ಇನ್ನೊಂದು ದಾಖಲೆಯತ್ತ ವಿಲಿಯಮ್ಸನ್
Team Udayavani, Jul 14, 2019, 5:21 AM IST
ಲಂಡನ್: ನ್ಯೂಜಿಲ್ಯಾಂಡಿನ ಕೇನ್ ವಿಲಿಯಮ್ಸನ್ ಇನ್ನೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.
ಪ್ರಚಂಡ ಫಾರ್ಮ್ನಲ್ಲಿರುವ ವಿಲಿಯಮ್ಸನ್ ಏಕಾಂಗಿಯಾಗಿ ಹೋರಾಡಿ ಬ್ಲ್ಯಾಕ್ ಕ್ಯಾಪ್ಸ್ ತಂಡವನ್ನು ಮತ್ತೆ ವಿಶ್ವಕಪ್ ಕೂಟದ ಫೈನಲ್ ಹಂತಕ್ಕೆ ತಲುಪಿಸಿದ್ದಾರೆ. ಲಾರ್ಡ್ಸ್ ನಲ್ಲಿ ರವಿವಾರ ನಡೆಯುವ ಇಂಗ್ಲೆಂಡ್ ವಿರುದ್ಧದ ಫೈನಲ್ನಲ್ಲಿ ವಿಲಿಯಮ್ಸನ್ ಒಂದು ರನ್ ಗಳಿಸಿದರೆ ವಿಶ್ವಕಪ್ ಕೂಟವೊಂದರಲ್ಲಿ ಗರಿಷ್ಠ ರನ್ ಪೇರಿಸಿದ ನಾಯಕ ಎಂದೆನಿಸಿಕೊಳ್ಳಲಿದ್ದಾರೆ.
ಒಟ್ಟು 548 ರನ್ ಪೇರಿಸಿರುವ ಕಿವೀಸ್ನ ಸೂಪರ್ ತಾರೆ ಸದ್ಯ ಶ್ರೀಲಂಕಾದ ಮಾಹೇಲ ಜಯವರ್ಧನ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಒಂದು ವೇಳೆ ವಿಲಿಯಮ್ಸನ್ ಫೈನಲ್ನಲ್ಲಿ 1 ರನ್ ಗಳಿಸಿದರೆ ಅವರು ಜಯವರ್ಧನ ಅವರಿಗಿಂತ ಮೂರು ಇನ್ನಿಂಗ್ಸ್ ಕಡಿಮೆ ಆಡಿ ಈ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಲಿದ್ದಾರೆ.
ನಾಲ್ವರು ನಾಯಕರು
ವಿಶ್ವಕಪ್ ಕೂಟವೊಂದರಲ್ಲಿ 500 ಪ್ಲಸ್ ಪೇರಿಸಿದ ನಾಲ್ವರು ನಾಯಕರಲ್ಲಿ ವಿಲಿಯಮ್ಸನ್ ಒಬ್ಬರಾಗಿದ್ದಾರೆ. ಜಯವರ್ಧನ, ರಿಕಿ ಪಾಂಟಿಂಗ್ ಮತ್ತು ಫಿಂಚ್ ಉಳಿದ ಮೂವರು ನಾಯಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ