ಶ್ರೀಲಂಕಾ ತಂಡದ ವಿರುದ್ಧ ಶಿಸ್ತುಕ್ರಮ?

Team Udayavani, Jun 17, 2019, 11:37 AM IST

ಲಂಡನ್‌: ಆಸ್ಟ್ರೇಲಿಯ ವಿರುದ್ಧ ಶನಿವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಸೋತ ಬಳಿಕ ಮಾಧ್ಯಮದ ಕರ್ತವ್ಯ ನಿಭಾಯಿಸಲು ವಿಫ‌ಲವಾದ ಶ್ರೀಲಂಕಾ ತಂಡದ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.

ದಿಮುತ್‌ ಕರುಣರತ್ನೆ ನೇತೃತ್ವದ ಶ್ರೀಲಂಕಾ ತಂಡ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ 87 ರನ್ನುಗಳಿಂದ ಸೋತಿತ್ತು. ಪಂದ್ಯ ಮುಗಿದ ಬಳಿಕ ಶ್ರೀಲಂಕಾ ನಾಯಕ ಕರುಣರತ್ನೆ ಮತ್ತು ತಂಡದ ಇತರ ಆಟಗಾರರು “ಮಿಕ್ಸೆಡ್‌ ಝೋನ್‌’ ಮತ್ತು ಪತ್ರಿಕಾಗೋಷ್ಠಿಗೆ ಹಾಜರಾಗಬೇಕಿತ್ತು. ಆದರೆ ಲಂಕಾ ಇದನ್ನು ನಿರಾಕರಿಸಿದೆ. ಹೀಗಾಗಿ ಅವರ ಮೇಲೆ ಐಸಿಸಿ ಶಿಸ್ತುಕ್ರಮ ಜರಗಿಸುವ ಸಾಧ್ಯತೆಯಿದೆ.

ಐಸಿಸಿ ವಿರುದ್ಧ ಟೀಕೆ
ವಿಶ್ವಕಪ್‌ ಕೂಟದ ವೇಳೆ ತಂಡವನ್ನು ಐಸಿಸಿ ನೋಡಿಕೊಂಡ ರೀತಿಯನ್ನು ಶ್ರೀಲಂಕಾ ತಂಡದ ವ್ಯವಸ್ಥಾಪಕ ಅಶಾಂತ ಡಿ’ಮೆಲ್‌ ಟೀಕಿಸಿದ್ದಾರೆ.
ವಿಶ್ವಕಪ್‌ ವೇಳೆ ತಂಡಕ್ಕೆ ಒದಗಿಸಲಾದ ಪಿಚ್‌ನ ಗುಣಮಟ್ಟ, ಅಭ್ಯಾಸ ಸೌಕರ್ಯ, ಸಾರಿಗೆ ಮತ್ತು ಆತಿಥ್ಯವನ್ನು ಅವರು ಟೀಕಿಸಿದ್ದಾರೆ. ಇದು ವಿಶ್ವಕಪ್‌ ಕೂಟ. ಅಗ್ರ 10 ರಾಷ್ಟ್ರಗಳು ಇಲ್ಲಿ ಭಾಗವಹಿಸುತ್ತಿವೆ. ಭಾಗವಹಿಸುವ ಎಲ್ಲ ತಂಡಗಳನ್ನು ಐಸಿಸಿ ಸಮಾನವಾಗಿ ನೋಡಿಕೊಳ್ಳಬೇಕಾಗಿದೆ ಎಂದವರು ಹೇಳಿದ್ದಾರೆ. ತಂಡಕ್ಕೆ ಒದಗಿಸಲಾದ ನೆಟ್‌ ಸೌಕರ್ಯ ತೃಪ್ತಿಕರವಾಗಿಲ್ಲ ಮತ್ತು ಹೊಟೇಲ್‌ನಲ್ಲಿ ಈಜುಕೊಳ ಇಲ್ಲ ಎಂದು ಅವರು ದೂರಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ