ಪಾಕ್‌-ಆಫ್ರಿಕಾ: ಸಮಾಧಾನಕರ ಸಮರ

ಲಾರ್ಡ್ಸ್‌ನಲ್ಲಿ ರೇಸ್‌ನಿಂದ "ಹೊರಬಿದ್ದವರ' ಸ್ಪರ್ಧೆ

Team Udayavani, Jun 23, 2019, 5:56 AM IST

ಲಂಡನ್‌: ಈಗಾಗಲೇ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ಥಾನ ತಂಡಗಳು ರವಿವಾರ ಸಮಾಧಾನಕರ ಸಮರವೊಂದರಲ್ಲಿ ಕಾಣಿಸಿಕೊಳ್ಳಲಿವೆ. ಇದು ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆಯುವ ಪ್ರಸಕ್ತ ಕೂಟದ ಮೊದಲ ಪಂದ್ಯವೆಂಬುದು ವಿಶೇಷ.

ಎರಡೂ ತಂಡಗಳು ಸದ್ಯ ಒಂದು ಗೆಲುವು ಹಾಗೂ 3 ಅಂಕಗಳೊಂದಿಗೆ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಆದರೆ ದಕ್ಷಿಣ ಆಫ್ರಿಕಾ 6 ಪಂದ್ಯ ಆಡಿದರೆ, ಪಾಕಿಸ್ಥಾನ ಆಡಿದ್ದು ಐದರಲ್ಲಿ ಮಾತ್ರ. ಹೀಗಾಗಿ ಪಾಕ್‌ ಪಾಲಿಗೆ ಇದು ಹೆಚ್ಚು ಮಹತ್ವದ ಪಂದ್ಯ.

ದಿಕ್ಕೆಟ್ಟ ಪಾಕಿಸ್ಥಾನ
ಹಿಂದಿನ ಪಂದ್ಯದಲ್ಲಿ ಬದ್ಧ ಎದುರಾಳಿ ಭಾರತದ ವಿರುದ್ಧ ಸತತ ಏಳನೇ ವಿಶ್ವಕಪ್‌ ಸೋಲನುಭವಿಸಿದ ಬಳಿಕ ಸಫ‌ìರಾಜ್‌ ಪಡೆ ದಿಕ್ಕೆಟ್ಟು ಕುಳಿತಿದೆ. ಎಲ್ಲ ಕಡೆಗಳಿಂದಲೂ ಟೀಕಾಪ್ರಹಾರ ಎದುರಾಗುತ್ತಿದೆ. ಹೀಗಾಗಿ ಉಳಿದ ಪಂದ್ಯಗಳನ್ನು ಗೆದ್ದು ಅಭಿಮಾನಿಗಳನ್ನು ಸಮಾಧಾನಪಡಿಸುವತ್ತ ಪಾಕ್‌ ಮುಂದಾಗಬೇಕಿದೆ. ಆಗ ಮತ್ತೆ ನಾಕೌಟ್‌ ಆಸೆ ಚಿಗುರಲೂಬಹುದು. ಟೀಮ್‌ ಇಂಡಿಯಾ ವಿರುದ್ಧ ಎಡವಿದ ಬಳಿಕ ಪಾಕಿಸ್ಥಾನ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಭಾರತದ ಎದುರು ಯಾವತ್ತೂ ನರ್ವಸ್‌ ಆಗುವ ಪಾಕಿಸ್ಥಾನ ಉಳಿದ ತಂಡಗಳ ವಿರುದ್ಧ ಉತ್ತಮ ಪ್ರದರ್ಶನವನ್ನೇ ನೀಡುತ್ತದೆ. ಹೀಗಾಗಿ ಅದು ಡು ಪ್ಲೆಸಿಸ್‌ ಪಡೆ ಮೇಲೆ ಸವಾರಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ದಕ್ಷಿಣ ಆಫ್ರಿಕಾದ್ದು ಇನ್ನೊಂದು ರೀತಿಯ ಅವಸ್ಥೆ. 6 ಪಂದ್ಯ ಆಡಿದರೂ ಇನ್ನೂ ತಪ್ಪುಗಳನ್ನು ತಿದ್ದಿಕೊಂಡಿಲ್ಲ. ಎಲ್ಲಿಯೂ ವಿಶ್ವಕಪ್‌ ಜೋಶ್‌ ತೋರ್ಪಡಿಸಿಲ್ಲ. ಅಭಿಮಾನಿಗಳೂ ಈ ತಂಡದ ಮೇಲಿನ ನಂಬಿಕೆಯನ್ನು ಕಳೆದುಕೊಂಡಾಗಿದೆ.

ಸಿಲ್ಲಿ ಪಾಯಿಂಟ್‌
1992ರಿಂದ ಮೊದಲ್ಗೊಂಡು ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಆಡಿದ ಮೂರೂ ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್‌ ಸಾಧಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ಥಾನದ ಏಕೈಕ ವಿಶ್ವಕಪ್‌ ಗೆಲುವು 2015ರಲ್ಲಿ ದಾಖಲಾಗಿತ್ತು. ಅಂತರ 29 ರನ್‌ (ಡಿ-ಎಲ್‌ ನಿಯಮ).

ಇತ್ತಂಡಗಳು ಈವರೆಗೆ 26 ಸಲ ಏಕದಿನದಲ್ಲಿ ಮುಖಾಮುಖೀ ಯಾಗಿವೆ. ದಕ್ಷಿಣ ಆಫ್ರಿಕಾ 15ರಲ್ಲಿ ಗೆದ್ದರೆ, ಪಾಕಿಸ್ಥಾನ ಜಯಿಸಿದ್ದು 4ರಲ್ಲಿ ಮಾತ್ರ. ಉಳಿದ 7 ಪಂದ್ಯಗಳಲ್ಲಿ ಸ್ಪಷ್ಟ ಫ‌ಲಿತಾಂಶ ದಾಖಲಾಗಿಲ್ಲ.

ಸಂಭಾವ್ಯ ತಂಡ
ಪಾಕಿಸ್ಥಾನ
ಫ‌ಕಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಆಜಂ, ಮೊಹಮ್ಮದ್‌ ಹಫೀಜ್‌, ಸಫ‌ìರಾಜ್‌ ಅಹ್ಮದ್‌ (ನಾಯಕ), ಶೋಯಿಬ್‌ ಮಲಿಕ್‌/ ಹ್ಯಾರಿಸ್‌ ಸೊಹೈಲ್‌, ಇಮಾದ್‌ ವಾಸಿಮ್‌, ಶಾದಾಬ್‌ ಖಾನ್‌, ಮೊಹಮ್ಮದ್‌ ಆಮಿರ್‌, ವಹಾಬ್‌ ರಿಯಾಜ್‌, ಹಸನ್‌ ಅಲಿ/ ಮೊಹಮ್ಮದ್‌ ಹಸ್ನೇನ್‌

ದಕ್ಷಿಣ ಆಫ್ರಿಕಾ
ಹಾಶಿಮ್‌ ಆಮ್ಲ, ಕ್ವಿಂಟನ್‌ ಡಿ ಕಾಕ್‌, ಫಾ ಡು ಪ್ಲೆಸಿಸ್‌ (ನಾಯಕ), ಐಡನ್‌ ಮಾರ್ಕ್‌ ರಮ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಆ್ಯಂಡಿಲ್‌ ಫೆಲುಕ್ವಾಯೊ, ಕ್ರಿಸ್‌ ಮಾರಿಸ್‌, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ, ಇಮ್ರಾನ್‌ ತಾಹಿರ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ