ಭಾರತಕ್ಕೆ ನಮ್ಮ ಬೆಂಬಲ: ಪಾಕ್ ಅಭಿಮಾನಿಗಳ ಟ್ವೀಟ್
Team Udayavani, Jun 28, 2019, 5:21 AM IST
ಸಾಂದರ್ಭಿಕ ಚಿತ್ರ
ಮ್ಯಾಂಚೆಸ್ಟರ್: ಇಂಗ್ಲೆಂಡ್-ಪಾಕಿಸ್ಥಾನ ಪಂದ್ಯದ ವೇಳೆ ಭಾರತದ ಅಭಿಮಾನಿಗಳು ಪಾಕಿಸ್ಥಾನ ತಂಡಕ್ಕೆ ಬೆಂಬಲ ನೀಡಿದ್ದು ಸುದ್ದಿಯಾಗಿತ್ತು. ಇದೀಗ ಆತಿಥೇಯ ಇಂಗ್ಲೆಂಡ್-ಭಾರತ ನಡುವಿನ ಜೂ. 30ರ ಪಂದ್ಯದಲ್ಲಿ ಪಾಕಿಸ್ಥಾನ ಅಭಿಮಾನಿಗಳು ಭಾರತಕ್ಕೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಬರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಮಾಜಿ ಇಂಗ್ಲೆಂಡ್ ಕ್ರಿಕೆಟಿಗ, ಹಾಲಿ ಟೀವಿ ಕ್ರಿಕೆಟ್ ವಿಶ್ಲೇಷಕ ನಾಸಿರ್ ಹುಸೇನ್ ಭಾರತ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ ಎಂದು ಟ್ವಿಟರ್ನಲ್ಲಿ ಪಾಕ್ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಉತ್ತರಿಸಿರುವ ಪಾಕ್ ಅಭಿಮಾನಿಗಳು, ‘ನಿಮಗೆ ಅನುಮಾನವೇ ಬೇಡ, ಭಾರತ ಬಿಟ್ಟು ಮತ್ಯಾರಿಗೆ ಕೊಡಲು ಸಾಧ್ಯ’ ಎಂದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ಥಾನ-ಭಾರತ ಅಭಿಮಾನಿಗಳ ಭಾಂಗ್ರಾ ನೃತ್ಯ
ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಪಾಕಿಸ್ಥಾನ ತಂಡದ ಗೆಲುವನ್ನು ಪಾಕ್ ಅಭಿಮಾನಿಗಳ ಜತೆ ಭಾರತದ ಅಭಿ ಮಾನಿಗಳು ಕೂಡ ಸೇರಿಕೊಂಡು ಸಂಭ್ರ ಮಿಸಿದ್ದಾರೆ. ಕ್ರೀಡಾಂ ಗಣದ ಹೊರಗೆ ಪಾಕ್-ಭಾರತ ಅಭಿಮಾನಿಗಳಿಬ್ಬರು ಭಾಂಗ್ರಾ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ