ಜಾಸನ್‌ ರಾಯ್‌ ವಾಗ್ವಾದ:ದಂಡ

Team Udayavani, Jul 13, 2019, 5:49 AM IST

ಲಂಡನ್‌: ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ ಪಂದ್ಯದ ವೇಳೆ ಮೈದಾನದ ಅಂಪಾಯರ್‌ಗಳೊಂದಿಗೆ ವಾಗ್ವಾದ ನಡೆಸಿದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜಾಸನ್‌ ರಾಯ್‌ಗೆ ಐಸಿಸಿ ದಂಡ ವಿಧಿಸಿದೆ.

ಪಂದ್ಯದ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್‌ ನಡೆಸಿದ ರಾಯ್‌ 65 ಎಸೆತಗಳಲ್ಲಿ 5 ಸಿಕ್ಸರ್‌, 9 ಬೌಂಡರಿ ನೆರವಿನಿಂದ 85 ರನ್‌ ಸಿಡಿಸಿದರು. ಆದರೆ ಈ ಹಂತದಲ್ಲಿ ಪ್ಯಾಟ್‌ ಕಮಿನ್ಸ್‌ ಎಸೆದ 20ನೇ ಓವರ್‌ನಲ್ಲಿ ಅಂಪಾಯರ್‌ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ನಾಲ್ಕನೇ ಎಸೆತವನ್ನು ಹುಕ್‌ ಮಾಡಲು ರಾಯ್‌ ಯತ್ನಿಸಿದಾಗ ಚೆಂಡು ವಿಕೆಟ್‌ ಕೀಪರ್‌ ಕೈ ಸೇರಿತ್ತು. ಈ ವೇಳೆ ಆಸೀಸ್‌ ಆಟಗಾರರು ಔಟ್‌ಗೆ ಮನವಿ ಸಲ್ಲಿಸಿದರು. ಅಂಪಾಯರ್‌ ಔಟ್‌ ಎಂದು ತೀರ್ಪು ನೀಡಿದ್ದರು. ಆದರೆ ಈ ವೇಳೆ ಇಂಗ್ಲೆಂಡ್‌ ತಂಡ ತನ್ನ ಎಲ್ಲ ರಿವ್ಯೂಗಳನ್ನು ಪಡೆದಿತ್ತು. ಟಿವಿ ರಿಪ್ಲೇನಲ್ಲಿ ಚೆಂಡು ಬ್ಯಾಟ್‌ಗೆ ತಾಗದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಕ್ಕಾಗಿ ಅಂಪಾಯರ್‌ಗಳ ಜತೆ ವಾಗ್ವಾದ ನಡೆಸಿದ ರಾಯ್‌ ಅವರಿಗೆ ಐಸಿಸಿ ನಿಯದ ಪ್ರಕಾರ ಪಂದ್ಯದ ಸಂಭಾವನೆಯ ಶೇ. 30ರಷ್ಟು ದಂಡ ವಿಧಿಸಲಾಗಿದೆ.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ