ಧೋನಿ-ಸರ್ಫಾರಾಜ್ : ಯಾರು ಶ್ರೇಷ್ಠರು?
Team Udayavani, Jun 29, 2019, 10:00 AM IST
ಬರ್ಮಿಂಗ್ಹ್ಯಾಮ್: ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ವಿಕೆಟ್ ಹಿಂದೆ ಕಾರ್ಲೋಸ್ ಬ್ರಾತ್ವೇಟ್ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. ಇದು ಪಂದ್ಯದ ಪ್ರಮುಖ
ಆಕರ್ಷಣೆಯಲ್ಲಿ ಒಂದಾಗಿತ್ತು. ಇದರ ಚಿತ್ರವನ್ನು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ.
ಜತೆಗೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿ ಸ್ಥಾನದ ವಿಕೆಟ್ ಕೀಪರ್ ಸರ್ಫಾರಾಜ್ ಅಹ್ಮದ್ ಕೂಡ ಇದೇ ರೀತಿಯಲ್ಲಿ ಕ್ಯಾಚ್ ಪಡೆಯುತ್ತಿರುವ ಫೋಟೊವನ್ನೂ ಪ್ರಕಟಿಸಿದೆ. “ಈ ಇಬ್ಬರಲ್ಲಿ ನಿಮಗೆ ಯಾರು ಶ್ರೇಷ್ಠ ಕೀಪರ್ ಎನ್ನುವುದನ್ನು ತಿಳಿಸಿ’ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಕೇಳಿದೆ. ಸಾವಿರಾರು ಜನ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನವರು ಧೋನಿಯೇ ಶ್ರೇಷ್ಠ ವಿಕೆಟ್ ಕೀಪರ್ ಎಂದಿದ್ದಾರೆ.