ರಾಹುಲ್ ದ್ರಾವಿಡ್‌ ದಾಖಲೆ ಮುರಿದ ಧೋನಿ

Team Udayavani, Jun 17, 2019, 4:30 PM IST

ಮ್ಯಾಂಚೆಸ್ಟರ್: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಕ್ ವಿರುದ್ದದ ಪಂದ್ಯದಲ್ಲಿ ಒಂಟಿ ರನ್ ಗೆ ಔಟಾದರೇನಂತೆ ಆ ಪಂದ್ಯದಲ್ಲೂ ಒಂದು ದಾಖಲೆ ಬರೆದಿದ್ದಾರೆ.

ಭಾರತದ ಪರ ಗರಿಷ್ಠ ಏಕದಿನ ಆಡಿದವರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಈಗ 2ನೇ ಸ್ಥಾನಕ್ಕೇರಿದ್ದಾರೆ. ಪಾಕ್‌ ವಿರುದ್ಧ ಪಂದ್ಯಕ್ಕೂ ಮುನ್ನ 340 ಪಂದ್ಯವಾಡಿ ಭಾರತ ಕ್ರಿಕೆಟ್‌ನ ದಂತಕಥೆ ರಾಹುಲ್ ದ್ರಾವಿಡ್‌ ಜೊತೆಗೆ ಸಮಬಲ ಸಾಧಿಸಿದ್ದ ಅವರು, ಪಾಕ್‌ ವಿರುದ್ಧ ಆಡಿದ ನಂತರ ತಮ್ಮ ಪಂದ್ಯಗಳ ಸಂಖ್ಯೆಯನ್ನು 341ಕ್ಕೇರಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸಚಿನ್‌ ತೆಂಡುಲ್ಕರ್‌ ಅವರು 461 ಏಕದಿನ ಪಂದ್ಯವಾಡಿದ್ದಾರೆ. ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 334 ಪಂದ್ಯವಾಡಿದ್ದರೆ, ಸೌರವ್ ಗಂಗೂಲಿ 308 ಪಂದ್ಯಗಳನ್ನಾಡಿದ್ದರು. ಇತ್ತೀಚಿಗೆ ವಿದಾಯ ಹೇಳಿದ ಯುವರಾಜ್ ಸಿಂಗ್ 301 ಏಕದಿನ ಪಂದ್ಯಗಳಲ್ಲಿ ಭಾರತದ ಪರ ಆಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ