Updated at Mon,24th Jul, 2017 9:14PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭವಿಷ್ಯ

ಮೇಷ
ದೈವಾನುಗ್ರಹದ ಪ್ರತಿಕೂಲತೆ ಅಭಿವೃದ್ಧಿಗೆ ಆಗಾಗ ಭಂಗ ತಂದರೂ ಕೇತು ಲಾಭ ಸ್ಥಾನದಿಂದ ಮುನ್ನಡೆಗೆ ಅಡ್ಡಿಯಾಗದು. ವಿಘ್ನದಿಂದಲೇ ಕಾರ್ಯಾನುಕೂಲತೆಯಾಗುತ್ತದೆ. ಗೃಹ ಸೌಖ್ಯವನ್ನು ಕಾಪಾಡಿಕೊಳ್ಳಿರಿ. ಪತ್ನಿಯ ಆರೋಗ್ಯಭಾಗ್ಯ ಆಗಾಗ ಕೈಕೊಡಲಿದೆ. ಜಾಗ್ರತೆ ವಹಿಸಬೇಕಾದೀತು. ತೈಲ ವಸ್ತುಗಳ ವ್ಯವಹಾರಗಳು ಲಾಭಕರವಾಗಲಿದೆ. ಉದ್ಯೋಗಿಗಳಿಗೆ ಉದ್ಯೋಗದಲ್ಲಿ ವರ್ಗಾವಣೆ ಇದ್ದರೂ ಹೆಚ್ಚಿನ ಸಮಸ್ಯೆ ಇರದು. ಯಾವುದಕ್ಕೂ ಕಾದುನೋಡುವ ನೀತಿಯನ್ನು ಅನುಸರಿ ಸಿದಲ್ಲಿ ಪ್ರಗತಿ ಇದೆ. ಶುಭ ವಾರ: ಚಂದ್ರ, ಕುಜ, ಗುರುವಾರ.
ವೃಷಭ
ವಿದ್ಯಾರ್ಥಿಗಳ ಕಾಲೇಜು ವ್ಯಾಸಂಗದಲ್ಲಿ ನಿರೀಕ್ಷಿತ ಫ‌ಲಿತಾಂಶ ಸಮಾಧಾನ ತಂದೀತು. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬಂದು ಮುನ್ನಡೆಗೆ ಸಾಧಕವಾಗುತ್ತದೆ. ಕೃಷಿ-ಗುಡಿ ಕೈಗಾರಿಕಾ ಉದ್ಯಮದಲ್ಲಿ ಚೇತರಿಕೆ ಯಿಂದ ಆದಾಯ ತಂದೀತು. ಚಿತ್ರೋದ್ಯಮದಲ್ಲಿ ನಿರೀಕ್ಷೆ ಲಾಭದಾಯಕವಾದೀತು. ಆದರೂ ಕಷ್ಟನಷ್ಟಗಳನ್ನು ಸಮಭಾವದಿಂದ ಸ್ವೀಕರಿಸಬೇಕಾದೀತು. ಅನಾವಶ್ಯಕ ಖರ್ಚುವೆಚ್ಚ ದುಂದುಗಾರಿಕೆಗಳ ಬಗ್ಗೆ ಹಿಡಿತವಿರಲಿ. ವೃತ್ತಿರಂಗದಲ್ಲಿ ಸತತ ಪರಿಶ್ರಮ, ಆತ್ಮವಿಶ್ವಾಸ ಮುನ್ನಡೆ ತಂದೀತು. ಮುಂದುವರೆಯಿರಿ. ಶುಭ ವಾರ: ಶುಕ್ರ, ಶನಿ, ಚಂದ್ರವಾರ.
ಮಿಥುನ
ತಾತ್ಕಾಲಿಕ ವೃತ್ತಿಯವರಿಗೆ ಉದ್ಯೋಗ ಖಾಯಂ ಆಗಲಿದೆ. ಅವಿವಾಹಿತ ಪ್ರಯತ್ನಫ‌ಲಗಳು ಸಾಕಾರಗೊಳ್ಳಲಿವೆ. ಕೃಷಿಕಾರ್ಯ, ತೋಟದ ಕೆಲಸಕ್ಕಾಗಿ ಅಧಿಕ ಖರ್ಚುಗಳು ತೋರಿಬಂದಾವು. ಮೇಲಧಿಕಾರಿಗಳ ಸಹಕಾರ ಮುನ್ನಡೆಗೆ ಸಾಧಕವಾಗುತ್ತದೆ. ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸಗಳು ಸಂತಸ ತಂದಾವು. ಮಕ್ಕಳ ಪ್ರೇಮಕಥೆ ಹಗರಣಕ್ಕೆ ಕಾರಣವಾದಾವು. ಗೃಹ ಬದಲಿಸುವ ಚಿಂತನೆ ಸದ್ಯ ಉತ್ತಮವಲ್ಲ. ಪ್ರಯಾಣದಲ್ಲಿ ಜಾಗ್ರತೆ ವಹಿಸಬೇಕಾದೀತು. ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ತುಸು ಸಮಾಧಾನ ತಂದೀತು. ಆರೋಗ್ಯ, ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಶುಭ ವಾರ: ಬುಧ, ಗುರು, ಭಾನುವಾರ.
ಕಟಕ
ಮಕ್ಕಳ ವಿದ್ಯಾಭ್ಯಾಸದಲ್ಲಿ ಸಮಾಧಾನ ಸಿಗದು. ವೃತ್ತಿರಂಗದಲ್ಲಿ ಅಭಿವೃದ್ಧಿ ಇದ್ದರೂ ಹಲವು ರೀತಿಯಲ್ಲಿ ಕ್ಲೇಶಗಳು ಎದುರಾದಾವು. ತಾತ್ಕಾಲಿಕ ವೃತ್ತಿ ರಂಗದಲ್ಲಿ ಉದ್ಯೋಗಿಗಳು ಇದ್ದ ಹಾಗೆ ಮುಂದುವರಿಯಬೇಕಾದೀತು. ಕಫ‌, ಶೀತ, ಶ್ವಾಸಕೋಶಗಳಂತಹ ಅನಾರೋಗ್ಯಕ್ಕಾಗಿ ಖರ್ಚು ತಂದೀತು. ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮಿತಿಮೀರಲಿದೆ. ಸಮಾಧಾನವಿರಲಿ. ಸ್ಥಿರಾಸ್ತಿ ಮಾರಾಟದಲ್ಲಿ ಲಾಭ ತಂದರೂ ಸಮಾಧಾನವಿರದು. ಮಂಗಳಕಾರ್ಯಗಳ ಮಾತುಕತೆ ಅಡೆತಡೆಗಳಿಂದ ಮುಂದುವರಿಯುತ್ತದೆ. ಪಾಲು ಬಂಡವಾಳದಲ್ಲಿ ಜಾಗ್ರತೆ ಇರಲಿ. ಶುಭ ವಾರ: ಚಂದ್ರ, ಕುಜ, ಗುರುವಾರ.
ಸಿಂಹ
ಆರ್ಥಿಕವಾಗಿ ಎಲ್ಲಾ ರೀತಿಯಲ್ಲಿ ಖರ್ಚುಗಳು ತೋರಿಬಂದರೂ ಸಂತೃಪ್ತಿ ತಂದೀತು. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಮುನ್ನಡೆಗೆ ಸಾಧಕವಾಗ ಲಿದೆ. ಹಿತಶತ್ರುಗಳಿಂದ ಅಪವಾದ ಭೀತಿ ತಂದೀತು. ಮಾನಸಿಕವಾಗಿ ನಿರಂತರ ಕಿರಿಕಿರಿ ಇದ್ದರೂ ನಿಮ್ಮ ಆತ್ಮವಿಶ್ವಾಸ ನಿಮಗೆ ಶ್ರೀರಕ್ಷೆಯಾಗಲಿದೆ. ಸಂಚಾರದಲ್ಲಿ ಅತೀ ಜಾಗ್ರತೆ ಅಗತ್ಯವಿದೆ. ಸಾಂಸಾರಿಕವಾಗಿ ಸಂತಸದ ದಿನಗಳಾದಾವು. ಅವಿವಾಹಿತರಿಗೆ ನಿಶ್ಚಯ ಮಾತುಕತೆ ನಡೆಯಲಿದೆ. ಸಂಚಾರದಲ್ಲಿ ಅಪಘಾತ ಭಯ, ಮೂಳೆ ಮುರಿತಗಳಾದಾವು.ಧರ್ಮಕಾರ್ಯಗಳು ನಿರ್ವಿಘ್ನವಾಗಿ ನಡೆದುಹೋದೀತು. ಶುಭ ವಾರ: ಭಾನು, ಶುಕ್ರ, ಕುಜವಾರ.
ಕನ್ಯಾ
ಅಪಾರ ನಿರೀಕ್ಷೆಗಳಿಗೆ ಆಶಾಭಂಗವಾದೀತು ಯಾವುದೇ ವಿಚಾರದಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾದೀತು. ಗೃಹ ಸೌಖ್ಯಕ್ಕೆ ಆಗಾಗ ಕಿರಿ ಕಿರಿ ತಂದೀತು. ಇಲೆಕ್ಟ್ರಾನಿಕ್ಸ್‌ ಉಪಕರಣದ ವ್ಯವಹಾರ-ಕಟ್ಟಡ ರಚನೆಗೆ ಕೈ ಹಾಕದಿರಿ. ಸೂಕ್ತ ವಿಮರ್ಶೆಯ ವಿಚಾರದಿಂದ ದುಡಿಮೆಯಲ್ಲಿ ಧನಲಾಭ ತಂದೀತು. ವ್ಯಾಪಾರೋದ್ಯಮಕ್ಕೆ ವಾರಾಂತ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಗೃಹಿಣಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದೀತು. ಎಣಿಕೆಗೆ ವಿರುದ್ಧವಾಗಿಯೇ ಎಲ್ಲಾ ವಿಚಾರಗಳು ನಡೆಯುವುದರಿಂದ ನಿರಾಶೆ ತಂದೀತು. ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಶುಭ ವಾರ: ಬುಧ, ಶುಕ್ರ, ಶನಿವಾರ.
ತುಲಾ
ನಷ್ಟ ಹೊಂದಿದ ಶತ್ರುವೂ ನಿಮಗೆ ಪೀಡೆ ಕೊಟ್ಟಾನು. ನಾನಾ ರೀತಿಯಲ್ಲಿ ಅಧಿಕ ಖರ್ಚುವೆಚ್ಚಗಳು ತೋರಿಬಂದೀತು. ವಿದ್ಯಾರ್ಥಿಗಳ ಫ‌ಲಿತಾಂಶ ನಿರಾಸೆ ತಂದೀತು. ಅವಿವಾಹಿತರು ಪ್ರಯತ್ನಬಲವನ್ನು ಹೆಚ್ಚಿಸು ವಂತಾದೀತು. ಧನದ ಚಿಂತೆ ಆಗಾಗ ಕಂಡುಬಂದೀತು. ದಾಯಾದಿಗಳಿಂದ ಅಪವಾದವನ್ನು ಹೊಂದುವಂತಾದೀತು. ಗೃಹದಲ್ಲಿ ವೈಯಕ್ತಿಕ ಕೆಲಸ ಕಾರ್ಯಕ್ಕಾಗಿ ಸಮಯ ಸಿಗದು. ಸಂಚಾರದಲ್ಲಿ ಅಪಘಾತ ಭಯ ತಂದೀತು. ಅನಿರೀಕ್ಷಿತ ಶುಭ ಸಮಾಚಾರದಿಂದ ಕಾರ್ಯ ಸಾಧನೆಗೆ ಮುನ್ನಡೆ ತಂದೀತು. ಶುಭ ವಾರ: ಶುಕ್ರ, ಶನಿ, ಭಾನುವಾರ.
ವೃಶ್ಚಿಕ
ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕ ಆದಾಯ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಕಾಲ. ನಿರೀಕ್ಷಿತ ಕಾರ್ಯ ಯೋಜನೆಗಳು ನಿಶ್ಚಿತ ರೂಪದಲ್ಲಿ ಕೈಗೂಡಲಿದೆ. ಚಿತ್ರ ನಿರ್ಮಾತೃ-ಕಮಿಶನ್‌ ವ್ಯಾಪಾರಿಗಳಿಗೆ ವಿಶೇಷ ರೀತಿಯಲ್ಲಿ ಧನಾಗಮನ ತಂದೀತು. ಅವಿವಾಹಿತರ ವೈವಾಹಿಕ ಸಂಬಂಧಗಳು ಕಂಕಣಬಲಕ್ಕೆ ಪೂರಕವಾಗಲಿದೆ. ಧಾರ್ಮಿಕ ಪ್ರಕ್ರಿಯೆಗಳಿಗೆ ಪರಿಪೂರ್ಣತೆ ಕಂಡುಬರುತ್ತದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ದೈವಾನುಗ್ರಹ ಸಾಧಕವಾಗಲಿದೆ. ಅನಿರೀಕ್ಷಿ ತ ದೂರ ಸಂಚಾರವಿದೆ. ಶುಭ ವಾರ: ಶನಿ, ಭಾನು, ಸೋಮವಾರ.
ಧನು
ಮುಂಗೋಪ, ಉದ್ವೇಗಗಳಿಂದ ಕಾರ್ಯಭಂಗವಾದೀತು. ತಾಳ್ಮೆ-ಸಮಾಧಾನದಿಂದ ಮುಂದುವರಿಯಿರಿ. ಹತ್ತುಹಲವು ಸಮಸ್ಯೆಗಳು ಗೃಹದಲ್ಲಿ ಕಂಡುಬರಲಿದೆ. ವಾಹನ ಖರೀದಿ, ಗೃಹ ನಿರ್ಮಾಣದಂತಹ ಚಿಂತನೆಗಳು ಹಿನ್ನಡೆಗೆ ಹರಿಯಲಿವೆ. ಕೊಟ್ಟ ಸಾಲ ಮರಳದೇ ಬಂಧುಗಳಿಂದ ಮಿತ್ರವರ್ಗದವರಿಂದ ಮನಸ್ತಾಪ ಅನುಭವಿಸುವಂತಾದೀತು. ದೇವತಾ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ದೊರ ಕಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಕೈತಪ್ಪುವ ಭೀತಿ ಕಂಡೀತು. ವಿದ್ಯಾರ್ಥಿಗಳಿಗೆ ನಿರಾಸೆಯಿಂದ ಉದಾಸೀನತೆ ಕಾಡಲಿದೆ. ಸ್ವಾಭಿಮಾನಕ್ಕಾಗಿ ಹೋರಾಟವಿದೆ. ಶುಭ ವಾರ: ಬುಧ, ಗುರು, ಶನಿವಾರ.
ಮಕರ
ಕೌಟುಂಬಿಕ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾದೀತು. ಕೈಗಾರಿಕೋದ್ಯಮಿಗಳಿಗೆ ಮಾರುಕಟ್ಟೆಯಲ್ಲಿ ಲಾಭ ತಂದೀತು. ನೂತನ ವಧೂವರರಿಗೆ ಮಧುಚಂದ್ರ ಭಾಗ್ಯಕ್ಕಾಗಿ ದೂರ ಸಂಚಾರವಿರುತ್ತದೆ. ಗೃಹ ನಿರ್ಮಾಣದ ಕಾರ್ಯದಲ್ಲಿ ಚೇತರಿಕೆ ತೋರಿಬಂದು ಸಮಾಧಾನ ತಂದೀತು. ಚಿನ್ನ-ಬೆಳ್ಳಿವರ್ತಕರು ಹೇರಳ ಲಾಭ ಗಳಿಸಿಯಾರು. ರಾಜಕೀಯ ಧುರೀಣರಿಗೆ ಶುಭ ಹಾಗೂ ಭಾಗ್ಯಾಭಿವೃದ್ಧಿಯ ವಾರವಿದು. ನೂತನ ಮಿತ್ರ ಲಾಭಾದಿಗಳಿಂದ ಸಂತೃಪ್ತಿ ದೊರಕಲಿದೆ. ಶುಭ ವಾರ: ಬುಧ, ಶುಕ್ರ, ಶನಿವಾರ.
ಕುಂಭ
ಯಾವುದೇ ಪರಿಸ್ಥಿತಿಯನ್ನು ಎದುರಿಸಿ ನಿಭಾಯಿಸಿ ಬದುಕಬಲ್ಲ ಪರಿಸ್ಥಿತಿ ನಿಮಗಿರುತ್ತದೆ. ಧನಾದಾಯವು ಉತ್ತಮವಿದ್ದರೂ ವಿಪರೀತ ಖರ್ಚು ವೆಚ್ಚಗಳಿಂದ ಹಿನ್ನಡೆ ತಂದೀತು. ಕಾಳಜಿ ವಹಿಸಿರಿ. ಉದ್ಯೋಗಸ್ಥರಿಗೆ ಸಹೋ ದ್ಯೋಗಿಗಳಿಂದ ಕಿರಿಕಿರಿ. ಸಂಚಾರದಲ್ಲಿ ಅನಿರೀಕ್ಷಿತ ಅವಘಡಗಳು ತೋರಿಬಂದಾವು. ಧರ್ಮಕಾರ್ಯಗಳಿಗೆ ದೇಣಿಗೆ ಸಂದಾಯ, ಪ್ರವಾಸ -ಯಾತ್ರೆಗಳಿಂದ ಆರ್ಥಿಕ ಸ್ಥಿತಿಯು ಏರುಪೇರಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕುಂಠಿತಸ್ಥಿತಿ ಅಸಮಾಧಾನ ತಂದೀತು. ಶುಭ ವಾರ: ಕುಜ, ಗುರು, ಶನಿವಾರ.
ಮೀನ
ನೆರೆಹೊರೆಯವರೊಡನೆ ಕಲಹ ತಂದೀತು. ವ್ಯಾಪಾರ, ವ್ಯವಹಾರ ಗಳು ಕುಂಟುತ್ತಾ ನಡೆಯಲಿವೆ. ಆಕಸ್ಮಿಕ ಧನಲಾಭದಿಂದ ಸಂತಸ ಕ್ಷಣಿಕವಾಗಲಿದೆ. ಕೋರ್ಟು - ಕಚೇರಿ ಕಾರ್ಯಭಾಗದಲ್ಲಿ ಹಿನ್ನಡೆ ತಂದೀತು. ಹಿರಿಯರ ಸೇವಾ ಶುಶ್ರೂಷೆಗಾಗಿ ಧನವ್ಯಯ ತಂದೀತು. ಅವಿವಾಹಿತರಿಗೆ ಕಂಕಣಬಲ, ನಿರುದ್ಯೋಗಿಗಳಿಗೆ ಉದ್ಯೋಗಲಾಭ ಒದಗಿಬಂದರೂ ಸದುಪಯೋಗಿಸಿಕೊಂಡಲ್ಲಿ ಮಾತ್ರ ಅಭಿವೃದ್ಧಿ ತಂದೀತು. ಆರೋಗ್ಯ ಆಗಾಗ ಕೊಂಚ ಹದಗೆಟ್ಟಿàತು. ಕಾಳಜಿ ವಹಿಸಬೇಕು. ಸಕಾಲಿಕ ಪ್ರಜ್ಞೆ ಸಮಸ್ಯೆಯನ್ನು ನಿವಾರಿಸಲಿದೆ. ಶುಭ ವಾರ: ಚಂದ್ರ, ಕುಜ, ಬುಧವಾರ.
Back to Top