ಸ್ಮಿತ್, ವಾರ್ನರ್ ಯಶಸ್ಸು ಕಾಣಲಿದ್ದಾರೆ: ಲ್ಯಾಂಗರ್
Team Udayavani, May 20, 2019, 10:39 AM IST
ಲಂಡನ್: ನಿಷೇಧದಿಂದ ಮುಕ್ತರಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಈ ಬಾರಿಯ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಆಸ್ಟ್ರೇಲಿಯ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯ ಪಟ್ಟಿದ್ದಾರೆ.
ಸ್ಮಿತ್ ಮತ್ತು ವಾರ್ನರ್ ಕಳೆದ ವರ್ಷ ದಕ್ಷಿಣ ಆಫ್ರಿಕಾದ ವಿರುದ್ಧದ ಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿಒಂದು ವರ್ಷ ನಿಷೇಧ ಅನುಭವಿಸಿದ್ದರು. ಇವರಿಬ್ಬರೂ ಈಗ ತಂಡಕ್ಕೆ ವಾಪಾಸಾ ಗಿದ್ದಾರೆ. ಆದರೆ ಇಬ್ಬರೂ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳಿಂದ ಟೀಕೆ ಗೊಳಗಾಗುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕೋಚ್ ಲ್ಯಾಂಗರ್, “ಸ್ಮಿತ್ ಮತ್ತು ವಾರ್ನರ್ ಕೂಡ ಮನುಷ್ಯರು. ಅವರನ್ನು ಪ್ರಾಣಿಗಳ ಹಾಗೆ ಟೀಕಿಸುವುದು ತಪ್ಪು. ತಮ್ಮ ತಪ್ಪಿನ ಬಗ್ಗೆ ಈಗಾಗಲೇ ಅವರು ಪಶ್ಚಾತ್ತಾಪ ಪಟ್ಟಿದ್ದಾರೆ. ಇದನ್ನು ಮತ್ತೆ ಮತ್ತೆ ಕೆಣಕುವುದು ಸರಿಯಲ್ಲ’ ಎಂದರು.
ಐಪಿಎಲ್ನಲ್ಲಿ ವಾರ್ನರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ವಿಶ್ವಕಪ್ನಲ್ಲೂ ಅವರ ಬ್ಯಾಟಿಂಗ್ ಅಬ್ಬರ ಮುಂದು ವರಿಯಲಿದೆ ಎಂಬುದು ಲ್ಯಾಂಗರ್ ಅಭಿಪ್ರಾಯ.