ಗೆಲುವಿನ ಗಡಿಯಲ್ಲಿ ಎಡವಿದ ಬ್ರಾತ್‌ವೇಟ್‌

ವಿಂಡೀಸ್‌ ವಿರುದ್ಧ ಕಿವೀಸ್‌ಗೆ 5 ರನ್‌ ಜಯ ; ಶತಕವೀರ ಬ್ರಾತ್‌ವೇಟ್‌ಗೆ "ಹಾರ್ಟ್‌ ಬ್ರೇಕ್‌'

Team Udayavani, Jun 24, 2019, 5:06 AM IST

ಮ್ಯಾಂಚೆಸ್ಟರ್‌: ಇನ್ನೇನು ಬಿಗ್‌ ಹಿಟ್ಟರ್‌ ಕಾರ್ಲೋಸ್‌ ಬ್ರಾತ್‌ವೇಟ್‌ “ಬಿಗ್‌ ಸಿಕ್ಸರ್‌’ ಮೂಲಕ ವೆಸ್ಟ್‌ ಇಂಡೀಸಿನ ಗೆಲುವನ್ನು ಸಾರಿದರೆನ್ನುವಾಗಲೇ ಲಾಂಗ್‌-ಆನ್‌ನಲ್ಲಿದ್ದ ಟ್ರೆಂಟ್‌ ಬೌಲ್ಟ್ ಅಮೋಘ ಕ್ಯಾಚ್‌ ಮೂಲಕ ಈ ಜಯವನ್ನು ನ್ಯೂಜಿಲ್ಯಾಂಡ್‌ ಮಡಿಲಿಗೆ ತಂದೊಪ್ಪಿಸಿದರು! ಈ ರೀತಿಯಾಗಿ ಶನಿವಾರ ರಾತ್ರಿ ಮ್ಯಾಂಚೆಸ್ಟರ್‌ನಲ್ಲಿ ಸಾಗಿದ ಕಿವೀಸ್‌-ವಿಂಡೀಸ್‌ ವಿಶ್ವಕಪ್‌ ಕಾಳಗ ಬ್ರಾತ್‌ವೇಟ್‌ ಮತ್ತು ವಿಂಡೀಸಿಗೆ “ಹಾರ್ಟ್‌ ಬ್ರೇಕ್‌’ ಆಗುವ ಮೂಲಕ ಕೊನೆಗೊಂಡಿತು.

ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 291 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ 49 ಓವರ್‌ಗಳಲ್ಲಿ 286ಕ್ಕೆ ಆಲೌಟ್‌ ಆಯಿತು. ಗೆಲುವು-ಸೋಲಿನ ಅಂತರ ಕೇವಲ 5 ರನ್‌.

ಬ್ರಾತ್‌ವೇಟ್‌ ಬೊಂಬಾಟ್‌ ಆಟ
ನ್ಯೂಜಿಲ್ಯಾಂಡಿನಂತೆ ವೆಸ್ಟ್‌ ಇಂಡೀಸ್‌ ಆರಂಭವೂ ಕಳಪೆಯಾಗಿತ್ತು. ಆದರೆ ಗೇಲ್‌ (87) ಮತ್ತು ಹೆಟ್‌ಮೈರ್‌ (54) ಸೇರಿಕೊಂಡು ಹೋರಾಟ ಜಾರಿಯಲ್ಲಿರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ವಿಂಡೀಸ್‌ ಎಂದಿನ ಕುಸಿತಕ್ಕೆ ಸಿಲುಕಿತು. 164ಕ್ಕೆ 7 ವಿಕೆಟ್‌ ಉರುಳಿತು. ಆದರೆ ಬ್ರಾತ್‌ವೇಟ್‌ ಪಟ್ಟು ಸಡಿಲಿಸಲಿಲ್ಲ. ರೋಚ್‌ ಮತ್ತು ಕಾಟ್ರೆಲ್‌ ಅವರನ್ನು ಇನ್ನೊಂದು ತುದಿಯಲ್ಲಿ ನಿಲ್ಲಿಸಿ ಸಿಡಿಯತೊಡಗಿದರು. ರನ್‌ ಪ್ರವಾಹದ ರೀತಿಯಲ್ಲಿ ಹರಿದು ಬಂತು. ವಿಂಡೀಸ್‌ ಗೆಲುವಿನತ್ತ ದೌಡಾಯಿಸತೊಡಗಿತು.
ಆದರೆ ಜಿಮ್ಮಿ ನೀಶಮ್‌ ಎಸೆದ 49ನೇ ಓವರ್‌ನ ಅಂತಿಮ ಎಸೆತ ಪಂದ್ಯಕ್ಕೆ “ಯೂ ಟರ್ನ್’ ಕೊಟ್ಟಿತು. ಆಗಷ್ಟೇ ಶತಕ ಪೂರೈಸಿದ್ದ ಬ್ರಾತ್‌ವೇಟ್‌ ಅವರ ಸಂಭ್ರಮ ಕೆಲವೇ ಕ್ಷಣಗಳಲ್ಲಿ ನೆಲಸಮ ವಾಯಿತು. ಮೈದಾನ ದಲ್ಲಿ ಹತಾಶರಾಗಿ ಕುಳಿತ ಬ್ರಾತ್‌ವೇಟ್‌ ಅವರನ್ನು ಕಿವೀಸ್‌ ಆಟಗಾರರು ಸಮಾಧಾನ ಪಡಿಸಿದ ದೃಶ್ಯ ಕ್ರಿಕೆಟಿನ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
82 ಎಸೆತ ಎದುರಿಸಿದ ಬ್ರಾತ್‌ವೇಟ್‌ 9 ಬೌಂಡರಿ, 5 ಸಿಕ್ಸರ್‌ ನೆರವಿನಿಂದ 101 ರನ್‌ ಬಾರಿಸಿದರು.

ಸ್ಕೋರ್‌ ಪಟ್ಟಿ
ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 291
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌ ಸಿ ಬೌಲ್ಟ್ ಬಿ ಗ್ರ್ಯಾಂಡ್‌ಗೊàಮ್‌ 87
ಶೈ ಹೋಪ್‌ ಬಿ ಬೌಲ್ಟ್ 1
ನಿಕೋಲಸ್‌ ಪೂರನ್‌ ಸಿ ಲ್ಯಾಥಮ್‌ ಬಿ ಬೌಲ್ಟ್ 1
ಶಿಮ್ರನ್‌ ಹೆಟ್‌ಮೈರ್‌ ಬಿ ಫ‌ರ್ಗ್ಯುಸನ್‌ 54
ಜಾಸನ್‌ ಹೋಲ್ಡರ್‌ ಸಿ ಲ್ಯಾಥಮ್‌ ಬಿ ಫ‌ರ್ಗ್ಯುಸನ್‌ 0
ಬ್ರಾತ್‌ವೇಟ್‌ ಸಿ ಬೌಲ್ಟ್ ಬಿ ನೀಶಮ್‌ 101
ಆ್ಯಶೆÉ ನರ್ಸ್‌ ಸಿ ಲ್ಯಾಥಮ್‌ ಬಿ ಬೌಲ್ಟ್ 1
ಎವಿನ್‌ ಲೆವಿಸ್‌ ಸಿ ನೀಶಮ್‌ ಬಿ ಬೌಲ್ಟ್ 0
ಕೆಮರ್‌ ರೋಚ್‌ ಸಿ ಲ್ಯಾಥಮ್‌ ಬಿ ಹೆನ್ರಿ 14
ಶೆಲ್ಡನ್‌ ಕಾಟ್ರೆಲ್‌ ಬಿ ಫ‌ರ್ಗ್ಯುಸನ್‌ 15
ಓಶೇನ್‌ ಥಾಮಸ್‌ ಔಟಾಗದೆ 0
ಇತರ 12
ಒಟ್ಟು (49 ಓವರ್‌ಗಳಲ್ಲಿ ಆಲೌಟ್‌) 286
ವಿಕೆಟ್‌ ಪತನ: 3-1, 2-20, 3-142, 4-142, 5-152, 6-163, 7-164, 8-211, 9-245.
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 10-1-30-4
ಮ್ಯಾಟ್‌ ಹೆನ್ರಿ 9-0-76-1
ಲ್ಯಾಕಿ ಫ‌ರ್ಗ್ಯುಸನ್‌ 10-0-59-3
ಜೇಮ್ಮಿ ನೀಶಮ್‌ 6-0-35-1
ಮಿಚೆಲ್‌ ಸ್ಯಾಂಟ್ನರ್‌ 10-1-61-0
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 4-0-22-1

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ