ಭಾರತೀಯ ಮೂಲದ ನೆಟ್ ಬೌಲರ್ಗೆ ಚೆಂಡಿನೇಟು
Team Udayavani, Jun 9, 2019, 6:00 AM IST
ಲಂಡನ್: ಆಸ್ಟ್ರೇಲಿಯದ ಕ್ರಿಕೆಟಿಗರಿಗೆ ಅಭ್ಯಾಸದ ವೇಳೆ ಬೌಲಿಂಗ್ ನಡೆಸುತ್ತಿದ್ದ ಭಾರತೀಯ ಮೂಲದ ವೇಗದ ಬೌಲರ್ ಒಬ್ಬರು ಚೆಂಡು ಬಡಿದು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.
ಇಂಗ್ಲೆಂಡಿನ ಈ ನೆಟ್ ಬೌಲರ್ ಮೂಲತಃ ಭಾರತದವರಾಗಿದ್ದಾರೆ. ಹೆಸರು ಜೈ ಕಿಶನ್. ಅವರು ಓವಲ್ನಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ನಡೆಸುತ್ತಿದ್ದರು. ಡೇವಿಡ್ ವಾರ್ನರ್ ಬಾರಿಸಿದ ಬಲವಾದ ಹೊಡೆತವೊಂದನ್ನು ತಡೆಯುವಾಗ ಚೆಂಡು ಜೈ ಕಿಶನ್ ಅವರ ತಲೆಗೆ ಬಡಿಯಿತು. ಕೂಡಲೇ ಕುಸಿದು ಬಿದ್ದ ಅವರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ಬಳಿಕ ಆಸ್ಟ್ರೇಲಿಯ ತನ್ನ ನೆಟ್ ಪ್ರ್ಯಾಕ್ಟೀಸ್ ಮುಂದುವರಿಸಿತಾದರೂ ಡೇವಿಡ್ ವಾರ್ನರ್ ಇದರಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಐಸಿಸಿ ವೆನ್ಯೂ ಮ್ಯಾನೇಜರ್ ಮೈಕಲ್ ಗಿಬ್ಸನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ