಿ ನಂತರ ಆಟದಿಂದ ದೂರ ಉಳಿಯಬೇಕಾಯಿತು. ಭುವಿ ಖಾತೆಯ ಓವರ್ ಗಳನ್ನು ವಿಜಯ್ ಶಂಕರ್ ಎಸೆದರು.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್, ಭುವಿಯ ಗಾಯ ಅಷ್ಟೇನೂ ಗಂಭೀರವಾಗಿ ಇಲ್ಲ. ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆ. ಹೆಚ್ಚೆಂದರೆ ಎರಡೂ ಮೂರು ಪಂದ್ಯಗಳಿಗಷ್ಟೇ ಭುವಿ ಲಭ್ಯವಾಗುವುದಿಲ್ಲ. ಅವರ ಸ್ಥಾನವನ್ನು ಶಮಿ ತುಂಬಲಿದ್ದಾರೆ ಎಂದರು.

ಪಾಕಿಸ್ಥಾನ ವಿರುದ್ಧ ಭಾರತ ಡಕ್ ವರ್ತ್ ಲೂಯಿಸ್ ನಿಯಮದಡಿಯಲ್ಲಿ 89 ರನ್ ಗಳ ಅಂತರದಿಂದ ಜಯ ಸಾಧಿಸಿತು. ಭಾರತ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ಥಾನವನ್ನು ಜೂನ್ 22ರಂದು ಸೌತಂಪ್ಟನ್ ನಲ್ಲಿ ಎದುರಿಸಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ