ಸಂಜಯ್ ಮಾಂಜ್ರೇಕರ್ ಗೆ ರವೀಂದ್ರ ಜಡೇಜ ತಿರುಗೇಟು
Team Udayavani, Jul 5, 2019, 5:41 AM IST
ಲಂಡನ್: ಕ್ರಿಕೆಟಿಗ ರವೀಂದ್ರ ಜಡೇಜ ಮತ್ತು ಕಮೆಂಟೇಟರ್ ಸಂಜಯ್ ಮಾಂಜ್ರೇಕರ್ ನಡುವೆ ತೀಕ್ಷ್ಣ ಟ್ವಿಟರ್ ಚಕಮಕಿ ನಡೆದಿದೆ.
ಬಾಂಗ್ಲಾ ಪಂದ್ಯದ ಮೊದಲು ಸಹಾಯಕ ಕೋಚ್ ಸಂಜಯ್ ಬಂಗಾರ್ ಅವರು ರವೀಂದ್ರ ಜಡೇಜ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವ ಕುರಿತು ಮಾಂಜ್ರೆàಕರ್ ಅಭಿಪ್ರಾಯ ಕೇಳಿದ್ದರು. ಆಗ ಮಂಜ್ರೇಕರ್ , “ನಾನು ಜಡೇಜ ಅವರಂಥ ಚಿಕ್ಕಪುಟ್ಟ ಆಟಗಾರರ ಅಭಿಮಾನಿಯಲ್ಲ, 50 ಓವರಿನ ಕ್ರಿಕೆಟ್ನಲ್ಲಿ ಜಡೇಜ ಸಾಧನೆಯೇನೂ ಇಲ್ಲ. ಟೆಸ್ಟ್ ನಲ್ಲಿ ಮಾತ್ರ ಅವರೊಬ್ಬ ಉತ್ತಮ ಬೌಲರ್. 50 ಓವರ್ ಕ್ರಿಕೆಟಿಗೆ ಬ್ಯಾಟ್ಸ್ಮ್ಯಾನ್ ಮತ್ತು ಸ್ಪಿನ್ನರ್ ಬೇಕು’ ಎಂದಿದ್ದರು.
ಇದಕ್ಕೆ ರವೀಂದ್ರ ಜಡೇಜ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ನೀವು ಆಡಿರುವುದಕ್ಕಿಂತ ಎರಡು ಪಟ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ನಾನು ಆಡಿದ್ದೇನೆ ಮತ್ತು ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿದವರನ್ನು ಗೌರವಿಸುವುದನ್ನು ಕಲಿಯಿರಿ. ನಿಮ್ಮ ಮಾತಿನ ಭೇದಿಯ ಬಗ್ಗೆ ಸಾಕಷ್ಟು ಕೇಳಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ. ಜಡೇಜ ಹೇಳಿಕೆಗೆ ಪ್ರತಿಕ್ರಿಯಿಸದಂತೆ ಮಾಂಜ್ರೇಕರ್ ಗೆ ಅವರ ಆತ್ಮೀಯರು ಸಲಹೆ ನೀಡಿದ್ದರಿಂದ ಈ ಚಕಮಕಿ ಇಲ್ಲಿಗೆ ಮುಗಿದಿದೆ.