ಗೇಲ್‌ ಬ್ಯಾಟ್‌ನಿಂದ “ಯೂನಿವರ್ಸ್‌ ಬಾಸ್‌’ ತೆಗೆಯಲು ಐಸಿಸಿ ಸೂಚನೆ

Team Udayavani, Jun 11, 2019, 6:00 AM IST

ನಾಟಿಂಗ್‌ಹ್ಯಾಮ್‌: ಎಂ.ಎಸ್‌. ಧೋನಿ ವಿಕೆಟ್‌ ಕೀಪಿಂಗ್‌ ಗ್ಲೌಸ್‌ನಲ್ಲಿ ಸೈನ್ಯದ ಚಿಹ್ನೆ ಬಳಸಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಇದನ್ನು ತೆಗೆಯುವಂತೆ ಐಸಿಸಿ ಮಾಜಿ ನಾಯಕನಿಗೆ ಸೂಚಿಸಿತ್ತು. ಧೋನಿ ಇದರಂತೆಯೇ ನಡೆದು ಕೊಂಡಿದ್ದಾರೆ.

ಇದೀಗ ವಿಂಡೀಸ್‌ ಕ್ರಿಕೆಟ್‌ ದೈತ್ಯ ಕ್ರೀಸ್‌ ಗೇಲ್‌ ಸರದಿ. ಅವರ ಬ್ಯಾಟ್‌ನಲ್ಲಿ ಹಾಕಿಕೊಂಡಿರುವ “ಯೂನಿವರ್ಸ್‌ ಬಾಸ್‌’ ಸ್ಟಿಕ್ಕರ್‌ ತೆಗೆಯುವಂತೆ ಸೂಚಿಸಿದೆ. ಗೇಲ್‌ ನಿಕ್‌ನೇಮ್‌ ವೈಯಕ್ತಿಕವಾಗಿದ್ದು, ಅದನ್ನು ಬಳಸುವಂತಿಲ್ಲ ಎಂದು ಗೇಲ್‌ಗೆ ಐಸಿಸಿ ಮನದಟ್ಟು ಮಾಡಿದೆ. ಧೋನಿ ಗ್ಲೌಸ್‌ನಲ್ಲಿ ಸೈನ್ಯದ ಚಿಹ್ನೆ ಬಳಸಿಲ್ಲ ಎಂದಿದ್ದಾರೆ.

ಹಾಗಿದ್ದರೆ ಗೇಲ್‌ಗ‌ೂ ವೈಯಕ್ತಿಕ ಸಂದೇಶಗಳನ್ನು ಪ್ರಕಟಿಸಲು ಅವಕಾಶವಿಲ್ಲ’ ಎಂದು ಐಸಿಸಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ