ಅಫ್ಘಾನ್‌ ತಂಡಕ್ಕೆ ರಶೀದ್‌ ನಾಯಕ

Team Udayavani, Jul 13, 2019, 5:18 AM IST

ಹೊಸದಿಲ್ಲಿ: ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಅವ ರನ್ನು ಅಫ್ಘಾನಿಸ್ಥಾನ ಕ್ರಿಕೆಟ್‌ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅವರು 3 ಮಾದರಿಯ ಕ್ರಿಕೆಟಿಗೆ ತಂಡದ ನಾಯಕರಾಗಿರುತ್ತಾರೆ. ಮಾಜಿ ನಾಯಕ ಅಸYರ್‌ ಅಫ್ಘಾನ್‌ ಅವರನ್ನು ಉಪನಾಯಕರನ್ನಾಗಿ ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿ ಆಯ್ಕೆ ಮಾಡಲಾಗಿದೆ.

ರಶೀದ್‌ ಅವರನ್ನು ಎಲ್ಲ ಮಾದರಿಗೆ ನಾಯಕರನ್ನಾಗಿ ನೇಮಕ ಮಾಡುವ ಮೂಲಕ ಕ್ರಿಕೆಟ್‌ ಮಂಡಳಿ ಪ್ರತ್ಯೇಕ ನಾಯಕರ ಆಯ್ಕೆಗೆ ಅಂತ್ಯ ಹಾಡಿದೆ. ಈ ಮೊದಲು ಏಕದಿನಕ್ಕೆ ಗುಲ್ಬದಿನ್‌ ನೈಬ್‌, ಟಿ20ಕ್ಕೆ ರಶೀದ್‌ ಮತ್ತು ಟೆಸ್ಟ್‌ಗೆ ರಹಮತ್‌ ಶಾ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.

ಅಫ್ಘಾನಿಸ್ಥಾನ ತಂಡವು ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಂತ ನೀರಸ ಪ್ರದರ್ಶನ ನೀಡಿತ್ತು. ಆಡಿದ ಎಲ್ಲ ಪಂದ್ಯಗಳಲ್ಲೂ ಸೋಲನ್ನು ಕಂಡಿತ್ತು. ಆದರೆ ಭಾರತ, ವೆಸ್ಟ್‌ ಇಂಡೀಸ್‌ ಮತ್ತು ಪಾಕಿಸ್ಥಾನ ವಿರುದ್ಧ ಗೆಲ್ಲಲು ತೀವ್ರ ಪೈಪೋಟಿ ನೀಡಿತ್ತು.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ