ಶಾನ್ ಮಾರ್ಷ್ ವಿಶ್ವಕಪ್ನಿಂದ ಹೊರಕ್ಕೆ
Team Udayavani, Jul 6, 2019, 5:48 AM IST
ಲಂಡನ್: ಮುಂಗೈಗೆ ಗಾಯ ಮಾಡಿಕೊಂಡಿರುವ ಆಸ್ಟ್ರೇಲಿಯ ಬ್ಯಾಟ್ಸ್ಮನ್ ಶಾನ್ ಮಾರ್ಷ್ ವಿಶ್ವಕಪ್ನ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮಾರ್ಷ್ ಅವರ ಜಾಗಕ್ಕೆ ಪೀಟರ್ ಹ್ಯಾಂಡ್ಸ್ಕಾಂಬ್ ಅವರನ್ನು ಹೆಸರಿಸಲಾಗಿದೆ. ಹ್ಯಾಂಡ್ಸ್ಕಾಂಬ್ ಈ ಮೊದಲು ಸ್ವಲ್ಪದರಲ್ಲಿ ಆಯ್ಕೆಯಿಂದ ವಂಚಿತರಾಗಿದ್ದರು. ಮಾರ್ಷ್ ಹೊರಬಿದ್ದ ವಿಷಯವನ್ನು ಕ್ರಿಕೆಟ್ ಆಸ್ಟ್ರೇಲಿಯ’ ದೃಢಪಡಿಸಿದೆ. ನೆಟ್ ಅಭ್ಯಾಸದ ವೇಳೆ ಪ್ಯಾಟ್ ಕಮಿನ್ಸ್ ಎಸೆದ ಚೆಂಡು ಮಾರ್ಷ್ ಅವರ ಮುಂಗೈಗೆ ಬಡಿದಿತ್ತು. ತತ್ಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕ್ಯಾನಿಂಗ್ನಲ್ಲಿ ಮೂಳೆ ಮುರಿದಿರುವುದು ಖಚಿತವಾಗಿದೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.