Udayavni Special

ಶಕೀಬ್ ಶತಕದಾಟ: ವಿಂಡೀಸ್ ವಿರುದ್ಧ ಬಾಂಗ್ಲಾ ಹುಲಿಯ ಮೆರೆದಾಟ


Team Udayavani, Jun 18, 2019, 12:57 PM IST

shakib-al

ಟೌಂಟನ್: ಈ ವಿಶ್ವಕಪ್ ಕೂಟದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ಆಟಗಾರನೆಂದರೆ ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್. ಈ ಕೂಟದ ಗರಿಷ್ಠ ರನ್ ಗಳಿಸಿರುವ ಆಟಗಾರನಾಗಿರುವ ಶಕೀಬ್ ಸೋಮವಾರದ ಪಂದ್ಯದಲ್ಲಿ ಶತಕ ಬಾರಿಸಿ ವಿಂಡೀಸ್ ವಿರುದ್ಧ ಬಾಂಗ್ಲಾಕ್ಕೆ  ನಿರಾಯಾಸ ಗೆಲುವು ತಂದು ಕೊಟ್ಟರು.

ಸೋಮವಾರ ವೆಸ್ಟ್ ಇಂಡೀಸ್ ನೀಡಿದ 322 ರನ್ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ ದೇಶಕ್ಕೆ ಬೆನ್ನೆಲುಬಾಗಿ ನಿಂತವರು ವಿಶ್ವದ ಅಗ್ರ ಕ್ರಮಾಂಕದ ಆಲ್ ರೌಂಡರ್ ಶಕೀಬ್ ಅಲ್ ಹಸನ್. ವನ್ ಡೌನ್ ಆಟಗಾರನಾಗಿ ಬಂದ ಶಕೀಬ್  ಮರಳಿ ಪೆವಿಲಿಯನ್ ಗೆ ಹೋಗಿದ್ದು ತಂಡವನ್ನು ಗೆಲ್ಲಿಸಿದ ನಂತರವೇ. ಕೇವಲ 99 ಎಸೆತ ಎದುರಿಸಿ 124 ರನ್ ಗಳಿಸಿದ ಶಕೀಬ್ ತನ್ನ ಈ ಅಜೇಯ ಇನ್ನಿಂಗ್ಸ್ ನಲ್ಲಿ 16 ಆಕರ್ಷಕ ಬೌಂಡರಿ ಬಾರಿಸಿದರು.

ಶಕೀಬ್ ಅಲ್ ಹಸನ್ ಈ ವಿಶ್ವಕಪ್ ಕೂಟದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರನೆನಿಸಿದರು. ಆಡಿದ ನಾಲ್ಕು ಇನ್ನಿಂಗ್ಸ್ ಗಳಲ್ಲಿ 124ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಶಕೀಬ್ 384 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಎರಡು ಅರ್ಧಶತಕಗಳು ಸೇರಿವೆ.

ಈ ವೇಳೆ ಸತತ ಐದು ಏಕದಿನ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕದ ಗಡಿ ದಾಟಿದ ಶಕೀಬ್ ತನ್ನ ಸಹ ಆಟಗಾರ ತಮೀಮ್ ಇಕ್ಬಾಲ್ ರ ದಾಖಲೆಯನ್ನು ಸರಿದೂಗಿಸಿದರು. ತಮೀಮ್ ಕೂಡಾ ಸತತ ಐದು ಇನ್ನಿಂಗ್ಸ್ ಗಳನ್ನು ಅರ್ಧಶತಕದ ಗಡಿ ದಾಟಿದ್ದರು.


ಶಕೀಬ್ ಬಾರಿಸಿದ 124 ರನ್ ವಿಶ್ವಕಪ್ ನಲ್ಲಿ ಬಾಂಗ್ಲಾ ಆಟಗಾರನೋರ್ವನ ದ್ವಿತೀಯ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಈ ಹಿಂದೆ 2015 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೊಹಮ್ಮದುಲ್ಲಾ ರಿಯಾದ್ 128 ರನ್ ಗಳಿಸಿದ್ದರು.

ನಿನ್ನೆಯ ಆಟದ ವೇಳೆ ಶಕೀಬ್ ಏಕದಿನ ಕ್ರಿಕೆಟ್ ನಲ್ಲಿ 6000 ರನ್ ಗಡಿ ದಾಟಿದ ಬಾಂಗ್ಲಾದ ದ್ವಿತೀಯ ಅಟಗಾರ ಎಂಬ ಗೌರವಕ್ಕೆ ಪಾತ್ರರಾದರು. ತಮೀಮ್ ಇಕ್ಬಾಲ್ ಈ ಸಾಧನೆ ಮಾಡಿದ ಮೊದಲಿಗ. ಇನ್ನು ಬೌಲಿಂಗ್ ನಲ್ಲಿ 254 ವಿಕೆಟ್ ಕಬಳಿಸಿರುವ ಶಕೀಬ್ ಈ ಪಟ್ಟಿಯಲ್ಲೂ ದ್ವಿತೀಯ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ನಾಯಕ ಮುಶ್ರಫೆ ಮುರ್ತಜಾ 266 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ: ಅಪಾರ ನಷ್ಟ

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ: ಅಪಾರ ನಷ್ಟ

ಕೇರಳ ಗರ್ಭಿಣಿ ಆನೆ ಹತ್ಯೆ ಪ್ರಕರಣ: ಓರ್ವನ ಬಂಧನ

ಕೇರಳ ಗರ್ಭಿಣಿ ಆನೆ ಹತ್ಯೆ ಪ್ರಕರಣ: ಓರ್ವನ ಬಂಧನ

ಹಂಪಿಯಲ್ಲಿ 4.0 ತೀವ್ರತೆಯ ಭೂಕಂಪ..? ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಹಂಪಿಯಲ್ಲಿ 4.0 ತೀವ್ರತೆಯ ಭೂಕಂಪ..? ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಉಡುಪಿ ದೊಡ್ಡಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಸೀಲ್ ಡೌನ್

ಸಿದ್ದು ಸ್ವಾರ್ಥ ರಾಜಕಾರಣದಿಂದ 17 ಜನ ಶಾಸಕರು ಹೊರ ಬಂದಿದ್ದು: ಬಿ ಸಿ ಪಾಟೀಲ್

ಸಿದ್ದು ಸ್ವಾರ್ಥ ರಾಜಕಾರಣದಿಂದ 17 ಜನ ಶಾಸಕರು ಹೊರ ಬಂದಿದ್ದು: ಬಿ ಸಿ ಪಾಟೀಲ್

ಅತ್ಯುತ್ತಮ ನಾಯಕರೆಂದರೆ ಹೀಗೆ.. ಗಂಭೀರ್ ನಾಯಕತ್ವವನ್ನು ನೆನೆದ ಉತ್ತಪ್ಪ

ಅತ್ಯುತ್ತಮ ನಾಯಕರೆಂದರೆ ಹೀಗೆ.. ಗಂಭೀರ್ ನಾಯಕತ್ವವನ್ನು ನೆನೆದ ಉತ್ತಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಬಿಎಸ್ ವೈ ಮೆಚ್ಚುಗೆ

5-June-11

ಮುಂದುವರಿದ ಮಳೆ ಅಬ್ಬರ

5-June-10

ಬಿತ್ತನೆ ಬೀಜಗಳ ಕೊರತೆಯಿಲ್ಲ: ಮಲ್ಲಿಕಾರ್ಜುನ

“ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗಿರದಿರಲಿ’

“ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗಿರದಿರಲಿ’

5-June-09

ಬೀದರ: 4021 ಮಂದಿ ವರದಿ ಬಾಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.