Updated at Tue,30th May, 2017 5:25PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಶುಭನುಡಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಶ್ರೀಮಂತಿಕೆ ಸ್ನೇಹಿತರನ್ನು ಕರೆತರುತ್ತದೆ, ಅದೇ ಬಡತನ ಸ್ನೇಹಿತರ ವರ್ತನೆ, ಗುಣಗಳನ್ನು ತೋರಿಸುತ್ತದೆ.

ಸಾಧನೆಯೇ ಮಾತನಾಡುವಂತಾಗಬೇಕು ಹೊರತು, ಮಾತನಾಡುವುದೇ ಸಾಧನೆಯಾಗಬಾರದು.

ಗೆಲ್ಲುವ ಇಚ್ಛೆ ದೊಡ್ಡದಿದ್ದಾಗ ವೈಫ‌ಲ್ಯಗಳೆಲ್ಲವೂ ಚಿಕ್ಕವೆನಿಸುತ್ತವೆ.ಗುರಿಯಿಂದ ದೃಷ್ಟಿ ಕದಲಿಸದಿರಿ. 

ಯಶಸ್ಸಿನೆಡೆಗಿನ ಮಾರ್ಗದಲ್ಲಿ ವೈಫ‌ಲ್ಯದ ಅಲೆಗಳೂ ಜೋರಾಗಿರುತ್ತವೆ. ಸಂಯಮವೇ ಸಾಧನೆಯ ಬುನಾದಿ.

ಪಾಸಿಟಿವ್‌ ಯೋಚನೆಯೇ ಯಶಸ್ಸಿಗೆ ದಾರಿ. ಋಣಾತ್ಮಕ ಮನಸ್ಸಿನಿಂದ ಗುಣಾತ್ಮಕ ಫ‌ಲಿತಾಂಶ ಪಡೆಯಲಾಗದು.

ಬದಲಾವಣೆಯು ಆರಂಭದಲ್ಲಿ ಕಷ್ಟಕರವಾಗಿ, ಮಧ್ಯದಲ್ಲಿ ಗೊಂದಲಮಯವಾಗಿ, ಕೊನೆಯಲ್ಲಿ ಅದ್ಭುತವಾಗಿ ಇರುತ್ತದೆ.

ಯಾವ ಜ್ಞಾನವು ವ್ಯಕ್ತಿಯ ಗುಣದ ಮೇಲೆ ಪರಿಣಾಮ ಬೀರುವುದಿಲ್ಲವೋ, ಅದು ನಿರರ್ಥಕ.

"ಗುರಿ'ಯೊಂದಿಗೆ ಹಾಸಿಗೆಯಿಂದ ಎದ್ದವನು ಮಾತ್ರ,ಸಂತೃಪ್ತಿಯೊಂದಿಗೆ ರಾತ್ರಿ ನಿದ್ದೆಗೆ ಜಾರಬಲ್ಲ.

ಜೀವನವೆಂಬ ಪುಸ್ತಕದಲ್ಲಿ ಹಳೆಯ ಅಧ್ಯಾಯವನ್ನೇ ಓದುತ್ತಾ ಕುಳಿತರೆ ಹೊಸ ಅಧ್ಯಾಯ ಆರಂಭವಾಗುವುದಿಲ್ಲ!

ಸಮಯವನ್ನು ನೋಡುತ್ತಾ ನಿಲ್ಲಬೇಡಿ.ಅದೇನು ಮಾಡುತ್ತದೋ ಹಾಗೆ ಮಾಡಿ. ಮುಂದೆ ಸಾಗಿ!

Back to Top