ದಕ್ಷಿಣ ಆಫ್ರಿಕಾ ಗೆಲುವಿನ ಆಟ
ಅಭ್ಯಾಸ ಪಂದ್ಯದಲ್ಲಿ ಎಡವಿದ ಶ್ರೀಲಂಕಾ
Team Udayavani, May 26, 2019, 9:32 AM IST
ಕಾರ್ಡಿಫ್: ಈ ಕೂಟದ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ಮೊದಲ ಅಭ್ಯಾಸ ಪಂದ್ಯದಲ್ಲಿ ದುರ್ಬಲ ಶ್ರೀಲಂಕಾವನ್ನು 87 ರನ್ನುಗಳಿಂದ ಮಣಿಸಿದೆ.
ಬ್ರಿಸ್ಟಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡು ಪ್ಲೆಸಿಸ್ ಪಡೆ 7 ವಿಕೆಟಿಗೆ 338 ರನ್ ರಾಶಿ ಹಾಕಿತು. ಈ ಸವಾಲು ಸ್ವೀಕರಿಸಲು ವಿಫಲವಾದ ಲಂಕಾ 42.3 ಓವರ್ಗಳಲ್ಲಿ 251ಕ್ಕೆ ಆಲೌಟ್ ಆಯಿತು. ಮಧ್ಯಮ ವೇಗಿ ಆ್ಯಂಡಿಲ್ ಫೆಲುಕ್ವಾಯೊ 35ಕ್ಕೆ 4 ವಿಕೆಟ್ಹಾರಿಸಿ ಲಂಕೆಯ ನಡು ಮುರಿದರು.
ಲಂಕಾ ಕಪ್ತಾನ ದಿಮುತ್ ಕರುಣರತ್ನೆ (87) ಮತ್ತು ಏಂಜೆಲೊ ಮ್ಯಾಥ್ಯೂಸ್ (64) ಹೋರಾಟ ನಡೆಸಿದರೂ ಉಳಿದವರಿಂದ ನೆರವು ಲಭಿಸಲಿಲ್ಲ.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಸರದಿಯಲ್ಲಿ ಹಾಶಿಮ್ ಆಮ್ಲ (65), ನಾಯಕ ಡು ಪ್ಲೆಸಿಸ್ (88) ಉತ್ತಮ ಪ್ರದರ್ಶನವಿತ್ತರು. ಮಿಲ್ಲರ್ ಹೊರತುಪಡಿಸಿ ಉಳಿದವರೆಲ್ಲರೂ ತಂಡದ ಬೃಹತ್ ಮೊತ್ತಕ್ಕೆ ತಮ್ಮ ಮಹತ್ವದ ಕಾಣಿಕೆ ಸಲ್ಲಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ-7 ವಿಕೆಟಿಗೆ 338 (ಡು ಪ್ಲೆಸಿಸ್ 88, ಆಮ್ಲ 65, ಡುಸೆನ್ 40, ಲಕ್ಮಲ್ 63ಕ್ಕೆ 2, ಪ್ರದೀಪ್ 77ಕ್ಕೆ 2). ಶ್ರೀಲಂಕಾ-42.3 ಓವರ್ಗಳಲ್ಲಿ 251 (ಕರುಣರತ್ನೆ 87, ಮ್ಯಾಥ್ಯೂಸ್ 64, ಮೆಂಡಿಸ್ 37, ಫೆಲುಕ್ವಾಯೊ 36ಕ್ಕೆ 4, ಎನ್ಗಿಡಿ 12ಕ್ಕೆ 2).