ವಿಶ್ವಕಪ್‌ ಪ್ರಶಸ್ತಿ ಯಾರಿಗೆ?

ಅದೃಷ್ಟದ ಕಿವೀಸ್‌; ಆತಿಥ್ಯದ ಇಂಗ್ಲೆಂಡ್‌

Team Udayavani, Jul 13, 2019, 5:56 AM IST

ಲಂಡನ್‌: ಬಹುತೇಕ ಯಾರೂ ನಿರೀಕ್ಷೆ ಮಾಡದ ಎರಡು ತಂಡಗಳು 2019ರ ವಿಶ್ವಕಪ್‌ ಕ್ರಿಕೆಟ್‌ ಕೂಟದ ಪ್ರಶಸ್ತಿ ಎತ್ತಲು ರವಿವಾರ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಮುಖಾ ಮುಖೀಯಾಗುತ್ತಿವೆ.

ಅದೃಷ್ಟದ ಬಲದಿಂದ ಫೈನಲಿಗೇರಿದ ನ್ಯೂಜಿಲ್ಯಾಂಡ್‌ ಮತ್ತು ಆತಿಥ್ಯ ವಹಿಸಿಕೊಂಡ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲಲು ಹೋರಾಡಲಿದೆ. ಸಾಮಾನ್ಯ ತಂಡವಾಗಿರುವ ನ್ಯೂಜಿಲ್ಯಾಂಡ್‌ ಸೆಮಿಫೈನಲ್‌ನಲ್ಲಿ ಬಲಿಷ್ಠ ಭಾರತವನ್ನು ಬಗ್ಗುಬಡಿದರೆ ಇಂಗ್ಲೆಂಡ್‌ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಏರಿದೆ. ರವಿವಾರ ಯಾರೇ ಗೆದ್ದರೂ ಆ ತಂಡ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಲಿದೆ.

ಪ್ರಶಸ್ತಿ ಯಾರಿಗೆ
ಉಭಯ ತಂಡಗಳ ಬಲಾಬಲ ವನ್ನು ಗಮನಿಸಿದರೆ ಇಂಗ್ಲೆಂಡ್‌ ಬಲಿಷ್ಠವೆಂದು ಹೇಳಬಹುದು. ಆಸ್ಟ್ರೇಲಿಯ ವಿರುದ್ಧ ಆಡಿದಂತೆ ಫೈನಲ್‌ನಲ್ಲೂ ಆಡಿದರೆ ಇಂಗ್ಲೆಂಡ್‌ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಬೌಲಿಂಗ್‌, ಬ್ಯಾಟಿಂಗ್‌ನಲ್ಲಿ ಅಸಾ ಮಾನ್ಯ ನಿರ್ವಹಣೆ ನೀಡಿದ ಆತಿ ಥೇಯ ಆಂಗ್ಲರು ಆಸೀಸನ್ನು ಬಗ್ಗು ಬಡಿದಿದ್ದರು. ಮಾತ್ರವಲ್ಲದೇ ಲೀಗ್‌ ಹಂತದಲ್ಲಿ ಇಂಗ್ಲೆಂಡ್‌ ಕಿವೀಸ‌ನ್ನು ಭಾರೀ ಅಂತರದಿಂದ ಉರುಳಿಸಿತ್ತು. ಇದೇ ವೇಳೆ ಅದೃ ಷ್ಟದ ಬಲದಿಂದ ಸೆಮಿಫೈನಲಿಗೇ ರಿದ್ದ ಕಿವೀಸ್‌ ಮಳೆ ಯಿಂದ ತೊಂದರೆಗೊ ಳಗಾದ ಪಂದ್ಯದಲ್ಲಿ ರನ್‌ ಮೆಷಿನ್‌ ಭಾರತದ ರನ್‌ ಓಟಕ್ಕೆ ಬ್ರೇಕ್‌ ನೀಡುವಲ್ಲಿ ಯಶಸ್ವಿಯಾಗಿ ಫೈನಲಿಗೆ ಏರಿತ್ತು.

ಹೀಗೊಂದು ಲೆಕ್ಕಾಚಾರ
1992ರಲ್ಲಿ ಅದೃಷ್ಟದ ಬಲದಿಂದ ಸೆಮಿಫೈನಲ್‌ ತಲುಪಿದ್ದ ಪಾಕಿಸ್ಥಾನ ಆಬಳಿಕ ಅಮೋಘ ನಿರ್ವಹಣೆ ನೀಡುತ್ತ ಪ್ರಶಸ್ತಿ ಗೆದ್ದು ಸಂಭ್ರಮಿಸಿತ್ತು. ಈ ಬಾರಿ ನ್ಯೂಜಿಲ್ಯಾಂಡ್‌ ಕೂಡ ಅದೃಷ್ಟದ ಬಲದಿಂದಲೇ ಸೆಮಿಫೈನಲಿಗೇರಿತ್ತು. ರನ್‌ಧಾರಣೆಯ ಆಧಾರದಲ್ಲಿ ನಾಕೌಟ್‌ ತಲುಪಿದೆ. ಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರಾಳಿ ಸಿಕ್ಕಿದೆ.

ಇದೇ ವೇಳೆ ಆತಿಥ್ಯ ವಹಿಸಿದ ಇಂಗ್ಲೆಂಡಿಗೂ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಕಳೆದ ಎರಡು ವಿಶ್ವಕಪ್‌ ವೇಳೆ ಆತಿಥ್ಯ ವಹಿಸಿದ ತಂಡವೇ ಪ್ರಶಸ್ತಿ ಗೆದ್ದಿದೆ. ಈ ಬಾರಿ ಇಂಗ್ಲೆಂಡ್‌ ಗೆದ್ದರೆ ಹ್ಯಾಟ್ರಿಕ್‌ ಸಾಧಿಸಲಿದೆ. 2011ರ ವಿಶ್ವಕಪ್‌ನ ಆತಿಥ್ಯ ವಹಿಸಿದ್ದ ಭಾರತ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಗೆದ್ದಿದೆ. 2015ರ ವಿಶ್ವಕಪ್‌ನ ಆತಿಥ್ಯ ಆಸ್ಟ್ರೇಲಿಯ ವಹಿಸಿತ್ತು. ಫೈನಲ್‌ನಲ್ಲಿ ನ್ಯೂಜಿಲ್ಯಾಂಡನ್ನು ಕೆಡಹಿ ಪ್ರಶಸ್ತಿ ಎತ್ತಿ ಹಿಡಿದಿತ್ತು. 2019ರ ವಿಶ್ವಕಪ್‌ನ ಆತಿಥ್ಯ ಇಂಗ್ಲೆಂಡ್‌ ವಹಿಸಿದೆ. ಫೈನಲ್‌ ರವಿವಾರ ನಡೆಯಲಿದ್ದು ಪ್ರಶಸ್ತಿ ಗೆಲ್ಲುವರ್ಯಾರು ಕಾದು ನೋಡುವ!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ