ಕ್ರೀಡಾಂಗಣದಲ್ಲೇ ಆಕಳಿಸಿದ ಪಾಕ್‌ ನಾಯಕ! ಟ್ರೋಲ್ ಮಾಡಿದ ನೆಟ್ಟಿಗರು

Team Udayavani, Jun 17, 2019, 12:51 PM IST

ಮ್ಯಾಂಚೆಸ್ಟರ್: ಒಂದು ಕಡೆ ರೋಹಿತ್‌ ಶರ್ಮ – ಕೆ.ಎಲ್‌. ರಾಹುಲ್‌, ಮತ್ತೂಂದು ಕಡೆ ವಿರಾಟ್‌ ಕೊಹ್ಲಿ ಪಾಕ್‌ ಬೌಲರ್‌ಗಳನ್ನು ಮನಬಂದಂತೆ ಚಚ್ಚುತ್ತಿದ್ದರು. ಭಾರತೀಯ ಬ್ಯಾಟ್ಸ್‌ಮನ್‌ಗಳ ರನ್‌ ಮಳೆಗೆ ನಿಯಂತ್ರಣ ಹಾಕಲು ಪಾಕಿಸ್ತಾನ ತಂಡದ ನಾಯಕ ಸರ್ಫಾರಾಜ್ ಅಹ್ಮದ್‌ಗೆ ಸಾಧ್ಯವೇ ಆಗಲಿಲ್ಲ. ಒಂದು ಹಂತದಲ್ಲಿ ಸರ್ಫಾರಾಜ್ ಕ್ರೀಡಾಂಗಣದಲ್ಲೇ ಆಕಳಿಸಿದರು.

ತಕ್ಷಣ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪಾಕ್‌
ನಾಯಕ ಆಕಳಿಸಿರುವುದನ್ನು ಹಲವಾರು ಕ್ರಿಕೆಟ್‌ ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಇಮ್ರಾನ್‌ ಸಲಹೆಗೇ ಬೆಲೆ ನೀಡದ ಪಾಕ್‌ ತಂಡ!
ಪಾಕಿಸ್ತಾನ ತಂಡವನ್ನು ಹುರಿದುಂಬಿಸಲು ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಅವರೇ ಸ್ವತಃ ರಂಗಕ್ಕಿಳಿದರು. ಟಾಸ್‌ ಗೆದ್ದರೆ ಮೊದಲು ಬ್ಯಾಟಿಂಗನ್ನೇ ಆಯ್ದುಕೊಳ್ಳಿ ಎಂದೂ ಇಮ್ರಾನ್‌ ಸಲಹೆ ಮಾಡಿದ್ದರು. ಆದರೆ ಸರ್ಫಾರಾಜ್ ಈ ಸಲಹೆಗೆ ಬೆಲೆ ನೀಡಿಲ್ಲ. ಪ್ರಧಾನಿಯ ಮಾತಿಗೇ ಪಾಕಿಸ್ತಾನ ತಂಡ ಬೆಲೆ ನೀಡಲಿಲ್ಲ ಎಂದು ಟ್ವೀಟಿಗರ ಅಪಹಾಸ್ಯ ಮಾಡಿದ್ದಾರೆ.

ಪಾಕಿಸ್ತಾನದ ಏಕೈಕ ವಿಶ್ವಕಪ್‌ ಗೆಲುವಿನ ರೂವಾರಿಯಾಗಿರುವ ಇಮ್ರಾನ್‌ ಖಾನ್‌ ಅವರನ್ನು ಜನರು ಈಗಲೂ ಪ್ರೀತಿಯಿಂದ ಕಪ್ತಾನ್‌’ ಎಂದೇ ಕರೆಯುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ