ಸೋಲಿನಿಂದ ಹೃದಯ ಭಾರವಾಗಿತ್ತು: ರೋಹಿತ್ ಭಾವನಾತ್ಮಕ ಟ್ವೀಟ್

Team Udayavani, Jul 12, 2019, 2:33 PM IST

ಮುಂಬೈ: ವಿಶ್ವಕಪ್ ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಪ್ರಮುಖ ಪಂದ್ಯದಲ್ಲಿ ವಿಫಲರಾಗಿ ನಿರಾಸೆ ಅನುಭವಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ರೋಹಿತ್ ಭಾವಾನಾತ್ಮಕವಾಗಿ ಟ್ವಿಟ್ ಮಾಡಿದ್ದಾರೆ.

“ಅವಶ್ಯಕತೆ ಇದ್ದಾಗ ತಂಡವಾಗಿ ಆಡಲು ನಾವು ವಿಫಲರಾದೆವು. ಕೇವಲ 30 ನಿಮಿಷದ ಕೆಟ್ಟ ಆಟ ನಮ್ಮನ್ನು ಪಂದ್ಯದಿಂದ ಹೊರಗಿರಿಸಿತು. ನನ್ನ ಹೃದಯ ಭಾರವಾಗಿದೆ. ನೀವು ಕೂಡಾ ಇದೇ ಸ್ಥಿತಿಯಲ್ಲಿದ್ದೀರಿ ಎಂದು ಗೊತ್ತಿದೆ. ವಿದೇಶದಲ್ಲೂ ಟೀಂ ಇಂಡಿಯಾಗೆ ನಿಮ್ಮ ಬೆಂಬಲ ಅಭೂತಪೂರ್ವವಾಗಿತ್ತು. ಇಂಗ್ಲೆಂಡಿನ ತುಂಬಾ ಎಲ್ಲಿ ಆಡಿದರೂ ನೀವು ಬೆಂಬಲಿಸಿದ್ದೀರಿ” ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಈ ವಿಶ್ವಕಪ್ ನಲ್ಲಿ 9 ಪಂದ್ಯಗಳನ್ನಾಡಿದ್ದ ರೋಹಿತ್ 648 ರನ್ ಗಳಿಸದ್ದಾರೆ. ದಾಖಲೆಯ ಐದು ಶತಕಗಳನ್ನು ಸಿಡಿಸಿದ್ದ ರೋಹಿತ್, ಸೆಮಿ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ