ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

Team Udayavani, Jun 6, 2019, 6:00 AM IST

ಹೊಸದಿಲ್ಲಿ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಪಾಲ್ಗೊಂಡಿರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತೀಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಸೌತಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆರಂಭವಾಗುವುದಕ್ಕೂ ಮೊದಲು ಅವರು ಟ್ವೀಟ್‌ ಮಾಡಿ ಶುಭ ಸಂದೇಶ ಕಳುಹಿಸಿದ್ದಾರೆ.

“ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಆರಂಭವಾಗುತ್ತಿದ್ದು ದೇಶವನ್ನು ಪ್ರತಿನಿಧಿಸುತ್ತಿರುವ ನಮ್ಮೆಲ್ಲ ಆಟಗಾರರಿಗೆ ಶುಭವಾಗಲಿ. ಅತ್ಯುತ್ತಮ ಕ್ರಿಕೆಟ್‌ ಹಾಗೂ ಕ್ರೀಡಾ ಸ್ಫೂರ್ತಿಗೆ ಈ ಕೂಟ ಸಾಕ್ಷಿಯಾಗಲಿದೆ ಎಂದು ನಂಬಿದ್ದೇನೆ. ಪಂದ್ಯದ ಜತೆಗೆ ಎಲ್ಲರ ಹೃದಯ ಗೆಲ್ಲಿ’ ಎಂದು ಮೋದಿ ಹಾರೈಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ