ಸಚಿನ್ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್

Team Udayavani, Jul 9, 2019, 12:36 PM IST

ಮ್ಯಾಂಚೆಸ್ಟರ್: ವಿಶ್ವದ ದ್ವಿತೀಯ ಶ್ರೇಯಾಂಕಿತ ಬ್ಯಾಟ್ಸಮನ್, ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಈ ವಿಶ್ವಕಪ್ ಕೂಟದಲ್ಲಿ ಭರ್ಜರಿ ಫಾರ್ಮಿನಲ್ಲಿದ್ದಾರೆ. ಈಗಾಗಲೇ ಕೂಟದಲ್ಲಿ ಐದು ಶತಕಗಳನ್ನು ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದು,  ಮಂಗಳವಾರದ ಸೆಮಿಫೈನಲ್ ಪಂದ್ಯದಲ್ಲಿ ಇನ್ನೆರಡು ದಾಖಲೆಗಳನ್ನುನಿರ್ಮಿಸಲು ಸಜ್ಜಾಗಿದ್ದಾರೆ.

ರೋಹಿತ್ ಈ ವಿಶ್ವಕಪ್ ನಲ್ಲಿ ಈಗಾಗಲೇ 8 ಪಂದ್ಯಗಳಲ್ಲಿ 647 ರನ್ ಗಳಿಸಿದ್ದಾರೆ. ಇನ್ನು 27 ರನ್ ಗಳಿಸಿದರೆ ಸಚಿನ್ ತೆಂಡುಲ್ಕರ್ ಅವರ ವಿಶ್ವಕಪ್ ಸಾರ್ವಕಾಲಿಕ ದಾಖಲೆ ಮುರಿಯಲಿದ್ದಾರೆ. ಸಚಿನ್ 2003ರ ವಿಶ್ವಕಪ್ ನಲ್ಲಿ 11 ಪಂದ್ಯಗಳಿಂದ 673 ರನ್ ಗಳಿಸಿದ್ದರು. ರೋಹಿತ್ ಇನ್ನು 27ರನ್ ಗಳಿಸಿದರೆ ರೋಹಿತ್ ಈ ದಾಖಲೆಯನ್ನು ಮುರಿಯಲಿದ್ದಾರೆ.

ಇನ್ನು ಒಂದು ಶತಕ ಬಾರಿಸಿದರೆ ರೋಹಿತ್ ಶರ್ಮ ಸಚಿನ್ ರ ಮತ್ತೊಂದು ದಾಖಲೆ ಮುರಿಯಲಿದ್ದಾರೆ. ರೊಹಿತ್ ವಿಶ್ವಕಪ್ ನಲ್ಲಿ ಒಟ್ಟು ಆರು ಶತಕ ಬಾರಿಸಿದ್ದಾರೆ. ಸಚಿನ್ ಹೆಸರಲ್ಲಿ ಕೂಡಾ ಆರು ಶತಕಗಳಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ