‘ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು’: ಮಂಗಳೂರಿಗರ ವಿಶ್ವಕಪ್ ವಿಡಿಯೋ ವೈರಲ್

Team Udayavani, Jun 17, 2019, 1:24 PM IST

ಮ್ಯಾಂಚೆಸ್ಟರ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಉತ್ತಮ ಆಟದಿಂದ ಜನರ ಮನಗೆದ್ದಿದ್ದಾರೆ. ರವಿವಾರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಕೂಡಾ ತಾಳ್ಮೆಯುತ ಅರ್ಧಶತಕ ಬಾರಿಸಿದ್ದರು. ಈ ಮಧ್ಯೆ ಇಂಡೋ ಪಾಕ್ ಕದನದ ವೇಳೆ ತುಳುನಾಡು ಮೂಲದ ಕೆಲವರು ಮಾಡಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಮೂಲತಃ ಮಂಗಳೂರು ಮೂಲದವರಾದ ಕೆ.ಎಲ್ ರಾಹುಲ್ ಫೀಲ್ಡಿಂಗ್ ವೇಳೆ ಮಂಗಳೂರು ಮೂಲದ ಕೆಲ ಪ್ರೇಕ್ಷಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ರವಿವಾರದ ಹೈವೋಲ್ಟೇಜ್ ಪಂದ್ಯದಲ್ಲಿ ರಾಹುಲ್ ಬೌಂಡರಿ ಲೈನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲ ತುಳುನಾಡಿನ ಯುವಕರು ಜೋರು ಧ್ವನಿಯಲ್ಲಿ ಕೆ.ಎಲ್. ರಾಹುಲ್ ರನ್ನು ಕರೆಯುತ್ತಾ, ‘ರಾಹುಲ್ ಎಂಚ ಉಲ್ಲರ್. ಎಂಕ್ಲೆಗ್ ಸೆಂಚುರಿ ಬೋಡು. ಎಂಕುಲ್ ಕುಡ್ಲಡ್ದ್ ಬೈದಾ “  ( ನೀವು ಹೇಗಿದ್ದೀರಿ, ನಮಗೆ ಶತಕ ಬೇಕು. ನೀವು ಶತಕ ಬಾರಿಸಬೇಕು. ನಾವು ಮಂಗಳೂರಿನಿಂದ ಬಂದಿದ್ದೇವೆ ) ಎಂದು ತುಳು ಭಾಷೆಯಲ್ಲಿ ಹೇಳುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ