ವಿಶ್ವಕಪ್ಗೆ ಇಂಗ್ಲೆಂಡ್ ಹೊಸ ಜೆರ್ಸಿ
Team Udayavani, May 23, 2019, 6:00 AM IST
ಲಂಡನ್: ಆಸ್ಟ್ರೇಲಿಯ ತಂಡವು ವಿಶ್ವಕಪ್ಗೆ ತನ್ನ ರೆಟ್ರೋ ಜೆರ್ಸಿಯನ್ನು ತೊಡಲು ನಿರ್ಧರಿಸಿದ ಅನಂತರ ಆತಿಥೇಯ ಇಂಗ್ಲೆಂಡ್ ಕೂಟ 1992ರ ವಿಶ್ವಕಪ್ನಲ್ಲಿ ತೊಟ್ಟಿದ್ದ ಜರ್ಸಿಯನ್ನು ಈ ಬಾರಿ ಧರಿಸಿ ವಿಶ್ವಕಪ್ ಕಣಕ್ಕೆ ಇಳಿಯಲು ಸಜ್ಜಾಗಿದೆ.
1992ರಲ್ಲಿ ಇಂಗ್ಲೆಂಡ್ ತಂಡವು ಫೈನಲ್ ಪ್ರವೇಶಿಸಿತ್ತು. ಈ ಬಾರಿ ತವರಿ ನಲ್ಲಿ ವಿಶ್ವಕಪ್ ನಡೆಯುವುದರಿಂದ ಪ್ರಶಸ್ತಿ ಗೆಲ್ಲುವುದು ಇಂಗ್ಲೆಂಡಿನ ಯೋಜನೆಯಾಗಿದೆ. ಇದಕ್ಕಾಗಿ 1992ರಲ್ಲಿ ಧರಿಸಿದ್ದ ಆಕಾಶ ನೀಲಿ ಬಣ್ಣದ ಜರ್ಸಿಯನ್ನು ಧರಿಸಲು ಇಂಗ್ಲೆಂಡ್ ನಿರ್ಧರಿಸಿದೆ. 1992ರಲ್ಲಿ ಇಂಗ್ಲೆಂಡ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿತ್ತು, ಆದರೆ ಫೈನಲ್ನಲ್ಲಿ ಪಾಕಿಸ್ಥಾನದ ವಿರುದ್ಧ ಸೋಲನುಭವಿಸಿ ರನ್ನರ್ ಆಪ್ಗೆ ತೃಪ್ತಿಪಟ್ಟುಕೊಂಡಿತು.
ಹೊಸ ಜೆರ್ಸಿ ಬಿಡುಗಡೆಗೊಳಿಸಿ ಟ್ವೀಟ್ ಮಾಡಿರುವ ಇಂಗ್ಲೆಂಡ್ ತಂಡದ ಫೋಟೊಗಳು ವೈರಲ್ ಆಗಿವೆ. ಇಂಗ್ಲೆಂಡ್ ಮೇ 30ರಂದು ವಿಶ್ವಕಪ್ ಉದ್ಘಾಟನ ಪಂದ್ಯದಲ್ಲಿ ದ.ಆಫ್ರಿಕಾದ ವಿರುದ್ಧ ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ