ಇಂಗ್ಲೆಂಡ್ ಫೇವರಿಟ್: ಪಾಂಟಿಂಗ್
Team Udayavani, May 21, 2019, 6:00 AM IST
ಮೆಲ್ಬರ್ನ್: ಈಗಾಗಲೇ ಹಲವಾರು ಕ್ರಿಕೆಟ್ ದಿಗ್ಗಜರು ತಮ್ಮ ತಮ್ಮ ನೆಚ್ಚಿನ ವಿಶ್ವಕಪ್ ತಂಡಗಳನ್ನು ಗುರುತಿಸಿದ್ದಾರೆ. ಈಗ ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಸರದಿ. ಅವರು ಈ ಬಾರಿ ಆತಿಥೇಯ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.
ಈ ಕೂಟದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಸಮಾನ ಪೈಪೋಟಿ ನೀಡುದರಲ್ಲಿ ಅನುಮಾನವಿಲ್ಲ ಎಂದೂ ಪಾಂಟಿಂಗ್ ಹೇಳಿದ್ದಾರೆ. ಇಂಗ್ಲೆಂಡ್ಗೆ ತವರಿನ ಪಂದ್ಯಾವಳಿಯಾದ್ದರಿಂದ ಅಲ್ಲಿನ ವಾತಾವರಣ ಅನುಕೂಲಕರವಾಗುತ್ತದೆ. ಇತರ ತಂಡಗಳಿಗಿಂತ ಬಲಿಷ್ಠ ಆಟಗಾರರನ್ನು ಇಂಗ್ಲೆಂಡ್ ಹೊಂದಿದೆ ಕಳೆದ ಒಂದು ವರ್ಷದಿಂದ ಇಂಗ್ಲೆಂಡ್ ತಾನೆಷ್ಟು ಬಲಶಾಲಿ ಎನ್ನುವುದನ್ನು ನಿರೂಪಿಸುತ್ತಲೇ ಬಂದಿದೆ ಎಂದು ಪಾಂಟಿಂಗ್ ಹೇಳಿದರು.