ಮ್ಯಾಂಚೆಸ್ಟರ್‌ ಫ‌ುಟ್‌ಬಾಲ್‌ ಕ್ರೀಡಾಂಗಣಕ್ಕೆ ಭಾರತ ಕ್ರಿಕೆಟಿಗರ ಭೇಟಿ

Team Udayavani, Jun 17, 2019, 11:30 AM IST

ಲಂಡನ್‌: ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಹಲ್‌ ಮತ್ತು ವಿಜಯ್‌ ಶಂಕರ್‌ ಪಾಕಿಸ್ಥಾನ ವಿರುದ್ಧದ ಮಹತ್ವದ ವಿಶ್ವಕಪ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ‌ ಓಲ್ಡ್‌ ಟ್ರಾಫ‌ರ್ಡ್‌ನಲ್ಲಿರುವ ಮ್ಯಾಂಚೆಸ್ಟರ್‌ ಯುನೈಟೆಡ್‌ ಫ‌ುಟ್‌ಬಾಲ್‌ ತಂಡದ ತವರು ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಈ ಕ್ರೀಡಾಂಗಣವನ್ನು “ಥೀಯೆಟರ್‌ ಆಫ್ ಡ್ರೀಮ್ಸ್‌’ ಎಂದೂ ಕರೆಯುತ್ತಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಪ್ರಕಟಿಸಿದೆ.

ಈ ಕೂಟದ ವೇಳೆ ನಾಯಕ ವಿರಾಟ್‌ ಕೊಹ್ಲಿ ಸಹಿತ ಭಾರತದ ಕ್ರಿಕೆಟಿಗರು ಕೆಲವು ಇಂಗ್ಲೆಂಡ್‌ ಫ‌ುಟ್‌ಬಾಲಿಗರನ್ನೂ ಭೇಟಿಯಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ