ಕ್ರೇಜ್‌ ಹುಟ್ಟಿಸಿದ ಕಪಿಲ್‌ , ಜೋಶ್‌ ಹಬ್ಬಿಸಿದ ಧೋನಿ

ಇವರಿಬ್ಬರ ಸಾಹಸ ಕೊಹ್ಲಿ ತಂಡಕ್ಕೂ ಸ್ಫೂರ್ತಿಯಾಗಲಿ...

Team Udayavani, May 30, 2019, 6:00 AM IST

x-9

ಯಾವಾಗ ಕಪಿಲ್‌ದೇವ್‌ ಪಡೆ ವೆಸ್ಟ್‌ ಇಂಡೀಸಿನ ಸೊಕ್ಕಡಗಿಸಿ ವಿಶ್ವಕಪ್‌ ಗೆದ್ದಿತೋ, ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಪಲ್ಲಟವೊಂದು ಸಂಭವಿಸಿತು. ಅಲ್ಲಿಯ ತನಕ ಬರೀ ಟೆಸ್ಟ್‌ ಪಂದ್ಯಗಳತ್ತ ಆಸಕ್ತಿ ವಹಿಸುತ್ತಿದ್ದ ದೇಶದ ಕ್ರಿಕೆಟ್‌ ಪ್ರೇಮಿಗಳಲ್ಲಿ ಹೊಸತೊಂದು ಸಂಚಲನ ಮೂಡಿತು. ಸೀಮಿತ ಓವರ್‌ಗಳ ಕ್ರಿಕೆಟ್‌ ಕ್ರೇಜ್‌ ದೊಡ್ಡ ಮಟ್ಟದಲ್ಲಿ ಹಬ್ಬತೊಡಗಿತು. ಎಷ್ಟರ ಮಟ್ಟಿಗೆಂದರೆ, ಪ್ರತೀ ವಿಶ್ವಕಪ್‌ ಆಗಮಿಸಿದಾಗಲೂ ಭಾರತವೇ ಚಾಂಪಿಯನ್‌ ಆಗಲಿದೆ ಎಂದು ವಿಪರೀತ ನಂಬಿಕೆ ಇರುವಷ್ಟು!

* ಭಾರತದ ಮೇಲೆ ನಿರೀಕ್ಷೆಯ ಭಾರ
ಹೌದು, ಕಪಿಲ್‌ ಮೂಡಿಸಿದ ಕ್ರಿಕೆಟ್‌ ಕ್ರೇಜ್‌ ದೊಡ್ಡ ಮಟ್ಟದಲ್ಲೇ ಹಬ್ಬಿತ್ತು. ಭಾರತದಲ್ಲಿ ಟೆಸ್ಟ್‌ ಜತೆಗೆ ಏಕದಿನ ಸರಣಿಗೆ ಹೆಚ್ಚಿನ ಪ್ರಾಶಸ್ತ್ಯ ಲಭಿಸಿತು. ಯುವ ಜನತೆ ಭಾರೀ ಮಟ್ಟದಲ್ಲಿ ಈ ಪಂದ್ಯಗಳಿಗೆ ಮುಗಿಬೀಳತೊಡಗಿತು. ಪ್ರತಿಯೊಂದು ವರ್ಲ್ಡ್ಕಪ್‌ ಬಂಗಾದಲೂ ಭಾರತದ ನಿರೀಕ್ಷೆಗಳು ಗರಿಗೆದರುತ್ತಿದ್ದವು. ಆದರೆ ಭಾರತ ಮತ್ತೂಮ್ಮೆ ವಿಶ್ವಕಪ್‌ ಎತ್ತುವುದನ್ನು ಕಣ್ತುಂಬಿಸಿಕೊಳ್ಳಲು 2011ರ ತನಕ ಕಾಯಬೇಕಾಯಿತು. ಅಂದು ಧೋನಿ ಪಡೆ ಮೋಡಿಗೈಯುವ ಮೂಲಕ ದೇಶದ ಅಪಾರ ಕ್ರಿಕೆಟ್‌ ಅಭಿಮಾನಿಗಳ ಕನಸನ್ನು ನನಸಾಗಿಸಿತು.

* 28 ವರ್ಷ ಕಾಯಬೇಕಾಯಿತು
1983ರಿಂದ 2011-ಈ 28 ವರ್ಷಗಳ ಅವಧಿಯ ವಿಶ್ವಕಪ್‌ ಕೂಟಗಳಲ್ಲಿ ಭಾರತದ ಕ್ರಿಕೆಟ್‌ ಪ್ರೇಮಿಗಳ ನಿರೀಕ್ಷೆಗೆ, ಕಾತರಕ್ಕೆ ಮಿತಿ ಇರಲಿಲ್ಲ. ಎರಡು ಸಲ ಭಾರತದ ಆತಿಥ್ಯದಲ್ಲೇ ಕೂಟ ನಡೆದಾಗಲೂ ಕಪ್‌ ಮರೀಚಿಕೆಯೇ ಆಗಿ ಉಳಿಯಿತು. 2003ರಲ್ಲಿ ಸೌರವ್‌ ಗಂಗೂಲಿ ಪಡೆಗೆ ಅದ್ಭುತವೊಂದನ್ನು ಸಾಧಿಸುವ ಅವಕಾಶ ಬಾಗಿಲಿಗೆ ಬಂದಿತ್ತು. ಆದರೆ ನಸೀಬು ಕೈಕೊಟ್ಟಿತು. ಆದರೆ 2011 ಅದೃಷ್ಟ ತಂದಿತ್ತಿತು. ಧೋನಿ ಟೀಮ್‌ ವಿಶ್ವ ಸಾಮ್ರಾಟನಾಗಿ ಮೆರೆಯಿತು.

* ಬಲಿಷ್ಠ ತಂಡಗಳ ಸಾಹಸಗಾಥೆ
ವಿಶ್ವಕಪ್‌ ಗೆದ್ದ ಭಾರತದ ಈ ಎರಡೂ ತಂಡಗಳು ಅತ್ಯಂತ ಬಲಿಷ್ಠವಾಗಿದ್ದವು. 1983ರಲ್ಲಿ ದಾಖಲಾದದ್ದು ಅಚ್ಚರಿಯ ಫ‌ಲಿತಾಂಶವಾದರೂ ಟ್ರೋಫಿ ಎತ್ತಲು ಭಾರತ ಅರ್ಹವಾಗಿಯೇ ಇತ್ತು. ಅಮೋಘ ಆಲ್‌ರೌಂಡ್‌ ಪ್ರದರ್ಶನ, ಕಪಿಲ್‌ ಅವರ ದಿಟ್ಟ ನಾಯಕತ್ವ, ಇಂಗ್ಲೆಂಡ್‌ ಟ್ರ್ಯಾಕ್‌ಗಳ ಭರ್ಜರಿ ಲಾಭ ಭಾರತವನ್ನು ಬಹಳ ಎತ್ತರಕ್ಕೆ ಏರಿಸಿತು. 2003ರಲ್ಲಿ ಭಾರತದ ಬ್ಯಾಟಿಂಗ್‌ ಸರದಿ ಬಲಿಷ್ಠವಾಗಿದ್ದರೂ ಬೌಲಿಂಗ್‌ ವಿಭಾಗ ನಿರೀಕ್ಷೆಯಷ್ಟು ಘಾತಕವಾಗಿರಲಿಲ್ಲ. ಗಂಗೂಲಿ ಫೈನಲ್‌ ತನಕ ತಂಡವನ್ನು ಮುನ್ನಡೆಸಿದರೂ ಕಪ್‌ ಎಟುಕಲಿಲ್ಲ.

2011ರ ಧೋನಿ ಪಡೆ ಭಾರತೀಯ ಕ್ರಿಕೆಟಿನ ಸುವರ್ಣ ಯುಗಕ್ಕೆ ಸಾಕ್ಷಿಯಾಯಿತು. ತೆಂಡುಲ್ಕರ್‌ಗೆ ಕಪ್‌ ಅರ್ಪಿಸುವಲ್ಲಿ ಎಲ್ಲರೂ ಟೊಂಕ ಕಟ್ಟಿ ನಿಂತರು. ಈ ಇಬ್ಬರು ಕಪ್ತಾನರ ಸಾಹಸಗಾಥೆ ಈಗಿನ ಕೊಹ್ಲಿ ಪಡೆಗೆ ಸ್ಫೂರ್ತಿಯಾಗಬೇಕಿದೆ. ತಂಡದಲ್ಲೇ ಇರುವ ಧೋನಿ ಹೆಚ್ಚಿನ ಸ್ಫೂರ್ತಿ ತುಂಬಬಲ್ಲರು!

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.