ನ್ಯೂಜಿಲ್ಯಾಂಡ್‌ ಗೆಲುವಿನ ಹ್ಯಾಟ್ರಿಕ್‌: ಅಫ್ಘಾನ್‌ಗೆ 3ನೇ ಆಘಾತ


Team Udayavani, Jun 10, 2019, 6:00 AM IST

AP6_8_2019_000193B

ಟೌಂಟನ್‌: ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲ್ಯಾಂಡ್‌ ಪ್ರಸಕ್ತ ವಿಶ್ವಕಪ್‌ನಲ್ಲಿ ಸತತ 3ನೇ ಗೆಲುವು ಸಾಧಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶನಿವಾರದ ಡೇ-ನೈಟ್ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನವನ್ನು 7 ವಿಕೆಟ್‌ಗಳಿಂದ ಕೆಡವಿ ಈ ಸಾಧನೆಗೈದಿತು.

ಇನ್ನೊಂದೆಡೆ ಅಫ್ಘಾನಿಸ್ಥಾನ ಆಡಿದ ಮೂರೂ ಪಂದ್ಯಗಳನ್ನು ಸೋತ 2ನೇ ತಂಡವೆನಿಸಿತು. ಬಲಿಷ್ಠ ದಕ್ಷಿಣ ಆಫ್ರಿಕಾ ಕೂಡ ಇದೇ ಸಂಕಟಕ್ಕೆ ಸಿಲುಕಿದೆ.

ಟೌಂಟನ್‌ ಪಂದ್ಯದಲ್ಲಿ ಜಿಮ್ಮಿ ನೀಶಮ್‌ ಮತ್ತು ಲಾಕಿ ಫ‌ರ್ಗ್ಯುಸನ್‌ ದಾಳಿಗೆ ತತ್ತರಿಸಿದ ಅಫ್ಘಾನಿಸ್ಥಾನ 41.1 ಓವರ್‌ಗಳಲ್ಲಿ 172ಕ್ಕೆ ಆಲೌಟ್ ಆದರೆ, ನ್ಯೂಜಿಲ್ಯಾಂಡ್‌ 32.1 ಓವರ್‌ಗಳಲ್ಲಿ 3 ವಿಕೆಟಿಗೆ 173 ರನ್‌ ಬಾರಿಸಿ ಸಂಭ್ರಮಿಸಿತು.

ಕಿವೀಸ್‌ ಚೇಸಿಂಗ್‌ ವೇಳೆ ಗಪ್ಟಿಲ್ ಖಾತೆ ತೆರೆಯುವ ಮೊದಲೇ ನಿರ್ಗ ಮಿಸಿದರೂ ಮುನ್ರೊ, ವಿಲಿಯಮ್ಸನ್‌, ಟೇಲರ್‌ ಸೇರಿಕೊಂಡು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ನಾಯಕ ವಿಲಿಯಮ್ಸನ್‌ ಅಜೇಯ 79 ರನ್‌ ಬಾರಿಸಿದರೆ (99 ಎಸೆತ, 9 ಬೌಂಡರಿ), ಟೇಲರ್‌ 52 ಎಸೆತ ಎದುರಿಸಿ 48 ರನ್‌ ಹೊಡೆದರು (6 ಬೌಂಡರಿ, 1 ಸಿಕ್ಸರ್‌).

ಅಫ್ಘಾನ್‌ ಸರದಿಯಲ್ಲಿ ಏಕೈಕ ಅರ್ಧ ಶತಕ ಹಶ್ಮತುಲ್ಲ ಶಾಹಿದಿ ಅವರಿಂದ ದಾಖಲಾಯಿತು (59). 31ಕ್ಕೆ 5 ವಿಕೆಟ್ ಕಿತ್ತ ನೀಶಮ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಕೋರ್‌ ಪಟ್ಟಿ
ಅಫ್ಘಾನಿಸ್ಥಾನ
ಹಜ್ರತುಲ್ಲ ಜಜಾಯ್‌ ಸಿ ಮುನ್ರೊ ಬಿ ನೀಶಮ್‌ 34
ನೂರ್‌ ಅಲಿ ಜದ್ರಾನ್‌ ಸಿ ಲ್ಯಾಥಂ ಬಿ ಫ‌ರ್ಗ್ಯುಸನ್‌ 31
ರಹಮತ್‌ ಶಾ ಸಿ ಗಪ್ಟಿಲ್‌ ಬಿ ನೀಶಮ್‌ 0
ಹಶ್ಮತುಲ್ಲ ಶಾಹಿದಿ ಸಿ ಹೆನ್ರಿ ಬಿ ಫ‌ರ್ಗ್ಯುಸನ್‌ 59
ಗುಲ್ಬದಿನ್‌ ನೈಬ್‌ ಸಿ ಲ್ಯಾಥಂ ಬಿ ನೀಶಮ್‌ 4
ಮೊಹಮ್ಮದ್‌ ನಬಿ ಸಿ ಲ್ಯಾಥಂ ಬಿ ನೀಶಮ್‌ 9
ನಜೀಬುಲ್ಲ ಜದ್ರಾನ್‌ ಸಿ ಲ್ಯಾಥಂ ಬಿ ನೀಶಮ್‌ 4
ಇಕ್ರಮ್‌ ಅಲಿ ಖೀಲ್‌ ಸಿ ಗಪ್ಟಿಲ್‌ ಬಿ ಗ್ರ್ಯಾಂಡ್‌ಹೋಮ್‌ 2
ರಶೀದ್‌ ಖಾನ್‌ ಬಿ ಫ‌ರ್ಗ್ಯುಸನ್‌ 0
ಅಫ್ತಾಬ್‌ ಆಲಂ ಸಿ ಲ್ಯಾಥಂ ಬಿ ಫ‌ರ್ಗ್ಯುಸನ್‌ 14
ಹಮೀದ್‌ ಹಸನ್‌ ಔಟಾಗದೆ 7
ಇತರ 8
ಒಟ್ಟು (41.1 ಓವರ್‌ಗಳಲ್ಲಿ ಆಲೌಟ್‌) 172
ವಿಕೆಟ್‌ ಪತನ: 1-66, 2-66, 3-66, 4-70, 5-105, 6-109, 7-130, 8-131, 9-147.
ಬೌಲಿಂಗ್‌:
ಮ್ಯಾಟ್‌ ಹೆನ್ರಿ 8-0-50-0
ಟ್ರೆಂಟ್‌ ಬೌಲ್ಟ್ 10-0-34-0
ಲಾಕಿ ಫ‌ರ್ಗ್ಯುಸನ್‌ 9.1-3-37-4
ಜೇಮ್ಸ್‌ ನೀಶಮ್‌ 10-1-31-5
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 4-1-14-1
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಸಿ ನಜೀಬುಲ್ಲ ಬಿ ಅಫ್ತಾಬ್‌ 0
ಕಾಲಿನ್‌ ಮುನ್ರೊ ಸಿ ಹಮೀದ್‌ ಬಿ ಅಫ್ತಾಬ್‌ 22
ಕೇನ್‌ ವಿಲಿಯಮ್ಸನ್‌ ಔಟಾಗದೆ 79
ರಾಸ್‌ ಟೇಲರ್‌ ಬಿ ಅಫ್ತಾಬ್‌ 48
ಟಾಮ್‌ ಲ್ಯಾಥಂ ಔಟಾಗದೆ 13
ಇತರ 11
ಒಟ್ಟು (32.1 ಓವರ್‌ಗಳಲ್ಲಿ 3 ವಿಕೆಟಿಗೆ) 173
ವಿಕೆಟ್‌ ಪತನ: 1-0, 2-41, 3-130.
ಬೌಲಿಂಗ್‌:
ಅಫ್ತಾಬ್‌ ಆಲಂ 8.1-0-45-3
ಹಮೀದ್‌ ಹಸನ್‌ 7-0-30-0
ಗುಲ್ಬದಿನ್‌ ನೈಬ್‌ 9-1-55-0
ಮೊಹಮ್ಮದ್‌ ನಬಿ 3-0-18-0
ರಶೀದ್‌ ಖಾನ್‌ 5-0-21-0
ಪಂದ್ಯಶ್ರೇಷ್ಠ: ಜೇಮ್ಸ್‌ ನೀಶಮ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.