ಆಡದೇ ದಾಖಲೆ ನಿರ್ಮಿಸಿದ ವಾಲ್ಸನ್‌!

Team Udayavani, May 19, 2019, 6:13 AM IST

ಭಾರತದ ವಿಶ್ವಕಪ್‌ ವಿಜೇತ ಪಡೆಯ ಎಲ್ಲ ಸದಸ್ಯರೂ ಅದೃಷ್ಟ ವಂತರು, ಸುನೀಲ್‌ ವಾಲ್ಸನ್‌ ಒಬ್ಬರನ್ನು ಹೊರತುಪಡಿಸಿ!

ಈ ಕೂಟದಲ್ಲಿ ಭಾರತ ತಂಡ ದಲ್ಲಿದ್ದೂ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯದ ಏಕೈಕ ಆಟಗಾರ ನೆಂದರೆ ದಿಲ್ಲಿಯ ಎಡಗೈ ಮಧ್ಯಮ ವೇಗಿ ಸುನೀಲ್‌ ವಾಲ್ಸನ್‌.

ಇಲ್ಲಿ ಸುನೀಲ್‌ ವಾಲ್ಸನ್‌ ಅವರಿಂದ ವಿಶಿಷ್ಟ ದಾಖಲೆಯೂ ನಿರ್ಮಾಣಗೊಂಡಿದೆ. ಅವರು ಒಂದೂ ಅಂತಾರಾಷ್ಟ್ರೀಯ ಪಂದ್ಯ ವಾಡದೆ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯನೆನಿಸಿಕೊಂಡ ವಿಶ್ವದ ಏಕೈಕ ಕ್ರಿಕೆಟಿಗ!

“ಮಾಧ್ಯಮದವರು ಎದುರಾದಾಗ ನಾನು ಇದೇ ಪ್ರಶ್ನೆ ಎದು ರಿಸುತ್ತಿದ್ದೆ. ಕ್ರಿಕೆಟ್‌ ಕ್ವಿಝ್ಗೂ ನಾನು ವಸ್ತುವಾಗಿದ್ದೆ. ನಾನು ವಿಶ್ವಕಪ್‌ ಆಡದೇ ಇರಬಹುದು, ಆದರೆ ನಾನೂ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಎಂಬ ಹೆಮ್ಮೆ ಇದೆ’ ಎಂದು ವಾಲ್ಸನ್‌ ಒಮ್ಮೆ ಹೇಳಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ