ಪಾಕ್‌ ವೇಗಿ ಆಮಿರ್‌ಗೆ 2 ಬಾರಿ ಎಚ್ಚರಿಕೆ

Team Udayavani, Jun 17, 2019, 11:48 AM IST

ಮ್ಯಾಂಚೆಸ್ಟರ್: ಇಂಡೋ-ಪಾಕ್ ವಿಶ್ವಕಪ್ ಕದನದ ವೇಳೆ ಪಾಕಿಸ್ಥಾನ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌ ಅವರಿಗೆ ಅಂಪಾಯರ್‌ ಬ್ರೂಸ್‌ ಆಕ್ಸೆನ್‌ಫೋರ್ಡ್‌ 2 ಬಾರಿ ಅಧಿಕೃತ ಎಚ್ಚರಿಕೆ ನೀಡಿದರು.

ಅಂಕಣದ ಮೇಲೆ ಅವರು ಓಡಿದ ಹಿನ್ನೆಲೆಯಲ್ಲಿ ಯಾವುದೇ ಔಪಚಾರಿಕ ಸೂಚನೆ ನೀಡದೆ ನೇರ ಎಚ್ಚರಿಕೆ ನೀಡಿದರು. ಇದರ ಗಂಭೀರತೆ ಅರಿತ ಪಾಕ್‌ ನಾಯಕ ಸರ್ಫಾರಾಜ್ ಅಹ್ಮದ್‌ ಕೂಡಲೇ ಮಧ್ಯಪ್ರವೇಶಿಸಿ ಅಂಪಾಯರ್‌ ಜತೆ ಮಾತುಕತೆ ನಡೆಸಿದರು.

ಬೌಲರ್ ಗಳು ಬಾಲ್ ಹಾಕಿದ ನಂತರ ಪಿಚ್ ನ ನಡುಭಾಗದಲ್ಲಿ ಓಡುವಂತಿಲ್ಲ. ಬ್ಯಾಟ್ಸಮನ್ ಗಳು ಕೂಡ ರನ್ ಓಡುವಾಗ ಪಿಚ್ ನಡುವೆ ಓಡಲು ಅವಕಾಶವಿಲ್ಲ. ಆಟಗಾರರ ಶೂ ಸ್ಪೈಕ್ ನಿಂದ ಪಿಚ್ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಈ ನಿಯಮ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ