ಬಂಗಾರ್‌ ತಲೆದಂಡ ಸಾಧ್ಯತೆ?

Team Udayavani, Jul 13, 2019, 5:14 AM IST

ಹೊಸದಿಲ್ಲಿ: ಭಾರತದ ಸೆಮಿಫೈನಲ್‌ ಸೋಲಿನ ಬೆಂಕಿ ಯಾರನ್ನು ಬೂದಿ ಮಾಡಲಿದೆ ಎಂಬುದು ಗೊತ್ತಾಗಿಲ್ಲ. ಆದರೆ ಬ್ಯಾಟಿಂಗ್‌ ತರಬೇತುದಾರ ಸಂಜಯ್‌ ಬಂಗಾರ್‌ ತಲೆದಂಡವಾಗುವ ಸಾಧ್ಯತೆಯಿದೆ.

ಸೆಮಿಫೈನಲ್‌ನಲ್ಲಿ ತಂಡ ಬ್ಯಾಟಿಂಗ್‌ ಕುಸಿತ ಅನುಭವಿಸಿಯೇ ಸೋತಿದೆ. ಇದು ಬಂಗಾರ್‌ ವೈಫ‌ಲ್ಯ ಎಂದು ಬಿಂಬಿಸಲ್ಪಡುವ ಸಾಧ್ಯತೆಯಿದೆ. ಈ ಸುಳಿವನ್ನು ಬಿಸಿಸಿಐ ಮೂಲಗಳು ನೀಡಿವೆ. ತಂಡದ ಇಬ್ಬರು ಆಟಗಾರರು ತಮ್ಮ ಬ್ಯಾಟಿಂಗ್‌ ದೋಷಗಳನ್ನು ತಿದ್ದಿಕೊಳ್ಳಲು ಕೆಲ ಹಿರಿಯ ಆಟಗಾರರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಇದೂ ಬಂಗಾರ್‌ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿಸಿದೆ.

ಅದೂ ಇಲ್ಲದೇ ಧೋನಿಯನ್ನು ತಡವಾಗಿ ಬ್ಯಾಟಿಂಗ್‌ಗೆ ಕಳುಹಿಸಿದ ನಿರ್ಧಾರ ತೆಗೆದುಕೊಂಡಿದ್ದು ಬಂಗಾರ್‌ ಎಂದೂ ಕೆಲ ಮೂಲಗಳು ಹೇಳಿವೆ. ಧೋನಿಯನ್ನು ಯಾವ ಕ್ರಮಾಂಕದಲ್ಲಿ ಕಳುಹಿಸಬೇಕು ಎಂಬ ನಿರ್ಧಾರವನ್ನು ರವಿಶಾಸ್ತ್ರಿ ಬಂಗಾರ್‌ಗೆ ಬಿಟ್ಟಿದ್ದರು. ಕಡೆಗೆ ಈ ನಿರ್ಧಾರ ತಂಡದ ಸೋಲಿನಲ್ಲಿ ಮುಖ್ಯಪಾತ್ರ ವಹಿಸಿತು ಎಂದು ಚರ್ಚೆಯಾಗುತ್ತಿದೆ. ಇವೆಲ್ಲವೂ ಬಂಗಾರ್‌ ತಲೆದಂಡದಲ್ಲಿ ಮುಗಿಯಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ