ಇದು ಇಂಗ್ಲೆಂಡ್ ತಂಡವಲ್ಲ, ರೆಸ್ಟ್ ಆಫ್ ದ ವರ್ಲ್ಡ್: ಗಾವಸ್ಕರ್ ಜೋಕ್
Team Udayavani, Jun 4, 2019, 6:00 AM IST
ಲಂಡನ್: ಈಗ ವಿಶ್ವಕಪ್ನಲ್ಲಿ ಆಡುತ್ತಿರುವುದು ಇಂಗ್ಲೆಂಡ್ ತಂಡವಲ್ಲ, ಅದು ರೆಸ್ಟ್ ಆಫ್ ದ ವರ್ಲ್ಡ್ ಟೀಮ್ (ಶೇಷ ವಿಶ್ವ ತಂಡ) ಎಂಬುದಾಗಿ ಸುನೀಲ್ ಗಾವಸ್ಕರ್ ಜೋಕ್ ಮಾಡಿದ್ದಾರೆ.
ಕಾರಣ, ಈ ತಂಡದಲ್ಲಿ ಆಡುತ್ತಿರುವವರಲ್ಲಿ ಇಂಗ್ಲೆಂಡ್ನಲ್ಲಿ ಜನಿಸಿದವರ ಸಂಖ್ಯೆ ವಿರಳವಾಗಿರುವುದು. ಇಂಗ್ಲೆಂಡನ್ನು ಮೊದಲ ಬಾರಿಗೆ ಸತತ 2 ವಿಶ್ವಕಪ್ಗ್ಳಲ್ಲಿ ಮುನ್ನಡೆಸುತ್ತಿರುವ ಇಯಾನ್ ಮಾರ್ಗನ್ ಐರ್ಲೆಂಡ್ ಮೂಲದವರು. ಘಾತಕ ವೇಗಿ ಜೋಫ ಆರ್ಚರ್ ವೆಸ್ಟ್ ಇಂಡೀಸ್ ಕ್ರಿಕೆಟಿಗ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಜನಿಸಿದ್ದು ನ್ಯೂಜಿಲ್ಯಾಂಡಿನಲ್ಲಾದರೆ, ಆರಂಭಕಾರ ಜಾಸನ್ ರಾಯ್ ಮೂಲತಃ ದಕ್ಷಿಣ ಆಫ್ರಿಕಾ ಆಟಗಾರ.
ಇದನ್ನು ಉಲ್ಲೇಖೀಸಿ ತಮಾಷೆ ಮಾಡಿದ ಗಾವಸ್ಕರ್, ಈ ರೆಸ್ಟ್ ಆಫ್ ದ ವರ್ಲ್ಡ್ ಟೀಮ್ ಜು. 14ರ ಲಾರ್ಡ್ಸ್ ಫೈನಲ್ನಲ್ಲಿ ಭಾರತವನ್ನು ಎದುರಿಸುವ ಸಾಧ್ಯತೆ ಇದೆ ಎಂದಿದ್ದಾರೆ.