Updated at Sat,25th Feb, 2017 8:02PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹನಿಗಾರಿಕೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಸಿಎಂ ಹೇಳುವುದೂ ಅದೇ
ಪಿಎಂ ಹೇಳುವುದೂ ಅದೇ
ಏನು ಬೇಕಾದರೂ ಬೈರಿ
ಎಷ್ಟು ಬೇಕಾದರೂ ಬೈರಿ
ದಯವಿಟ್ಟು ನೋಡಬೇಡಿ
ಇನ್ನೊಬ್ಬರ ಡೈರಿ
  - ಎಚ್‌.ಡುಂಡಿರಾಜ್‌

ಘೋರ ತಪಸ್ಸಿಗೆ ಮೆಚ್ಚಿ
ಪ್ರತ್ಯಕ್ಷನಾದ ಈಶ್ವರ
ಕೇಳಿದ ಪಾರ್ವತಿಯ ಹತ್ತಿರ
ಏನು ಬೇಕು ವರ?
ಅವಳು ಹೇಳಿದಳು
ನಾನು ವಧು ನೀನೇ ವರ!
  - ಎಚ್‌. ಡುಂಡಿರಾಜ್‌

ಅಲ್ಲಿ ಕುರ್ಚಿಗಾಗಿ ಹೊಡೆದಾಟ
ಹರಿದ ಅಂಗಿ, ಜಾರಿದ ಲುಂಗಿ
ಥೂ ಅಸಹ್ಯ, ಹೇಸಿಗೆ
ಇಲ್ಲಿ  ಸದ್ದುಗದ್ದಲಲ್ಲದೆ
ಅಧಿಕಾರ ಹಸ್ತಾಂತರ ಆಗಿದೆ
ಚಳಿಗಾಲ ಮರೆಯಾಗಿ
ಕಾಲಿಡುತ್ತಿದೆ...

ಪ್ರಚಾರ ಪಡೆಯಲು
ಬಾಯಿಗೆ ಬಂದ ಹಾಗೆ
ಆರೋಪ ಮಾಡಬಾರದು
ಯಾರೂ ಹೈಕಮಾಂಡಿಗೆ
ಕಪ್ಪಕೊಡುವುದಿಲ್ಲ
ಡೈರಿಯಲ್ಲಿ ಬರೆದು!
- ಎಚ್‌. ಡುಂಡಿರಾಜ್‌

ವರ್ಷಕ್ಕೊಮ್ಮೆ ಐಪಿಎಲ್‌
ಆಟಗಾರರ ಹರಾಜು.
ದಿನವೂ ಇರುತ್ತದೆ
ಹಗರಣದ ಸುದ್ದಿ
ಆರೋಪ ಪ್ರತ್ಯಾರೋಪ
ರಾಜಕಾರಣಿಗಳ
ಮಾನ ಹರಾಜು!
- ಎಚ್‌. ಡುಂಡಿರಾಜ್‌

ನಿನ್ನೆ ಜಗಳ
ಇಂದು ರಾಜಿ
ನಾಳೆ ಪುನಃ ಕಲಹ
ಒಡೆಯುವುದೂ ಅದೇ
ಜೋಡಿಸುವುದೂ ಅದೇ
ಅಧಿಕಾರದ ದಾಹ!
  - ಎಚ್‌. ಡುಂಡಿರಾಜ್‌

ಜ್ಯೋತಿಷಿಗಳ ಪ್ರಕಾರ
ಇಸ್ರೋ ಯಶಸ್ಸಿಗೆ ಕಾರಣ
ಅತ್ಯಂತ ಸರಳ
ತುಂಬಾ ಚೆನ್ನಾಗಿತ್ತು
ವಿಜ್ಞಾನಿಗಳ ಮತ್ತು ಎಲ್ಲ
104 ಉಪಗ್ರಹಗಳ
ಗ್ರಹಬಲ!
- ಎಚ್‌. ಡುಂಡಿರಾಜ್‌

ಈಗಲೂ ಇದೆ
ಆಂಗ್ಲರು ಕಲಿಸಿದ
ಒಡೆದು ಆಳುವ ಧೋರಣೆ
ಇತ್ತೀಚಿನ
ಉದಾಹರಣೆ
ಕಸ ವಿಂಗಡನೆ!
- ಎಚ್‌. ಡುಂಡಿರಾಜ್‌

  ಬಯಸಿದ್ದು ಸಿಎಂ ಹುದ್ದೆ
ಸಿಕ್ಕಿದ್ದು ಜೈಲು ರಾಗಿಮುದ್ದೆ
ಕೊನೆಗೂ ಕಣ್ತೆರೆದ ಲಾ (Law)
ಸೋತಳು ಶಶಿಕಲಾ
ಇನ್ನಾದರೂ ಸುಮ್ಮನಿರುತ್ತಾಳಾ
ಜಯಲಲಿತಾಳ
ಬೆನ್ನು ಹತ್ತಿದ...

ದುಡ್ಡೇ ದೊಡ್ಡಪ್ಪ
ಅರ್ಹತೆ ಚಿಕ್ಕಪ್ಪ
ಹುದ್ದೆ ಬೇಕಾದ್ರೆ
ಕೊಡಲೇ ಬೇಕಪ್ಪ
ಎಲ್ರೂ ಕೊಡ್ತಾರೆ
ಹೈಕಮಾಂಡಿಗೆ ಕಪ್ಪ
ಅದೇನ್‌ ತಪ್ಪಾ?
ತಪ್ಪು ಅನ್ನೋನೆ ಬೆಪ್ಪ!...

Back to Top